Get Updates
Get notified of breaking news, exclusive insights, and must-see stories!

Kantara Chapter 1: ದೈವಗಳ ಅನುಕರಣೆ: ಮಹತ್ವದ ಪೋಸ್ಟ್‌ ಹಂಚಿಕೊಂಡ ಕಾಂತಾರ ಸಿನಿಮಾ ತಂಡ

Kantara Chapter 1: ಕಾಂತಾರ ಚಾಪ್ಟರ್ 01 ಸಿನಿಮಾ ಇದೀಗ ದೇಶದಾದ್ಯಂತ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡುತ್ತಿದೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ವಿವಿಧ ಭಾರೀ ಬಜೆಟ್ ಹಾಗೂ ಅದ್ಧೂರಿ ಬಜೆಟ್ ಸಿನಿಮಾಗಳಿಗೆ ಈ ಸಿನಿಮಾ ಪೈಪೋಟಿ ಕೊಡುತ್ತಿದೆ. ಈ ಸಿನಿಮಾ ಹಲವು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಮುನ್ನುಗ್ಗುತ್ತಿರುವಾಗಲೇ ಕಾಂತಾರ ಚಾಪ್ಟರ್ 01 ಚಿತ್ರತಂಡ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ.

ಪ್ರೇಕ್ಷಕರೇ..ಅವಾಹನೆ ಮಾಡಿಕೊಳ್ಳುವುದನ್ನು ಬಿಡಿ ಎಂದು ಚಿತ್ರತಂಡ, ನಟ & ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ ಮನವಿ ಮಾಡಿದೆ. ಸಿನಿಪ್ರಿಯರೇ,

Kantara Chapter 1 Team Warns Legal Action Against Those Imitating Gods

ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗೆಗಿನ ಅಪಾರ ಗೌರವ ಮತ್ತು ಅಚಲ ಶ್ರದ್ಧೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನೆಮಾದಲ್ಲಿ ತೋರಿಸಿದ್ದೇವೆ.

ತುಳು ಮಣ್ಣಿನ ಮಹತ್ವ ಹಾಗೂ ಪರಂಪರೆಯನ್ನು ಇಡೀ ಜಗತ್ತಿಗೆ ಸಾರುವಲ್ಲಿ ನಮ್ಮದ್ದಾದ ಕೊಡುಗೆಯನ್ನು ಕೊಟ್ಟಿದ್ದೇವೆ. ಆದರೆ ಕೆಲವರು ಸಿನೆಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ರೀತಿಯ ವರ್ತನೆಗಳನ್ನು ಮಾಡುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರವೂ ಹೌದು, ಅಕ್ಷಮ್ಯ ಅಪರಾಧವೂ ಹೌದು. ಇಂತಹ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ. ಆದುದರಿಂದ ಚಿತ್ರಮಂದಿರ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಯಾರೂ ದೈವಗಳನ್ನು ಅನುಕರಣೆ ಮಾಡಬೇಡಿ ಎಂದು ಚಿತ್ರತಂಡವು ಮನವಿ ಮಾಡಿದೆ.

ಇನ್ನು ಈಚೆಗೆ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದ ಸಿನಿಮಾ ತಂಡವು, ಆತ್ಮೀಯ ಕಾಂತಾರ ಕುಟುಂಬ ಮತ್ತು ಸಿನಿಮಾಭಿಮಾನಿಗಳೇ.. 'ಕಾಂತಾರ' ಕೇವಲ ಒಂದು ಸಿನಿಮಾ ಅಲ್ಲ; ಅದು ನಮ್ಮ ಸಂಸ್ಕೃತಿ, ನಮ್ಮ ನೆಲದ ಕಥೆ. ಆರಂಭದಿಂದಲೂ ಈ ಪಯಣ ನಮ್ಮ ಜೊತೆ ನಿಮ್ಮದೂ ಕೂಡ . ನಿಮ್ಮ ಅಪಾರ ಪ್ರೀತಿ, ಬೆಂಬಲವೇ ಈ ಚಿತ್ರವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಆ ಋಣ ಯಾವಾಗಲೂ ನಮ್ಮ ಮೇಲಿರುತ್ತದೆ. ಈಗ ನಮ್ಮದೊಂದು ವಿನಂತಿ: ಈ ಚಿತ್ರದಲ್ಲಿ ತೆರೆಯ ಮುಂದೆ, ತೆರೆಯ ಹಿ೦ದೆ ಇರುವ ಸಾವಿರಾರು ಜನರ ಕನಸು ಇದೆ.

ಪೈರಸಿಯಿಂದ ಈ ಕನಸನ್ನು ಪೋಲಾಗಲು ಬಿಡಬೇಡಿ, ದಯವಿಟ್ಟು ಚಿತ್ರಮಂದಿರಗಳಲ್ಲಿ ಯಾವುದೇ ಚಿತ್ರದ ದೃಶ್ಯವನ್ನು ಚಿತ್ರೀಕರಿಸಬೇಡಿ ಅಥವಾ ಹಂಚಿಕೊಳ್ಳಬೇಡಿ. ಸಣ್ಣ ವಿಡಿಯೋ ತುಣುಕೂ ಸಿನಿಮಾದ ಅಸಲಿ ಮಾಯೆಯನ್ನು ಮಲಿನ ಮಾಡುತ್ತದೆ. ಈ ಸಂಭ್ರಮ ದೊಡ್ಡ ಪರದೆಯಲ್ಲಿಯೇ ಇರಲಿ. ಈ ಅದ್ಭುತ ಪ್ರಯಾಣವನ್ನು ಒಟ್ಟಾಗಿ ಕಾಪಾಡೋಣ. 'ಕಾಂತಾರ'ದ ಅನುಭವ ಎಂದೆಂದಿಗೂ ಚಿತ್ರಮಂದಿರಕ್ಕೆ ಮೀಸಲಾಗಲಿ ಎಂದೂ ಹೇಳಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+