Kantara Chapter 1: ರಿಷಬ್ ಸಿನಿಮಾ ನೋಡಿ ಎಲ್ಲ ನಿರ್ದೇಶಕರು ನಾಚಿಕೆ ಪಡಬೇಕು: ಆರ್‌ಜಿವಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ರಿಷಬ್ ಸಿನಿಮಾಗೆ ಫಿದಾ ಆಗಿದ್ದು, ತಮ್ಮದೇ ಶೈಲಿಯಲ್ಲಿ ಅಭಿನಂದಿಸಿದ್ದಾರೆ. ಕಾಂತಾರ ಒಂದು ಅದ್ಭುತ, ಭಾರತದ ಎಲ್ಲ ಸಿನಿಮಾ ಚಲನಚಿತ್ರ ನಿರ್ಮಾಪಕರು ಅಜೇಯ ಪ್ರಯತ್ನವನ್ನು ನೋಡಿ ನಾಚಿಕೆಪಡಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ಮತ್ತು ಅವರ ತಂಡವು ಬಿಜಿಎಂ, ಧ್ವನಿ ವಿನ್ಯಾಸ, ಸಿನಿಮಾಟೋಗ್ರಫಿ, ನಿರ್ಮಾಣ ವಿನ್ಯಾಸ ಮತ್ತು ವಿಎಫ್‌ಎಕ್ಸ್ ಅನ್ನು ಸೇರಿಸಿದೆ. ಬೋನಸ್ ಆಗಿರುವ ವಿಷಯವನ್ನು ಮರೆತು, ಅವರ ಪ್ರಯತ್ನ ಮಾತ್ರ ಕಾಂತಾರವನ್ನು ಬ್ಲಾಕ್‌ಬಸ್ಟರ್ ಆಗಲು ಅರ್ಹವಾಗಿದೆ. ಈ ಸೃಜನಶೀಲ ತಂಡವನ್ನು ರಾಜಿಯಾಗದಂತೆ ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲಂಸ್‌ಗೆ ಹ್ಯಾಟ್ಸ್‌ಆಫ್ ಎಂದು ಆರ್‌ಜಿವಿ ಕೊಂಡಾಡಿದ್ದಾರೆ. ರಿಷಬ್ ನೀವು ಶ್ರೇಷ್ಠ ನಿರ್ದೇಶಕರೋ ಅಥವಾ ಶ್ರೇಷ್ಠ ನಟರೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ರಿಷಬ್, ನಾನು ಕೇವಲ ಸಿನಿಮಾ ಪ್ರೇಮಿ ಸರ್. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು ಸರ್ ಎಂದಿದ್ದಾರೆ.

ರಾಮ್ ಗೋಪಾಲ್ ವರ್ಮ ಮತ್ತೊಂದು ಪೋಸ್ಟ್ ಮೂಲಕ ರಿಷಬ್ ಬಗ್ಗೆ ಮಾತನಾಡಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನೀವು ಸಿನಿಮಾ ಪ್ರೇಮಿ ಅಲ್ಲ, ಆದರೆ ನೀವು ಸಿನಿಮಾ ****. ಏಕೆಂದರೆ ನೀವು ನಿಮ್ಮ ಕಾಂತಾರ ಅಧ್ಯಾಯ 1 ಸಿನಿಮಾದೊಂದಿಗೆ ನಿಜವಾಗಿಯೂ ಸಿನಿಮಾ ಮಾಡುವುದು ಹೇಗೆ ಎಂದು ತೋರಿಸುವ ಮೂಲಕ ನಮ್ಮೆಲ್ಲರ ಸಿನಿಮಾ ನಿರ್ಮಾಪಕರನ್ನು *** ಮಾಡಿದ್ದೀರಿ. ನೀವು ನಿರ್ಮಾಣಕ್ಕೆ ಕಾರಣವಾದ ಅವ್ಯವಸ್ಥೆಯ ಚಳುವಳಿಯನ್ನು ಪ್ರಾರಂಭಿಸಿದ್ದೀರಿ. ಅಂದರೆ ಮೂಲತಃ ಹೊಸ ರೀತಿಯ ಸಿನಿಮಾಗೆ ಹೊಸ ಜನ್ಮಕ್ಕೆ ಕಾರಣವಾಗುತ್ತದೆ. ನಾವೆಲ್ಲರೂ ಸಿನಿಮಾಟಿಕ್ ಮೆಗಾ *** ಅನ್ನು ಹೊಂದಿದ್ದೇವೆ ಎಂದು ತಮ್ಮದೇ ಶೈಲಿಯಲ್ಲಿ ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.
ಕಾಂತಾರ ಕಲೆಕ್ಷನ್ ಎಷ್ಟು?
ಕಾಂತಾರ ಚಾಪ್ಟರ್ 1 ಚಿತ್ರದ ಮೊದಲ ದಿನ ಭಾರತದಲ್ಲಿ 61.85 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದರಲ್ಲಿ ಕನ್ನಡ ಆವೃತ್ತಿ 19.6 ಕೋಟಿ ರೂ, ತೆಲುಗು 13 ಕೋಟಿ ರೂ, ಹಿಂದಿ 18.5 ಕೋಟಿ ರೂ, ತಮಿಳು 5.5 ಕೋಟಿ ಹಾಗೂ ಮಲಯಾಳಂ 5.25 ಕೋಟಿ ರೂ. ಸಂಗ್ರಹಿಸಿದೆ. ಎರಡನೇ ದಿನದ ಭಾರತದ ನಿವ್ವಳ ಸಂಗ್ರಹ ಸುಮಾರು 46 ಕೋಟಿ ರೂ. ಎಂದು ವರದಿಯಾಗಿದೆ. ಈ ಸಿನಿಮಾ ಕೇವಲ ಎರಡು ದಿನಗಳಲ್ಲಿ ಭಾರತದಲ್ಲಿ 100 ಕೋಟಿ ಕಲೆಕ್ಷನ್ ದಾಟಿ ದಾಖಲೆ ಬರೆದಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಈ ಸಿನಿಮಾದ ಭಾರತದ ನಿವ್ವಳ ಸಂಗ್ರಹ 6.83 ಕೋಟಿ ರೂ.ಗಳಾಗಿದೆ. ಇದರೊಂದಿಗೆ ರಿಷಬ್ ಶೆಟ್ಟಿ ಸಿನಿಮಾ ಮೂರನೇ ದಿನ ಭಾರತದಲ್ಲಿ ಸುಮಾರು 115 ಕೋಟಿ ಕಲೆಕ್ಷನ್ ಮಾಡಿದೆ. ಈ ಆರಂಭಿಕ ಯಶಸ್ಸು 125 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಬಜೆಟ್ ಚಿತ್ರಕ್ಕೆ ಅನಿರೀಕ್ಷಿತ ಆದಾಯವನ್ನು ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications