Rishab Shetty: ರಿಶಬ್ ಶೆಟ್ಟಿಯ 'ಕಲರಿಪಯಟ್ಟು' ಫೋಟೋ ವೈರಲ್: ಶೆಟ್ರೆ ಇದು ನೀವಾ? ಎಂದ ಫ್ಯಾನ್ಸ್
ಬೆಂಗಳೂರು, ಆಗಸ್ಟ್ 22: ಬಾಲಿವುಡ್ ಸಿನಿಮಾಗಳ ಕುರಿತು ಹೇಳಿಕೆ ನೀಡಿದ ನಂತರ ಹೆಚ್ಚು ಚರ್ಚೆಯಲ್ಲಿರುವ ನಟ, ನಿರ್ದೇಶಕ ರಿಶಬ್ ಶೆಟ್ಟಿಯವರ ಕಾಂತಾರ ದೊಡ್ಡ ಸಕ್ಸಸ್ ಆಗಿದೆ. 'ಕಾಂತಾರ' ಸಿನಿಮಾಗೆ ಎರಡು ಪ್ರಶಸ್ತಿಗಳು ಬಂದಿವೆ. ಸದ್ಯ ರಿಶಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1'ರ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದಾರೆ. ಇದೀಗ ಇದೇ ಸಿನಿಮಾಗಾಗಿ ನಡೆಸಿರುವ ತಯಾರಿಯ ಫೋಟೋ ವೈರಲ್ ಆಗುತ್ತಿದೆ.
ಹೌದು, ನಟ ರಿಶಬ್ ಶೆಟ್ಟಿಯವರು 'ಕಾಂತಾರ ಚಾಪ್ಟರ್ 1' ಶೂಟಿಂಗಾಗಿ ಕಲರಿಪಯಟ್ಟು ಕಲಿಯುತ್ತಿದ್ದಾರೆ. ಕೈಯಲ್ಲಿ ಖಡ್ಗ, ಗುರಾಣಿ (ಮಣಿಕಟ್ಟು) ಹಿಡಿದು ಅಭ್ಯಾಸ ಮಾಡುತ್ತಿರುವ ಫೋಟೋ ಅನ್ನು ಸ್ವತಃ ನಟ ರಿಶಬ್ ಶೆಟ್ಟಿ ಇನ್ಸಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೆಂಪು ಲಿಂಗಿ, ಕಪ್ಪು ಬನಿಯನ್ ನಲ್ಲಿ ಕತ್ತಿ ಹಿಡಿದು ಯುದ್ಧಾಭ್ಯಾಸ ರೀತಿಯಲ್ಲಿ ಕಲರಿ ಪಟ್ಟು ಕಲಿಯುತ್ತಿರುವುದು ಫೋಟೋದಲ್ಲಿ ಕಾಣಿಸುತ್ತದೆ. ಈ ಫೋಟೋ ನೋಡಿದ ಅವರ ಅಭಿಮಾನಿಗಳು 'ನಟ ಎಂದರೆ ಹೀಗಿರಬೇಕು. ಉತ್ತಮ ನಿರ್ದೇಶಕ, ನಟ ಎಂದು ಹೊಗಳಿದ್ದಾರೆ. ಕೆಲವರಂತೂ 'ಶೆಟ್ರೆ ಇದು ನೀವಾ' ಅಂತಲೂ ಆಶ್ಚರ್ಯದಿಂದ ಕೇಳಿದ್ದಾರೆ. ವಾವ್ ಶೆಟ್ರೆ, ಎಂತ ಹೊಸ ಸುದ್ದಿ' ಎಂದು ಕಾಮೆಂಟ್ ಮಾಡಿದ್ದಾರೆ.
ಕಾಂತಾರ ಮೇಲೆ ಅಪಾರ ನಿರೀಕ್ಷೆ
ಕಾಂತಾರ ಸಿನಿಮಾಗೆ ರಾಷ್ಟ್ರಪ್ರಶಸ್ತಿಗಳು ಘೋಷಣೆ ಆದ ಬಳಿಕ ಈ ಸಿನಿಮಾ ಮೇಲಿನ ನಿರೀಕ್ಷೆಗಳು ಆಕಾಶದಷ್ಟು ಹೆಚ್ಚಾಗಿವೆ. ರಿಶಬ್ ಶೆಟ್ಟಿಯವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳು ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.
ಈ ಹಿಂದೆ ಕಾಂತಾರ ಚಾಪ್ಟರ್ 1 ಸಿನಿಮಾ ಹೇಗಿರಲಿದೆ ಎಂಬ ಗ್ಲಿಂಪ್ಸ್ ಅನ್ನು ಶೇರ್ ಮಾಡಿಕೊಂಡಿದ್ದರು. ಅದು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಕಲರಿಪಯಟ್ಟು ಕಲಿಕಾ ಭಂಗಿಯ ಫೋಟೋ ಶೇರ್ ಮಾಡಿದ್ದಾರೆ. ಇದಕ್ಕೆ ಸಾವಿರಾರು ಲೈಕ್ಸ್‌ಗಳು ಬಂದಿವೆ.
ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸುತ್ತಾರೆ ಎಂದು ಬಹಿರಂಗವಾಗಿ ನಟ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವುದು ಭಾರೀ ಸಂಚಲನ ಸೃಷ್ಟಿಸುತ್ತಿದೆ. ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications