Dr Bro: ಡಾಕ್ಟರ್ ಬ್ರೋ ಈ ಕಾರಣಕ್ಕೆ ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ರಾ?
ಕನ್ನಡದ ಪ್ರಖ್ಯಾತ ಯೂಟ್ಯೂಬರ್‌ಗಳಲ್ಲಿ ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಕೂಡ ಒಬ್ಬರು. ರಾಜ್ಯ, ದೇಶ, ವಿದೇಶಗಳಲ್ಲಿ ಸಂಚರಿಸುತ್ತಾ ಅಲ್ಲಿನ ವಿಶೇಷವಾದ ಮಾಹಿತಿಯನ್ನು ಯುಟ್ಯೂಬ್ ಮೂಲಕ ಹಂಚಿಕೊಂಡೇ ಜನಪ್ರಿಯತೆ ಪಡೆದಿದ್ದಾರೆ ಬ್ರೋ. ಯೂಟ್ಯೂಬ್‌ನಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ಗಗನ್ ಅವರಿಗೆ ಬರೋಬ್ಬರಿ ಎರಡು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಆದರೆ ಅವರು ಕಳೆದ ಐದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್‌ಲೋಡ್ ಮಾಡಿಲ್ಲ. ಹಾಗಾಗಿ ಬ್ರೋ ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಏನು ಎಂದೂ ಚರ್ಚೆಯಾಗುತ್ತಿದೆ.
ಸ್ಮಾರ್ಟ್‌ಫೋನ್ ಬಳಸುವ ಬಹುತೇಕರಿಗೆ ಡಾಕ್ಟರ್ ಬ್ರೋ ಅಂದರೆ ಗೊತ್ತಿಲ್ಲ ಅನ್ನೋರು ವಿರಳ. ಅಷ್ಟರಮಟ್ಟಿಗೆ ಜನಪ್ರಿಯತೆ ಅವರಿಗಿದೆ. ಚಿಕ್ಕ ವಯಸ್ಸಿನಲ್ಲೇ ಗಗನ್ ಪ್ರವಾಸವನ್ನೇ ಹವ್ಯಾಸವನ್ನಾಗಿ ರೂಢಿಸಿಕೊಂಡು, ಯೂಟ್ಯೂಬ್ ಮೂಲಕ ಕರ್ನಾಟಕದಲ್ಲೇ ಇದ್ದು ಜನ ನೋಡಿರದ ಅದೆಷ್ಟೋ ಜಾಗಗಳ ದರ್ಶನ ಮಾಡಿಸಿದ್ದರು. ನಂತರ ಹೊರರಾಜ್ಯಗಳು ಸೇರಿ ಭಾರತದ ವಿಶೇಷ ಸ್ಥಳಗಳು, ವಿದೇಶಗಳಲ್ಲಿ ಕೂಡ ಪ್ರವಾಸ ಮಾಡಿ ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನ ಹಂಚಿಕೊಳ್ಳುತ್ತಿದ್ದರು.

ತಮ್ಮದೇ ಶೈಲಿಯಲ್ಲಿ ವಿಡಿಯೋಗಳನ್ನ ಮಾಡುತ್ತಿದ್ದರಿಂದ ಬ್ರೋಗೆ ಫ್ಯಾನ್ಸ್ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರು. ಆದರೆ ಕಳೆದ ಬ್ರೋ ಐದು ತಿಂಗಳ ಹಿಂದೆ ಕೊನೆಯ ವಿಡಿಯೋ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಅವರ ಫಾಲೋವರ್ಸ್ ಹಲವು ಬಾರಿ ಅವರ ಚಾನಲ್‌ಗೆ ಹೋಗಿ ಹೊಸ ವಿಡಿಯೋಗಳಿಗಾಗಿ ಹುಡುಕಾಟ ನಡೆಸಿದ್ದೂ ಉಂಟು. ಆದರೆ ಅವರು ಈಗ ಯುಟ್ಯೂಬ್‌ನಲ್ಲಿ ಆಕ್ಟೀವ್ ಆಗಿಲ್ಲ. ಹೆಚ್ಚು ಫಾಲೋವರ್ಸ್, ಜನಪ್ರಿಯತೆ, ಹಣ ಸಂಪಾದನೆ ಎಲ್ಲ ಇದ್ದರೂ ಡಾ.ಬ್ರೋ ಇದ್ದಕ್ಕಿದ್ದಂತೆ ಯುಟ್ಯೂಬ್‌ನಿಂದ ದೂರ ಸರಿದಿರುವುದು ಅಚ್ಚರಿ ಮೂಡಿಸಿದೆ.
ಇನ್ನು ಗಗನ್ ಅವರು ತಮ್ಮ ಯುಟ್ಯೂಬ್ ಜೊತೆ ಜೊತೆಗೇ ಹೊಸ ಬಿಸಿನೆಸ್‌ಗೂ ಕೈಹಾಕಿದ್ದರು. ಗೋ ಪ್ರವಾಸ ಎನ್ನುವ ತಮ್ಮದೇ ಟೂರಿಂಗ್ ಉದ್ಯಮ ಆರಂಭಿಸಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ಕೆಲವರ ಪ್ರಕಾರ ಡಾಕ್ಟರ್ ಬ್ರೋ ಅವರಿಗೆ ಈಗ ಯುಟ್ಯೂಬ್‌ಗಿಂತಲೂ ಈ ಬಿಸಿನೆಸ್‌ನಲ್ಲೇ ಹೆಚ್ಚು ಲಾಭ ಬರುತ್ತಿರಬಹುದು. ಇದೇ ಕಾರಣಕ್ಕೆ ಅವರು ಯುಟ್ಯೂಬ್ ವಿಡಿಯೋ ಹಂಚಿಕೊಳ್ಳುವುದನ್ನ ನಿಲ್ಲಿಸಿದ್ದಾರೆ ಎನ್ನುತ್ತಿದ್ದಾರೆ.

ಬಿಗ್‌ಬಾಸ್‌ಗಾಗಿ ಯುಟ್ಯೂಬ್‌ಗೆ ಬ್ರೇಕ್?
ಈ ಹಿಂದೆ ಹಲವು ಸೀಸನ್‌ಗಳ ಸಂದರ್ಭದಲ್ಲಿ ಡಾ.ಬ್ರೋ ಕೂಡ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಕರ್ನಾಟಕದ ಮನೆಮಾತಾಗಿದ್ದ ಬ್ರೋ ಅವರಿಗೆ ಬಿಗ್‌ಬಾಸ್‌ನಲ್ಲಿ ಅವಕಾಶ ಕೊಡಬೇಕು ಎಂಬ ಕೂಗು ಕೂಡ ಕೇಳಿಬಂದಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬ್ರೋ, ನಾನು ಬಿಗ್‌ಬಾಸ್‌ಗೆ ಹೋಗಲ್ಲ ಎಂದು ಹೇಳಿದ್ದರು. ಆದರೆ ಈ ಬಾರಿ ಕನ್ನಡ ಬಿಗ್‌ಬಾಸ್ ಸೀಸನ್-12 (Bigg Boss Kannada Season 12) ಶುರುವಾಗುತ್ತಿದ್ದು, ಈ ಸೀಸನ್‌ನಲ್ಲಿ ಗಗನ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ಕಳೆದ ಸೀಸನ್‌ಗಳಲ್ಲಿ ಅವರು ತಮ್ಮ ಯೂಟ್ಯೂಬ್ ವಿಡಿಯೋಗಳನ್ನು ಮಾಡಲು ಫುಲ್ ಬ್ಯುಸಿ ಇದ್ದರು. ಆ ಕಾರಣಕ್ಕೆ ಬಿಗ್‌ಬಾಸ್‌ಗೆ ಹೋಗಲು ನಿರಾಕರಿಸಿದ್ದರು. ಆದರೆ ಈ ಬಾರಿ ಬಿಗ್‌ಬಾಸ್‌ಗೆ ಹೋಗಲು ಅವರು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಯುಟ್ಯೂಬ್‌ನಿಂದ ಬ್ರೇಕ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲದಕ್ಕೂ ಸದ್ಯದಲ್ಲೇ ಕ್ಲಾರಿಟಿ ಸಿಗಲಿದ್ದು, ಬ್ರೋ ಬಿಗ್‌ಬಾಸ್‌ಗೆ ನಿಜಕ್ಕೂ ಖುಷಿ ವಿಚಾರ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್!












Click it and Unblock the Notifications