ಕನ್ನಡದ ಹಿರಿಯ ನಟಿ ನಿಧನ, ಕಂಬನಿ ಮಿಡಿದ ನಟ & ನಟಿಯರು... Kannada Senior Actress

ಕನ್ನಡ ಸಿನಿಮಾ ರಂಗಕ್ಕೆ ಸಾಲು ಸಾಲು ಆಘಾತ ಎದುರಾಗುತ್ತಿದ್ದು, 2024 ರಲ್ಲಿ ಹಲವು ನಟ & ನಟಿಯರು ನಿಧನರಾಗಿದ್ದರು. ಇದು ಕನ್ನಡ ಸಿನಿಮಾಗಳ ಅಭಿಮಾನಿಗಳಿಗೆ ಭಾರಿ ನೋವು ತಂದಿರುವ ಸಮಯದಲ್ಲೇ ಮತ್ತೆ 2025 ರಲ್ಲಿ ಕೂಡ ಅದೇ ರೀತಿ ಕನ್ನಡ ಸಿನಿಮಾ ರಂಗದ ಕಲಾವಿದರು ಅಸುನೀಗುತ್ತಿದ್ದಾರೆ. ಇಂದು ಕೂಡ ಕನ್ನಡದ ಹಿರಿಯ ನಟಿ ನಿಧನರಾಗಿದ್ದು, ಕಂಬನಿ ಮಿಡಿದ ನಟ & ನಟಿಯರು...

ಕನ್ನಡ ಸಿನಿಮಾ ರಂಗಕ್ಕೆ ಇನ್ನೇನು 100 ವರ್ಷಗಳು ತುಂಬಲಿದ್ದು, ಕನ್ನಡಿಗರ ಸಿನಿಮಾ ರಂಗ ಇನ್ನೇನು ಶತಮಾನೋತ್ಸವ ಆಚರಣೆ ಮಾಡಲಿದೆ. ಇಂತಹ ಸಂದರ್ಭದಲ್ಲೇ ಕನ್ನಡಿಗರಿಗೆ ಈಗ ಸಾಲು ಸಾಲು ಆಘಾತ ಎದುರಾಗುತ್ತಿದೆ. ಹಿರಿಯ ಕಲಾವಿದರು ಇಹಲೋಕ ತ್ಯಜಿಸುತ್ತಿರುವ ಸುದ್ದಿ ಸಾಕಷ್ಟು ನೋವು ಉಂಟು ಮಾಡುತ್ತಿರುವ ಸಮಯದಲ್ಲೇ ಮತ್ತೊಂದು ಆಘಾತ ಇಂದು ಎದುರಾಗಿದೆ. ಹಾಗಾದರೆ ಇದೀಗ ಮೃತಪಟ್ಟಿರುವ ಕನ್ನಡದ ಹಿರಿಯ ನಟಿ ಯಾರು? ಮುಂದೆ ಓದಿ.

Kannada Senior Actress Pushpalatha Passed Away

ಕನ್ನಡದ ಹಿರಿಯ ನಟಿ ನಿಧನಕ್ಕೆ ಕಂಬಿನಿ...

ಅಂದಹಾಗೆ ಹಿರಿಯ ನಟಿ ಪುಷ್ಪಲತಾ ಅವರು ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆ ಸಿನಿಮಾಗಳಲ್ಲಿ ಈ ನಟಿ ಮಿಂಚಿದ್ದರು. ತಮಿಳು ನಟ ಎವಿಎಂ ರಾಜನ್ ಅವರ ಪತ್ನಿ ಕೂಡ ಆಗಿದ್ದ ಹಿರಿಯ ನಟಿ ಪುಷ್ಪಲತಾ ಅವರು ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕನ್ನಡ, ತೆಲುಗು, ತಮಿಳು & ಹಿಂದಿ ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ರು ಅವ್ರು. ಅಲ್ಲದೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದರು.

ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತ್ತು

ಕನ್ನಡ ಸೇರಿ ಬಹುತೇಕ ಭಾಷೆಗಳ ಹಿರಿಯ ನಟ & ನಟಿಯರು ತಮಿಳುನಾಡು ರಾಜಧಾನಿ ಚೆನ್ನೈ ನಗರದಲ್ಲೇ ವಾಸ ಇದ್ದರು. ಯಾಕಂದ್ರೆ, ಮುಕ್ಕಾಲು ಶತಮಾನದಿಂದ ಕೂಡ ಇದೇ ಚೆನ್ನೈ ನಗರದಲ್ಲಿ ಸಿನಿಮಾ ಶೂಟಿಂಗ್‌ಗೆ ಅದ್ಭುತ ವ್ಯವಸ್ಥೆ ಇದೆ. ಅದೇ ರೀತಿ ಹಿರಿಯ ನಟಿ ಪುಷ್ಪಲತಾ ಅವರು ಚೆನ್ನೈ ಟಿ. ನಗರದ ತಿರುಮಲ ಪಿಳ್ಳೈ ರಸ್ತೆಯ ನಿವಾಸದಲ್ಲಿ ವಾಸವಿದ್ದರು.

ಹಿರಿಯ ನಟಿ ಪುಷ್ಪಲತಾ ಅವರಿಗೆ ವಯೋಸಹಜ ಕಾಯಿಲೆ ಇದ್ದರೂ ಆರೋಗ್ಯವಾಗಿದ್ದರು. ಆದರೆ ನಟಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಕನ್ನಡ ಸಿನಿಮಾ ರಂಗದ ಹಿರಿಯ ನಟ & ನಟಿಯರು ಸೇರಿದಂತೆ ಭಾರತೀಯ ಸಿನಿಮಾ ಲೋಕ ಕಂಬನಿ ಮಿಡಿದಿದೆ.

ಕನ್ನಡ, ತಮಿಳು, ತೆಲುಗು, ಹಿಂದಿ...

1958 ರಲ್ಲಿ ರಿಲೀಸ್ ಆಗಿದ್ದ 'ಸೆಂಗೊಟ್ಟೈ ಸಿಂಗಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು ಪುಷ್ಪಲತಾ ಅವರು. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟಾರೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು ಹಿರಿಯ ನಟಿ ಪುಷ್ಪಲತಾ ಅವರು. ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿದ್ದು, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ ಹಿರಿಯ ನಟಿ.

ಜಗತ್ತಿನಾದ್ಯಂತ ಅಬ್ಬರಿಸಿದ್ದ ಕನ್ನಡ ಸಿನಿಮಾಗಳು

ಕನ್ನಡ ಸಿನಿಮಾಗಳ ಗತ್ತು ಇಡೀ ಜಗತ್ತಿಗೇ ಗೊತ್ತು, ಯಾಕಂದ್ರೆ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ನೂರಾರು ದಾಖಲೆ ನಿರ್ಮಾಣ ಮಾಡಿದೆ. ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ಕರ್ನಾಟಕ ಸಿನಿಮಾ ವಿಚಾರದಲ್ಲಿ ಫ್ರೀಡಂ ಪಡೆದಿತ್ತು. ಇಂತಹ ಹೆಮ್ಮೆಯ ಸಿನಿಮಾ ಇಂಡಸ್ಟ್ರಿಗೆ ಇನ್ನೇನು 100 ವರ್ಷ ತುಂಬಲಿದೆ. ಹೀಗಾಗಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಯೋಜಿಸುವ ಈ ಶುಭ ಸಂದರ್ಭದಲ್ಲೇ ಕನ್ನಡ ಸಿನಿಮಾ ರಂಗ ಕಟ್ಟಿ, ಆಧಾರವಾಗಿ ನಿಂತಿದ್ದ ಹಿರಿಯ ನಟ & ನಟಿಯರು ನಿಧರಾಗುತ್ತಿರುವ ಸುದ್ದಿ ಅಭಿಮಾನಿಗಳಗೆ ಸಾಕಷ್ಟು ನೋವು ತರಿಸಿದೆ.

ಚಿತ್ರ ನಿರ್ಮಾಣ, ಜಾಹಿರಾತು ಹಾಗೂ ಭರತನಾಟ್ಯದಲ್ಲಿಯೂ ಮಿಂಚಿದ ಮಹಾನಟಿ

ನಟಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ಪುಷ್ಪಲತಾ ಭರತನಾಟ್ಯದಲ್ಲಿಯೂ ತರಬೇತಿ ಹೊಂದಿ ಭರತನಾಟ್ಟಯ ನರ್ತಕಿಯಾಗಿಯೂ ಮಿಂಚಿದ್ದರು. ಇದಲ್ಲದೇ ಎರಡು ಚಿತ್ರಗಳ ನಿರ್ಮಾಪಕಿಯಾಗಿಯೂ ಹೆಸರು ಮಾಡಿದ್ದರು. 1964 ರಲ್ಲಿ ಲಕ್ಸ್ ಸೋಪ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಆಯ್ಕೆಯಾದರು. ಆಗ ಅವರ ಕೀರ್ತಿ ಇನ್ನಷ್ಟು ಹೆಚ್ಚಿತು ಎಂದು ಅವರ ಹಿರಿಯ ಕಲಾವಿದರು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+