Sudeep: ವೇದಿಕೆ ಮೇಲೆ ಕಿಚ್ಚ ಸುದೀಪ್‌ ನ ʼಕನ್ನಡʼ ಪಾಠ ಹೇಗಿದೆ ನೋಡಿ

ಬೆಂಗಳೂರು, ನವೆಂಬರ್‌ 01: ಪ್ರತಿ ವರ್ಷ ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ಚಿತ್ರರಂಗದ ಅಭಿನಯ ಚರ್ಕವರ್ತಿ ಸುದೀಪ್‌ ಅವರು ಕನ್ನಡದ ಬಗ್ಗೆ ಅಪಾರವಾಗಿ ಗೌರವವನ್ನು ಹೊಂದಿರುವ ನಟರಾಗಿದ್ದಾರೆ.

ಕನ್ನಡ ಭಾಷೆ ವಿಚಾರಕ್ಕೆ ಬಂದಾಗ ಕನ್ನಡ ಚಿತ್ರರಂಗದ ಹಲವಾರು ನಟ ಹಾಗೂ ನಟಿಯರು ಧ್ವನಿ ಎತ್ತಿದ ಸಾವಿರಾರು ಉದಾಹರಣೆಗಳಿವೆ. ಕನ್ನಡ ಚಿತ್ರರಂಗದ ಅಭಿನಯ ಚರ್ಕವರ್ತಿ ಸುದೀಪ್‌ ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದು, ಕೆಲ ವಾರಗಳ ಹಿಂದೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ನಲ್ಲೂ ನಟ ಕಿಚ್ಚ ಸುದೀಪ್‌ ಅವರು ತಮ್ಮ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ.

Kannada Rajyotsava It s Kannada not Kannad Kichcha Sudeep kannada video goes viral

ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲೊ ಚಿತ್ರರಂಗಕ್ಕೆ ಸೇರಿದ ಹೈದರಬಾದ್‌ ಮೂಲದ ವ್ಯಕ್ತಿಯೊಬ್ಬರು ತಾವು ಮಾತನಾಡುವ ಸಂದರ್ಭದಲ್ಲಿ ಕನ್ನಡವನ್ನು ಕನ್ನಡ್‌ ಎಂದು ಉಚ್ಛರಿಸುತ್ತಾರೆ. ಆ ತಕ್ಷಣವೇ ಕಿಚ್ಚ ʼಅದು ಕನ್ನಡ್‌ ಕನ್ನಡ, ಮುಂಬೈ ಜನರು ಕನ್ನಡ್‌ ಅಂತಾ ಹೇಳ್ತಾರೆ. ನೀವು ಹೈದರಬಾದ್‌ನವರಾಗಿ ಕನ್ನಡ್‌ ಅಂತ ಹೇಳ್ತಿರಲ್ವಾ ಎಂದು ಕಿಚ್ಚ ಸಖತ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ರು. ಕನ್ನಡ ರಾಜ್ಯೋತ್ಸವದ ಶುಭ ದಿನವಾದ ಇಂದು ಆ ವಿಡಿಯೋ ಸಕತ್‌ ವೈರಲ್‌ ಆಗುತ್ತಿದೆ.

ಇನ್ನೂ ನಟ ಕಿಚ್ಚ ಸುದೀಪ್ ಅವರು ಯಾರೇ ಕನ್ನಡವನ್ನು ಕನ್ನಡ್‌ ಎಂದರೆ ಸಹಿಸೊಲ್ಲ. ಯಾವುದೇ ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಕನ್ನಡ್‌ ಎಂದು ಹೇಳಿದವರಿಗೆ ನಟ ಕಿಚ್ಚ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ದುಬೈನಲ್ಲಿ ನಡೆದ ಅವಾರ್ಡ್‌ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ತಮ್ಮ ಕನ್ನಡ ಪ್ರೇಮವನ್ನು ತೋರಿಸಿದ್ದರು. ಕನ್ನಡ ರಾಜ್ಯೋತ್ಸವದ ಈ ಶುಭ ದಿನದಂದು toxicant ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಈ ವೈರಲ್‌ ವಿಡಿಯೋದಲ್ಲಿ ಕಿಚ್ಚ ಸುದೀಪ್‌ ಕನ್ನಡ್‌ ಅಲ್ಲ ಅದು ಕನ್ನಡ ಎಂದು ವ್ಯಕ್ತಿಯೊಬ್ಬರಿಗೆ ಕನ್ನಡವನ್ನು ಸರಿಯಾಗಿ ಉಚ್ಚರಿಸಿ ಎಂದು ಹೇಳಿಕೊಂಡುತ್ತಿರುವ ದೃಶ್ಯವನ್ನು ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+