ಕನ್ನಡಿಗರ ‘ಕಾಟೇರ’ ಅಬ್ಬರ: ನಟ ದರ್ಶನ್ ಸಿನಿಮಾಗೆ ಎಷ್ಟು ಥಿಯೇಟರ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ. ದೇಶಾದ್ಯಂತ ಭರ್ಜರಿ 457 ಥಿಯೇಟರ್‌ಗಳಲ್ಲಿ 'ಕಾಟೇರ' ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ಡಿಸೆಂಬರ್ 29 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದ್ದು, ಅದಕ್ಕೂ ಮೊದಲೇ ಟಿಕೆಟ್ 'ಸೋಲ್ಡ್ ಔಟ್' ಆಗಿವೆಯಂತೆ. ಈ ಮೂಲಕ ನಟ ದರ್ಶನ್ ಅವರ ಸಿನಿಮಾ ಅಬ್ಬರ ಏನು? ಅನ್ನೋದು ಜಗತ್ತಿಗೆ ಗೊತ್ತಾಗುತ್ತಿದೆ.

2023 ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದ್ರೆ, ಈ ವರ್ಷವೇ ಎರಡೆರಡು ಸಿನಿಮಾ ರಿಲೀಸ್ ಆಗುತ್ತಿವೆ. ಕೆಲವು ತಿಂಗಳ ಹಿಂದಷ್ಟೇ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿ ದಾಖಲೆಗಳನ್ನ ಧೂಳ್ ಧೂಳ್ ಮಾಡಿತ್ತು.

Kannada Movie Kaatera Will Release In 457 Theaters

ಈಗ ಫ್ಯಾನ್ಸ್ ಪಾಲಿನ ಡಿ-ಬಾಸ್, ನಟ ದರ್ಶನ್ ಅವರು 'ಕಾಟೇರ' ಸಿನಿಮಾ ಮೂಲಕ ರೀ ಎಂಟ್ರಿಯನ್ನ ಕೊಡ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಹೀಗಿದ್ದಾಗ ಈ ಸಿನಿಮಾ ನೋಡಲು ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ.

ನಟ ದರ್ಶನ್ ಸಿನಿಮಾ ಟಿಕೆಟ್ ಸಿಗ್ತಿಲ್ವಂತೆ!

ಹೌದು, ಮೊದಲೇ ಹೇಳಿದಂತೆ ಕಾಟೇರ ರಾಜ್ಯದ 457 ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದ್ದು, ಬಹು ನಿರೀಕ್ಷೆ ಮೂಡಿಸಿದೆ. ಚಿತ್ರದ ಕಂಟೆಂಟ್ & ದಾಸ ದರ್ಶನ್ ಅವರ ರಗಡ್ ಲುಕ್ ಎಲ್ಲ ಅಭಿಮಾನಿಗಳ ಎದೆಯಲ್ಲಿ ಹೊಸ ಆಸೆ ಮೂಡಿಸಿದೆ.

ಹೀಗಾಗಿ ಟಿಕೆಟ್‌ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೀಗಾಗಿ ಅಭಿಮಾನಿಗಳು ಮುಗಿಬಿದ್ದು 'ಕಾಟೇರ' ಸಿನಿಮಾ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 'ಕಾಟೇರ' ಬಿಡುಗಡೆ ಆಗುವ ಮೊದಲನೇ ದಿನದ ಬಹುತೇಕ ಟಿಕೆಟ್‌ಗಳು ಖಾಲಿ ಆಗಿವೆಯಂತೆ!

Kannada Movie Kaatera Will Release In 457 Theaters

ಬೆಳ್ಳಂಬೆಳಗ್ಗೆ ಶುರುವಾಗುತ್ತೆ ಶೋ!

ಅಂದಹಾಗೆ 'ಕಾಟೇರ' ಸಿನಿಮಾದ ಹಲವು ಶೋಗಳು ಬೆಳ್ಳಂಬೆಳಗ್ಗೆ ಶುರು ಆಗಲಿವೆ. ಹೀಗೆ ಬೆಳಗ್ಗೆಯಿಂದಲೇ ಕಾಟೇರ ಅಬ್ಬರ ಶುರುವಾಗಲಿದೆ. ರಾಜಧಾನಿ ಬೆಂಗಳೂರಿನ ಕೆ.ಜಿ ರಸ್ತೆಯ ಥಿಯೇಟರ್ ಅನುಪಮ, ಕಾಟೇರ ಆಗಮನಕ್ಕೆ ಕಾಯುತ್ತಿದೆ. ಅನುಪಮ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಶೋ ಶುರುವಾಗಲಿದೆ.

ಜೊತೆಗೆ ಸುಂಕದಕಟ್ಟೆಯ ಮೋಹನ್ ಥಿಯೇಟರ್ ಬೆಳಗ್ಗೆ 5.30ಕ್ಕೆ ಶೋ ಶುರು ಮಾಡಲಿದೆ. ಇನ್ನು ಮಾಗಡಿ ರಸ್ತೆಯ, ಪ್ರಸನ್ನ ಥಿಯೇಟರ್‌ನ ಕೂಡ ಕಾಟೇರ ಸಿನಿಮಾಗೆ ಸಿಂಗರಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ಶೋ ಶುರುವಾಗಲಿದೆ. ಈ ಮಧ್ಯೆ ದೊಡ್ಡಬಳ್ಳಾಪುರದ ವೈಭವ್ ಥಿಯೇಟರ್‌ನಲ್ಲಿ ಬೆಳಗ್ಗೆ 5 ಗಂಟೆಗೆ ಶೋ ಶುರುವಾಗುತ್ತೆ.

ಒಟ್ನಲ್ಲಿ ಸಲಾರ್ & ಡಂಕಿ ಸಿನಿಮಾಗಳ ನಡುವೆ ಕಾಟೇರ ಸಿನಿಮಾ ಕೂಡ ಭರ್ಜರಿಯಾಗಿ ರಿಲೀಸ್ ಆಗಲಿದೆ. ಅಭಿಮಾನಿಗಳು ಈ ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗೆ ಕಾಟೇರ ಅಬ್ಬರದ ಆರಂಭಕ್ಕೆ ಅಖಾಡ ಸಜ್ಜಾಗಿದೆ. ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಭಿಮಾನಿಗಳ ಈ ಆಸೆ ನೆರವೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+