Abhinaya: ಕೊನೆಗೂ ತನ್ನ ಪತಿಯನ್ನು ಪರಿಚಯಿಸಿದ 'ಹುಡುಗರು' ನಟಿ

ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ತಂಗಿ ಪಾತ್ರದಲ್ಲಿ ಹುಡುಗರು ಸಿನಿಮಾದಲ್ಲಿ ನಟಿಸಿದ್ದ ತಮಿಳು ಚಿತ್ರರಂಗದ ಖ್ಯಾತ ನಟಿ ಅಭಿನಯ ಯುಗಾದಿ ಹೊತ್ತಲ್ಲೇ ಸಿಹಿಸುದ್ದಿ ನೀಡಿದ್ದಾರೆ. ಇಲ್ಲಿವರೆಗೆ ಅಭಿನಯ ಅವರು ಖ್ಯಾತ ನಟನೊಂದಿಗೆ ಸಂಬಂಧದಲ್ಲಿದ್ದಾರೆ ಎಂಬ ವದಂತಿ ಕೂಡ ಇತ್ತು. ಈ ಎಲ್ಲದಕ್ಕೂ ಬ್ರೇಕ್‌ ಹಾಕಿರುವ ನಟಿ ಕೊನೆಗೂ ತಾವು ಮದುವೆಯಾಗಲಿರುವ ಹುಡುಗನನ್ನು ಪರಿಚಯಿಸಿದ್ದಾರೆ. ಮಾರ್ಚ್‌ ಮೊದಲ ವಾರವೇ ಈ ಇಬ್ಬರ ಎಂಗೇಜ್‌ಮೆಂಟ್‌ ಕೂಡ ನೆರವೇರಿದ್ದು, ಇದೀಗ ತಮ್ಮ ಭಾವಿ ಪತಿಯ ಫೋಟೋಗಳನ್ನು ರಿವೀಲ್‌ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಅಭಿನಯ ಅವರು ಶನಿವಾರ ತಮ್ಮ ಬಹುವರ್ಷಗಳ ಗೆಳೆಯ ಕಾರ್ತಿಕ್ ವೇಗೇಶನ ಅವರನ್ನು ಪರಿಚಯಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಭಿನಯ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯಕರನೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಮಾರ್ಚ್ 9, 2025ರಂದು ನಿಶ್ಚಿತಾರ್ಥ, ಅತ್ಯಂತ ಸುಲಭವಾಗಿ ಯೆಸ್‌" ಎಂದು ನಟಿ ಅಭಿನಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Kannada Hudugaru Actress Abhinaya Reveals Husband Photo

ಅಭಿನಯ ಹಾಗೂ ಕಾರ್ತಿಕ್ ಬಹಳ ದಿನಗಳಿಂದ ಒಬ್ಬರಿಗೊಬ್ಬರು ಪರಿಚಿತರು ಎನ್ನಲಾಗಿದೆ. ಅಭಿನಯ ತಮ್ಮ ಜೀವನದ ಪ್ರೀತಿಯ ಬಗ್ಗೆ ಹೆಚ್ಚಾಗಿ ಗುಟ್ಟು ಕಾಯ್ದುಕೊಂಡಿದ್ದರು. ಇನ್ನು ಕಾರ್ತಿಕ್ ಅವರು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಉದ್ಯಮಿ ಎಂದು ತಿಳಿದುಬಂದಿದೆ.

"ನಾವು ಶಾಲೆಯಲ್ಲಿದ್ದಾಗಿನಿಂದ ಸ್ನೇಹಿತರಾಗಿದ್ದೇವೆ. ಅವರು ನನ್ನ ಆತ್ಮೀಯ ಸ್ನೇಹಿತ, ನಾನು ಅವರೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲೆ, ಏಕೆಂದರೆ ಅವರು ಯಾವುದೇ ತೀರ್ಪು ಮಾಡದೆ ನನ್ನ ಮಾತನ್ನ ಕೇಳುತ್ತಾರೆ. ನಮ್ಮ ಪ್ರೀತಿ ಸಂಭಾಷಣೆಗಳ ಮೂಲಕ ಬೆಳೆಯಿತು" ಎಂದು ಅಭಿನಯ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಭಿನಯ ಅವರು ಕನ್ನಡದಲ್ಲಿ ಹುಡುಗರು ಸಿನಿಮಾ, ಬೇರೆ ಭಾಷೆಗಳಲ್ಲಿ ಶಂಭೋ ಶಿವ ಶಂಭೋ, ಈಸನ್ ಮತ್ತು ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Kannada Hudugaru Actress Abhinaya Reveals Husband Photo

ಅಭಿನಯ ಅವರು ಕಾರ್ತಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರು ತಮ್ಮ ಮದುವೆಯ ದಿನಾಂಕವನ್ನು ಸಸ್ಪೆನ್ಸ್ ಆಗಿ ಇರಿಸಿದ್ದಾರೆ. ನಟಿಯ ಕ್ಯೂಟ್‌ ಫೋಟೋಗಳನ್ನು ಕಂಡು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು, ಸಿನಿಮಾರಂಗದವರು ದಂಪತಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಭಿನಯ ಅವರಿಗೆ ಶ್ರವಣ ಮತ್ತು ಮಾತಿನ ದೋಷವಿದ್ದರೂ ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದ ಮೂಲಕ ಸಿನಿಮಾಗರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮಿಳು ಚಿತ್ರ "ನಾಡೋಡಿಗಲ್" ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಸುಮಾರು 58 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲ್ಯದಿಂದಲೂ ಅಭಿನಯದ ಬಗ್ಗೆ ತಮಗೆ ಒಲವು ಇದೆ ಎಂದು ಅಭಿನಯ ಆಗಾಗ್ಗೆ ಹೇಳಿಕೊಂಡಿದ್ದಾರೆ. ತೆಲುಗು ಚಿತ್ರ ನೆನಿಂತೆಯ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+