Dhanraj Achar: ಧನರಾಜ್ ಆಚಾರ್ ಭಾವನಾತ್ಮಕ ಪೋಸ್ಟ್ ವೈರಲ್!
ಕನ್ನಡದ ಬಿಗ್‌ಬಾಸ್ ಸೀಸನ್ 11ರಲ್ಲಿ ಮೊದಲಿನಿಂದಲೂ ಭರ್ಜರಿಯಾಗಿ ಆಟವಾಡಿಕೊಂಡು ಬಂದಿದ್ದ ಧನರಾಜ್ ಆಚಾರ್ ಅವರು ಇನ್ನೇನು ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಹೋಗಬೇಕು ಎನ್ನುವಷ್ಟರಲ್ಲಿ ಬಿಗ್‌ಬಾಸ್‌ನಿಂದ ಹೊರ ಬಂದಿದ್ದಾರೆ. ಧನರಾಜ್ ಅವರು ಹೊರಗೆ ಬಂದ ಮೇಲೆ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ ಬಿಗ್‌ಬಾಸ್‌ನಲ್ಲಿ ಈ ಬಾರಿ ಧನರಾಜ್ ಅವರು ಫೈನಲ್‌ಗೆ ಹೋಗುವ ಸ್ಪರ್ಧಿ ಆಗಿದ್ದರು. ಅವರು ಫೈನಲ್‌ಗೆ ಹೋಗಬೇಕು ಅಂತಲೂ. ಅಲ್ಲದೆ ಹನುಮಂತು ಅವರು ಧನರಾಜ್ ಅವರನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ ಕೈಬಿಟ್ಟರು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಧನರಾಜ್ ಅವರು ಬಿಗ್‌ಬಾಸ್ ಸೀಸನ್ 11ರ ಜರ್ನಿಯ ಬಗ್ಗೆ ಹಾಗೂ ಅಭಿಮಾನಿಗಳಿಗೆ ಸುದೀರ್ಘ ಹಾಗೂ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಧನರಾಜ್ ಅವರು ಏನಂತ ಬರೆದುಕೊಂಡಿದ್ದಾರೆ ಎನ್ನುವ ವಿವರ ನೋಡೋಣ..
ಈ ಬಾರಿಯ ಕನ್ನಡದ ಬಿಗ್‌ಬಾಸ್ ಸೀಸನ್‌ನಲ್ಲಿ ಕಾಮಿಡಿ ಹಾಗೂ ಡೈಲಾಗ್‌ಗಳಿಂದ ರಂಜಿಸಿದ್ದ ಧನರಾಜ್ ಅವರು ಫೈನಲ್‌ಗೆ ಹೋಗುವ ಅವಕಾಶವನ್ನು ಸಣ್ಣದರಲ್ಲಿ ಕಳೆದುಕೊಂಡಿದ್ದಾರೆ. ಅವರು ಇನ್ನೇನು ಫೈನಲ್‌ಗೆ ಹೋಗಿ ಬಿಡ್ತಾರೆ ಎನ್ನುವಾಗಲೇ ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಬಿಗ್‌ಬಾಸ್‌ನಲ್ಲಿ ಧನರಾಜ್ ಹಾಗೂ ಹನುಮಂತು ಅವರ ಜೋಡಿ ಮಸ್ತ್ ಆಗಿತ್ತು. ಆದರೆ ಇವರು ಬಿಗ್‌ಬಾಸ್ ಫಿನಾಲೆಗೆ ಹೋಗಲು ಸಾಧ್ಯವಾಗಿಲ್ಲ.

ಧನರಾಜ್ ಆಚಾರ್ ಅವರ ಭಾವನಾತ್ಮಕ ಪೋಸ್ಟ್
ಈ ಪ್ರೀತಿಗಾಗಿ,ಅಭಿಮಾನಕ್ಕಾಗಿ ಕನಸು ಕಂಡವನು ನಾನು.. ನನಸು ಮಾಡಿದಿರಿ ನೀವು... ಎನ್ನುವ ಸಾಲುಗಳೊಂದಿಗೆ ಅವರು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.
Big boss Season 11 ನನ್ನಂತಹ ಸಾಮಾನ್ಯನ ಪಾಲಿಗೆ ಮರೆಯಲಾಗದ ಅತ್ಯದ್ಭುತ ಅವಕಾಶವಾಗಿತ್ತು. ಕರ್ನಾಟಕದ ಯಾವುದೋ ಮೂಲೆಯಲ್ಲಿ ಇದ್ದ ನನಗೆ ಈ ವೇದಿಕೆ ಸಿಕ್ಕಿದ್ದು ನಿಮ್ಮಿಂದ. ಅಂತಹ ದೊಡ್ಡ ವೇದಿಕೆಯಲ್ಲಿ ಎರಡು ವಾರಗಳನ್ನು ಕಳೆದಿದ್ದರೂ ಅದು ಜನ್ಮಗಳ ಪುಣ್ಯ. ಅಂತಹದ್ದರಲ್ಲಿ ನನಗೆ ನೀವು ಬರೋಬ್ಬರಿ 110 ದಿನಗಳನ್ನು ಕಳೆಯುವ ಅವಕಾಶವನ್ನು ನೀಡಿದ್ದೀರಿ. ಅಷ್ಟು ದೊಡ್ಡ ಮನೆಯಲ್ಲಿ ನಾನು ಮಾಡಿದ ತಪ್ಪುಗಳನ್ನು ಕ್ಷಮಿಸಿದ್ದೀರಿ ಎಂದು ಹೇಳಿದ್ದಾರೆ. ಮುಂದುವರಿದು ನಾನು ಅತ್ತಾಗ ಹೆಗಲಾಗಿ ಜೊತೆಯಾಗಿದ್ದೀರಿ.ನನ್ನ ನಗುವಿನಲ್ಲಿ ನೀವು ಖುಷಿ ಕಂಡಿದ್ದೀರಿ ಅಂದು ಬೊಗಸೆಯಷ್ಟು ಪ್ರೀತಿಯನ್ನು ಬಯಸಿದವನು ನಾನು ಎಂದು ಹೇಳಿಕೊಂಡಿದ್ದಾರೆ.

ಇಂದು ಆಗಸದಷ್ಟು ವಿಶಾಲವಾದ ಪ್ರೀತಿ, ಬೆಂಬಲ,ಅಭಿಮಾನ ನಿಮ್ಮಿಂದ ದೊರೆತಿದೆ. ಸಹಸ್ರ ಸಹಸ್ರ ಜನುಮಗಳನ್ನು ಎತ್ತಿ ಬಂದರೂ, ಇದನ್ನು ನಾನು ತೀರಿಸಲು ಸಾಧ್ಯವಿಲ್ಲ. ಮಾತುಗಳು ಬರದಾಗಿವೆ. ನುಡಿ ಗದ್ಗದಿತವಾಗುತಿದೆ. ನೀವು ನನಗೆ ಕೊಟ್ಟ ಸಹಕಾರಕ್ಕೆ ಧನ್ಯವಾದ ಎನ್ನುವುದು ತುಂಬಾ ಚಿಕ್ಕ ಮಾತು. ಆದರೆ, ಅದನ್ನು ಬಿಟ್ಟು ನನ್ನಿಂದ ಏನೂ ಹೇಳುವುದಕ್ಕೂ ನನಗೆ ಸಾಧ್ಯವಿಲ್ಲ.
ನನ್ನನ್ನು ಪ್ರೀತಿಸಿ, ಬೆಂಬಲಿಸಿದ ಕರುನಾಡಿನ ಎಲ್ಲಾ ನನ್ನ ಮನೆಯವರಿಗೆ ನಿಮ್ಮ ಮನೆ ಮಗನಿಂದ ತುಂಬು ಹೃದಯದ ಅನಂತ ಅನಂತ ಧನ್ಯವಾಗಳು ಅಂತ ಹೇಳಿದ್ದಾರೆ. ಕೊನೆಯದಾಗಿ ಮುಂದೆಯೂ ನಿಮ್ಮನ್ನು ನಗಿಸುವುದೇ ನನ್ನ ಕಾಯಕ.. ನಗುನಗುತಾ ಬಾಳೋಣ. ನಗುವನು ಹಂಚೋಣ ಇಂತಿ ಧನರಾಜ್ ಆಚಾರ್ ಎಂದಿದ್ದಾರೆ.
ನೀವು ಸೋತಿಲ್ಲ: ಇನ್ನು ಧನರಾಜ್ ಅವರ ಈ ಪೋಸ್ಟ್‌ಗೆ ನೂರಾರು ಜನ ಅವರ ಅಭಿಮಾನಿಗಳು ಹಾಗೂ ಬಿಗ್‌ಬಾಸ್‌ನ ವೀಕ್ಷಕರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ನೀವು ಸೋತಿಲ್ಲ, ನಮ್ಮ ಮನಸ್ಸು ಗೆದಿದ್ದೀರಿ ಅಂತ ಸಂತೋಷ ಹಂಚಿಕೊಂಡಿದ್ದಾರೆ.
ಇನ್ನೂ ಕೆಲವರು ಅದಕ್ಕೆ ಹೇಳುವುದು ತುಂಬಾ ಒಳ್ಳೆಯವರಾಗಿ ಇರಬಾರದು ಅಂತ. ಒಳ್ಳೆಯವರಿಗೆ ಈ ಕಾಲದಲ್ಲಿ ಇದೇ ತರ ಆಗುತ್ತೆ. ಹನುಮಂತು ಅವರಿಗೆ ಧನರಾಜ್ ಅವರನ್ನು ಉಳಿಸಿಕೊಳ್ಳುವ ಅವಕಾಶ ಇತ್ತು. ಆದರೆ ಅವರು ಅದನ್ನು ಬಳಸಿಕೊಂಡಿಲ್ಲ. ದೋಸ್ತ ದೋಸ್ತ ಎನ್ನುತ್ತಲ್ಲೇ ತಪ್ಪು ಮಾಡಿಬಿಟ್ಟರು ಅಂತ ಜನ ಅಭಿಪ್ರಾಯಪಟ್ಟಿದ್ದಾರೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications