ಬಿಗ್‌ಬಾಸ್ ಖ್ಯಾತಿಯ ಹಂಸ ತಾಯಿ ನಿಧನ, ಭಾವುಕ ಪೋಸ್ಟ್ ಹಂಚಿಕೊಂಡ ನಟಿ
ಬಿಗ್‌ಬಾಸ್ ಸೀಸನ್-11ರ ಸ್ಪರ್ಧಿ ಹಾಗೂ ಕಿರುತೆರೆ ನಟಿ ಹಂಸ ಅವರ ಮನೆಯಲ್ಲಿ ಶೋಕ ಆವರಿಸಿದೆ. ಕಿರುತೆರೆ ಹಾಗೂ ಸಿನಿಮಾಗಳಲ್ಲೂ ಮಿಂಚುತ್ತಿರುವ ಹಂಸ ಮನೆಯಲ್ಲಿ ದಿಢೀರ್ ಸಾವಾಗಿದೆ. ಹಂಸ ಅವರ ತಾಯಿ ಇತ್ತೀಚೆಗೆ ನಿಧನರಾಗಿದ್ದು, ಈ ನೋವಿನಿಂದ ಅವರು ಇನ್ನೂ ಹೊರಬಂದಿಲ್ಲ. ಈ ನೋವಿನ ವಿಚಾರವನ್ನು ಹಂಸ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ. ಅಮ್ಮನೊಂದಿಗೆ ಇದ್ದ ನಂಟು ನೆನೆದು ಭಾವುಕರಾಗಿದ್ದಾರೆ.
ʼಅಮ್ಮ ಮಿಸ್ ಯೂ, ಈಗ ನೀನು ನಮ್ಮ ನೆನಪು ಮಾತ್ರ. ನೀವು ನಮಗಾಗಿ ಮಾಡಿದ ತ್ಯಾಗ ಎಂದಿಗೂ ನೆನಯುವಂತದ್ದು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮಾ..ʼ ಎಂದು ಹಂಸ ಅವರು ತಮ್ಮ ತಾಯಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಮಿಂಚಿರುವ ನಟಿ ಹಂಸ ಅವರು ರಾಜಾಹುಲಿ, ಡ್ರಾಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಅವರು ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗುವ ಮೂಲಕ ಮತ್ತಷ್ಟು ಜನಪ್ರಿಯರಾದರು. ಬಳಿಕ ಆರಂಭದಲ್ಲೇ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದರೂ, ಹನುಮಂತು ಬಗ್ಗೆ ಸಂದರ್ಶನದಲ್ಲಿ ಒಂದು ಹೇಳಿಕೆ ನೀಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದರು.
ಜಾತಿ ಮೀಸಲಾತಿ ಕಾರಣಕ್ಕೆ ಹನುಮಂತನಿಗೆ ಭಾರೀ ಸಪೋರ್ಟ್ ಸಿಗುತ್ತಿದೆ ಎಂಬರ್ಥದಲ್ಲಿ ಹಂಸ ಮಾತನಾಡಿದ್ದರು ಎಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು. "ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿದ್ದಾಗ ಜನರಲ್ ಕೆಟಗರಿಯವರು ಎಷ್ಟೇ ಓದಿ ದಬಾಕಿದ್ರುನು ಕಡೆಗಣಿಸುತ್ತಾರೆ. ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ" ಎಂದು ಹಂಸ ಹೇಳಿದ್ದರು. ಹಂಸ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿ, ಹಂಸ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು.
ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ್ದ ಹಂಸ ಕ್ಷಮೆ ಕೇಳಿದ್ದರು. ನಾನು ಒಂದು ಚಾನೆಲ್‌ನಲ್ಲಿ ಕೊಟ್ಟ ಸ್ಟೇಟ್‌ಮೆಂಟ್ ತುಂಬಾ ವಿವಾದ ಸೃಷ್ಟಿಸಿದೆ. ಕೆಲವರು ಅದನ್ನು ಬೇರೆ ರೀತಿ ಅರ್ಥಮಾಡಿಕೊಂಡು ಬೇರೆ ಬೇರೆ ಅರ್ಥ ಕಲ್ಪಿಸಿದ್ದಾರೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಲ್ಲ, ಒಂದು ವೇಳೆ ನನ್ನ ಮಾತಿನಿಂದ ಯಾರಿಗಾದರೂ ಬೇಸರ ಆಗಿದ್ರೆ, ಅವರಿಗೆಲ್ಲ ನಾನು ಕ್ಷಮೆ ಕೇಳುತ್ತೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ, ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳನ್ನ ಮರೆತುಬಿಡಿ. ಈ ವಿಷಯವನ್ನ ಇಲ್ಲಿಗೇ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು.
ಇನ್ನು ಬಿಗ್‌ಬಾಸ್ ಮನೆಯಲ್ಲಿ ಆರಂಭದಲ್ಲಿ ಲಾಯರ್ ಜಗದೀಶ್ ಅವರು ಹಂಸ ಅವರಿಗೆ ಕಾಮಿಡಿ ಮಾಡುತ್ತಾ ಗಮನ ಸೆಳೆದಿದ್ದರು. ಹಂಸ ಅವರು ಎಷ್ಟು ತೂಕವಿದ್ದಾರೆ ಅಂತ ಗೊತ್ತಿಲ್ಲ. ನನ್ನ ಎದೆ ಮೇಲೆ ಕಾಲಿಟ್ರು. ಆದರೆ ಹಾರ್ಟ್ ಪಲ್ಸ್ ನಿಲ್ಲಲಿಲ್ಲ. ಇದೆಲ್ಲವೂ ನಾನು ತುಂಬಾ ಯಂಗ್ ಅಂತ ಫೀಲ್ ಆಯ್ತು ಎಂದು ಬಿಗ್‌ಬಾಸ್ ಜಗದೀಶ್ ಹೇಳಿದ್ದರು.












Click it and Unblock the Notifications