Bigg Boss Kannada 11: ಭವ್ಯಾ ಗೌಡರನ್ನ ಸೊಸೆ ಎಂದು ಒಪ್ಪಿಕೊಂಡ್ರಾ ತ್ರಿವಿಕ್ರಮ್‌ ತಾಯಿ? ವಿಡಿಯೋ ವೈರಲ್‌

ಕನ್ನಡ ಬಿಗ್‌ಬಾಸ್‌ನಲ್ಲಿ ಎಂದಿನಂತೆ ಈ ಸೀಸನ್‌ನಲ್ಲೂ ಲವ್‌ ಸ್ಟೋರಿಗಳು ಸದ್ದು ಮಾಡಿವೆ. ಹಲವು ಸೀಸನ್‌ಗಳಲ್ಲಿ ಕೆಲವರು ಬಿಗ್‌ಬಾಸ್‌ಗೆ ಬಂದು ತಮ್ಮ ಜೋಡಿಯನ್ನೂ ಹುಡುಕಿಕೊಂಡಿದ್ದಾರೆ. ಸದ್ಯ ಈ ಬಾರಿ ಸಖತ್‌ ಸದ್ದು ಮಾಡುತ್ತಿರುವುದು ತ್ರಿವಿಕ್ರಮ್‌ ಹಾಗೂ ಭವ್ಯಾ ಗೌಡ ಲವ್‌ಸ್ಟೋರಿ ಎಂದರೆ ತಪ್ಪಾಗದು. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವು ಸಂಗತಿಗಳು ಬಿಗ್‌ಬಾಸ್‌ ಮನೆಯಲ್ಲಿ ನಡೆದಿವೆ.

ಇನ್ನು ಇದು ಸ್ಪರ್ಧಿಗಳ ಗಮನಕ್ಕೂ ಬಂದಿರುವುದು ಅಚ್ಚರಿ ತರಿಸಿದೆ. ಈ ಬಾರಿ ತ್ರಿವಿಕ್ರಮ್‌ ಹಾಗೂ ಭವ್ಯಾ ಅವರ ಲವ್‌ಸ್ಟೋರಿ ತುಂಬಾ ಗಮನ ಸೆಳೆದಿದೆ. ನಿನ್ನೆ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಪ್ರಸಂಗವೊಂದು ಈ ಲವ್‌ಸ್ಟೋರಿಯನ್ನ ಮತ್ತಷ್ಟು ಖಚಿತಪಡಿಸುವಂತಿದೆ.

Kannada Bigg Boss Contestants Trivikram And Bhavya Gowda Compared To Radha Krishna

ನಿನ್ನೆಯ ಟಾಸ್ಕ್‌ ಗೆದ್ದವರಿಗೆ ಅಮ್ಮನನ್ನು ಭೇಟಿಯಾಗುವ ಆಫರ್‌ ಕೊಡಲಾಗಿತ್ತು. ಅದರಂತೆ ತ್ರಿವಿಕ್ರಮ್‌ ತನ್ನ ಟಾಸ್ಕ್‌ ಕಂಪ್ಲೀಟ್‌ ಮಾಡಿದ್ದರು. ಈ ಹಿನ್ನೆಲೆ ಬಿಗ್‌ಬಾಸ್‌ ಮನೆಗೆ ತ್ರಿವಿಕ್ರಮ್‌ ತಾಯಿ ಎಂಟ್ರಿ ಕೊಟ್ಟರು. ಮೊದಲಿಗೆ ಎಲ್ಲ ಸ್ಪರ್ಧಿಗಳು ತ್ರಿವಿಕ್ರಮ್‌ ತಾಯಿಯ ಆಶೀರ್ವಾದ ಪಡೆದುಕೊಂಡರು. ಇನ್ನು ಭವ್ಯಾ ಗೌಡ ತ್ರಿವಿಕ್ರಮ್‌ ತಾಯಿಯನ್ನು ಹಗ್‌ ಮಾಡಿಕೊಂಡು ಸಖತ್‌ ಖುಷಿ ಕೂಡ ಪಟ್ಟರು.

ಬಳಿಕ ಒಬ್ಬರೂ ಅಕ್ಕಪಕ್ಕದಲ್ಲಿ ಕುಳಿತುಕೊಂಡು ಆಪ್ತವಾಗಿ ಮಾತನಾಡಿದ್ದಾರೆ. ಈ ವೇಳೆ ತ್ರಿವಿಕ್ರಮ್‌ ತಾಯಿಯು ಭವ್ಯಾ ಅವರನ್ನು ಹಾಡಿಹೊಗಳಿದ್ದಾರೆ. ನನ್ನ ಮಗನಿಗೆ ನೀನು ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲ ರೀತಿಯಲ್ಲೂ ಸಪೋರ್ಟ್‌ ಆಗಿ ಇದ್ದೀಯ. ನೀವಿಬ್ಬರೂ ರಾಧಾ-ಕೃಷ್ಣ ಇದ್ದಂಗೆ ಇದ್ದೀರಿ ಎಂದು ಭವ್ಯಾಗೆ ಹೇಳಿದ್ದಾರೆ. ಈ ಮಾತಿಗೆ ಭವ್ಯಾ ಕೂಡ ನಾಚಿಕೊಂಡಿರುವುದು ಪ್ರೋಮೋದಲ್ಲಿದೆ.

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ತ್ರಿವಿಕ್ರಮ್‌-ಭವ್ಯಾ ಲವ್‌ಸ್ಟೋರಿಗೆ ಪೋಷಕರಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಾಯ್ತು. ಮದುವೆ ಯಾವಾಗ ಇಟ್ಟುಕೊಳ್ತೀರಾ? ಎಂದು ಕಾಲೆಳೆಯಲಾರಂಭಿಸಿದ್ದಾರೆ. ಬಿಗ್‌ಬಾಸ್‌ ಸೀಸನ್‌ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಆದಷ್ಟು ಬೇಗ ಹೊರಬಂದು ಮದುವೆ ಊಟ ಹಾಕಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

Kannada Bigg Boss Contestants Trivikram And Bhavya Gowda Compared To Radha Krishna

ಬಳಿಕ ತ್ರಿವಿಕ್ರಮ್‌ ಅವರ ತಾಯಿಯನ್ನು ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಡಲಾಯಿತು. ಈ ವೇಳೆ ತ್ರಿವಿಕ್ರಮ್‌ ಭಾವುಕರಾದರು. ಅಲ್ಲದೆ ಇನ್ನೂ ಕೆಲ ಹೊತ್ತು ಅಮ್ಮನೊಂದಿಗೆ ಇರಲು ಅವಕಾಶ ಕೇಳಿದರು. ಆದರೆ, ಬಿಗ್‌ಬಾಸ್‌ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ತಾಯಿ ಮನೆಯಿಂದ ಹೊರಟರು. ಈ ವೇಳೆ ತ್ರಿವಿಕ್ರಮ್‌ ಜೋರಾಗಿ ಅತ್ತಿದ್ದಾರೆ. ಬಿಗ್‌ಬಾಸ್‌ ಮನೆಗೆ ಭವ್ಯಾ ಅವರ ಕುಟುಂಬ ಕೂಡ ಭೇಟಿ ನೀಡಿದೆ.

ಅಮ್ಮನಿಗಾಗಿ ಕಾಯುತ್ತಿದ್ದ ಭವ್ಯಾ ಮುಖ್ಯದ್ವಾರದ ಕಡೆಗೆ ಕಾಯುತ್ತ ನಿಂತಿದ್ದರು. ಬಳಿಕ ಮುಖ್ಯದ್ವಾರ ತೆರೆದು, ಭವ್ಯಾ ತಾಯಿ ಕೂಡ ಆಗಮಿಸಿದರು. ಭವ್ಯಾ ಅವರನ್ನು ಹಾಯ್ ಬಂಗಾರಿ ಎಂದು ಕರೆದು, ಮುತ್ತುಕೊಟ್ಟರು. ಈ ವೇಳೆ ಅಮ್ಮನನ್ನು ಕಂಡ ಖುಷಿಯಲ್ಲಿ ಭವ್ಯಾ ಕೂಡ ಜೋರಾಗಿ ಅತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+