'ಹೊಸಬರಿಗೆ ಅವಕಾಶ ಕೊಡಿ ಅಂದ್ರೆ ನಾವೇನು ಸಾಯೋದಾ?'
ಕಿರುತೆರೆಯ ಕಾಮಿಡಿ ಶೋಗಳಲ್ಲಿ ಪದೇ ಪದೇ ನಾವೇ ಕಾಣಿಸಿಕೊಳ್ಳುತ್ತಿದ್ದಾಗ ಜನ ಹೊಸಬರಿಗೆ ಅವಕಾಶ ಕೊಡಿ..ಹೊಸಬರಿಗೆ ಅವಕಾಶ ಕೊಡಿ..ಎಂದು ಒತ್ತಾಯಿಸುತ್ತಾರೆ. ಹೊಸಬರಿಗೆ ಅವಕಾಶ ಕೊಡಿ ಅಂತಾರಲ್ಲ ಮತ್ತೆ ನಾವೇನು ಸಾಯೋದಾ? ನಾವೆಲ್ಲಾ ಎಲ್ಲಿಗೆ ಹೋಗುವುದು. ನಮಗೆ ಕೆಲಸ ಬೇಡವಾ ಎಂದು ಹಾಸ್ಯ ನಟ ಜಗ್ಗಪ್ಪ ಒಬ್ಬ ಹೊಸ ಹಾಸ್ಯ ಕಲಾವಿದ ಎದುರಿಸುವ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ನಾನು ಎಂಟು ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಯೂಟ್ಯೂಬ್ ಮಾಡುತ್ತಿದ್ದೇನೆ. ನಾಸಸನ್ಯಾಕೆ ಯೂಟ್ಯೂಬ್ ಮಾಡಬೇಕು, ನಾನ್ಯಾಕೆ ರೀಲ್ಸ್ ಮಾಡಬೇಕು, ಏಕೆಂದರೆ ಜೀವನಕ್ಕೆ ಮುಂದಿನ ಹೆಜ್ಜೆ ಅಂತಾ ಬೇಕಲ್ಲ. ನಮ್ಮ ಬದುಕನ್ನು ಯಾರು ನಡೆಸಿಕೊಡುತ್ತಾರೆ ಎಂದರು.

ಒಂದು ಶೋ ಗೆದ್ದು ಎಂಟು ಲಕ್ಷ ಬಂತು, ಅವನಿಗೆ ಏನು ಕಮ್ಮಿ ಅಂತಾ ಜನ ಮಾತನಾಡುತ್ತಾರೆ. ಆದರೆ ಆ ಎಂಟು ಲಕ್ಷದಲ್ಲಿ ಸಂಪೂರ್ಣ ಜೀವನ ಕಳೆಯುತ್ತಾ, ಇವರನ್ನು ಯಾಕೆ ಪದೇ ಪದೇ ಹಾಕಿಕೊಳ್ಳುತ್ತೀರಾ? ಅಂತಾ ಕೇಳುತ್ತಾರೆ. ಹಾಗಾದ್ರೆ ಒಂದು ಶೋ ಮಾಡಿದ ಮೇಲೆ ಅವರೆಲ್ಲಾ ಏನು ಸತ್ತೇ ಹೋಗೋದಾ? ಒಂದು ಶೋ ಆದ ಮೇಲೆ ಎಲ್ಲಾದರೂ ಹೋಗಿ ಸತ್ತೋಗಿ ಅಂತಾನಾ ಹಾಗಿದ್ರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇವನ್ನೇ ಯಾಕೆ ಹಾಕಿಕೊಂಡಿದ್ದೀರಾ ಅಂದವನೇ ಹೊರಗಡೆ ಸಿಕ್ಕಾಗ ಯಾಕೆ ಗುರು ಕೆಲಸ ಇಲ್ವಾ ನಿನಗೆ ಅಂತಾನೆ. ಒಂದು ಶೋಗೆ ಹೀಗಾಗಿದ್ದೀಯಾ ಅಂತಾನೆ. ನಾನು ಅದನ್ನು ಅನುಭವಿಸಿದ್ದೀನಿ. ಹೀಗಾಗಿ ನಾನು ಊರಿಗೆ ಹೋಗುವುದೇ ಬಿಟ್ಟಿದ್ದೇ. ಮೂರು ತಿಂಗಳು ಶೋ ಮಾಡುತ್ತಾರೆ. ಅದು ಮುಗಿದ ಮೇಲೆ ಊರಿಗೆ ಹೋಗಲೇಬೇಕು. ಅಲ್ಲಿ ಹೋದಾಗ ಕೆಲಸ ಇಲ್ವಾ ಅಂತಾರೆ ಎಂದು ಜಗ್ಗಪ್ಪ ತಮಗಾದ ನೋವನ್ನು ಹೊರ ಹಾಕಿದ್ದಾರೆ.

ನಾನು ಇಂಡಸ್ಟ್ರಿಗೆ ಒಂದು ಎಂಟು ಒಂಬತ್ತು ವರ್ಷ ಆಯ್ತು. ನಮಗೆ ಸಿನಿಮಾ ಅವಕಾಶಗಳೇ ಇಲ್ಲ. ಈವರೆಗೂ ಒಂದು ಮೂರು ಸಿನಿಮಾ ಮಾಡಿದ್ದೇನೆ ಅಷ್ಟೇ. ಶಿವಣ್ಣ ಅವರ ಜೊತೆ ವೇದಾ ಸಿನಿಮಾ, ಅದು ಬಿಟ್ಟರೆ ಕೃಷ್ಣಂ ಪ್ರಣಯ ಸಖಿ, ಅದನ್ನು ಬಿಟ್ಟರೆ ಈಗ ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ. ಬಂದು ಎಂಟು ವರ್ಷಕ್ಕೆ ಮೂರೇ ಸಿನಿಮಾ ಮಾಡಿರುವುದು. ಹೀಗಾಗಿ ಕಿರುತೆರೆಯಲ್ಲಿ ಬಂದ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆ. ಆದರೆ ಜನ ನನ್ನಮ್ಮ ನೋಡಿ ಸಾಕು ಹೊಸಬರಿಗೆ ಅವಕಾಶ ಕೊಡಿ ಎನ್ನುತ್ತಾರೆ ಎಂದು ಜಗ್ಗಪ್ಪ ಹೇಳಿದ್ದಾರೆ.












Click it and Unblock the Notifications