Duniya Vijay: ನಟ ದುನಿಯಾ ವಿಜಯ್‌ಗೆ ಮತ್ತೊಂದು ಚಿತ್ರರಂಗದಿಂದ ದೊಡ್ಡ ಆಫರ್
ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರು ಖಳನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಬಳಿಕ ನಾಯಕ ನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರ ಕೆರಿಯರ್‌ಗೆ ತಿರುವು ಕೊಟ್ಟ ದುನಿಯಾ ಸಿನಿಮಾದ ಹೆಸರಿನಿಂದಲೇ ಅವರನ್ನು ಇಂದಿಗೂ ಕರೆಯಲಾಗುತ್ತಿದೆ. ಇತ್ತೀಚೆಗೆ ಅವರು ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದರು. ನಟ ಬಾಲಕೃಷ್ಣ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಅವರಿಗೆ ಮತ್ತೊಂದು ಚಿತ್ರರಂಗದಿಂದಲೂ ದೊಡ್ಡ ಆಫರ್ ಬಂದಿದೆ. ಟಾಲಿವುಡ್ ಬೆನ್ನಲ್ಲೇ ಅವರು ಇನ್ನೊಂದು ಚಿತ್ರರಂಗದಲ್ಲಿ ಹವಾ ಸೃಷ್ಟಿಸಲು ಮುಂದಾಗಿದ್ದಾರೆ.
ಹೌದು, ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಅವರು ಬೇರೆ ಬೇರೆ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಒಟ್ಟೊಟ್ಟಿಗೆ ನಟ ಹಾಗೂ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದೀಗ ಅವರಿಗೆ ತಮಿಳು ಚಿತ್ರರಂಗದಿಂದ ದೊಡ್ಡ ಆಫರ್ ಬಂದಿದೆ. ಇದಕ್ಕೆ ದುನಿಯಾ ವಿಜಯ್ ಕೂಡ ಒಪ್ಪಿಕೊಂಡಿದ್ದು, ಈಗಾಗಲೇ ಈ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯೂ ಆಗಿದ್ದಾರೆ. ಇಷ್ಟಕ್ಕೂ ದುನಿಯಾ ವಿಜಯ್ ಅವರು ಖಳನಾಯಕನಾಗಿ ತಮಿಳು ಸಿನಿಮಾದಲ್ಲಿ ಹವಾ ಸೃಷ್ಟಿಸಲು ಮುಂದಾಗಿದ್ದಾರೆ.

ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಅಭಿನಯಿಸುತ್ತಿರುವ ಮೂಕುತ್ತಿ ಅಮ್ಮನ್-2 ಸೀಕ್ವೆಲ್‌ನಲ್ಲಿ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ. ಆದರೆ ಇವರ ಪಾತ್ರವೇನು ಎಂಬುದು ಈವರೆಗೂ ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ವಿಜಯ್ ಅವರು ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗು ನಿರ್ದೇಶಕ ಸುಂದರ್ ಡೈರೆಕ್ಟ್ ಮಾಡುತ್ತಿದ್ದಾರೆ. ನಯನತಾರಾ, ದುನಿಯಾ ವಿಜಯ್, ನಟಿ ರೆಜಿನಾ ಕೆಸಾಂಡ್ರಾ, ಹಿರಿಯ ನಟಿ ಖುಷ್ಬೂ, ಮೀನಾ, ಹಾಸ್ಯನಟ ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.
2020ರಲ್ಲಿ ಮೂಕುತ್ತಿ ಅಮ್ಮನ್ ಸಿನಿಮಾ ತೆರೆ ಕಂಡಿತ್ತು. ಇದರಲ್ಲಿ ಆರ್ಜೆ ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಸಿನಿಮಾದ ಸೀಕ್ವೆಲ್ ಕೂಡ ಸೆಟ್ಟೇರುತ್ತಿದೆ. ಮೂಕುತ್ತಿ ಅಮ್ಮನ್-2 ಸಿನಿಮಾ ನಿರ್ದೇಶಿಸುತ್ತಿರುವ ಸುಂದರ್ ಅವರು ಭಕ್ತಿ ಹಾಗೂ ಹಾರರ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಲಿದೆ. ಕಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ದುನಿಯಾ ವಿಜಯ್ ಅವರಿಗೆ ಎಲ್ಲರೂ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಈ ಸಿನಿಮಾದ ಮುಹೂರ್ತ ಕೂಡ ನಡೆದಿದ್ದು, ಇದರಲ್ಲಿ ದುನಿಯಾ ವಿಜಯ್ ಕೂಡ ಭಾಗಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡದ ನಟರಾದ ಗರುಡ ರಾಮ್ ಕೂಡ ಇದ್ದಾರೆ ಎನ್ನಲಾಗುತ್ತಿದೆ. ಟಾಲಿವುಡ್‌ನಲ್ಲಿ ಬಾಲಯ್ಯನ ಸಿನಿಮಾದಲ್ಲಿ ವಿಜಯ್ ಅವರ ನಟನೆಗೆ ಜನ ಫಿದಾ ಆಗಿದ್ದಾರೆ. ಈ ಹಿನ್ನೆಲೆ ಅವರಿಗೆ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಚಿತ್ರರಂಗಗಳಿಂದ ಆಫರ್ ಬರುತ್ತಿವೆ. ಟಾಲಿವುಡ್‌ನಲ್ಲಿ ಒಂದೇ ಸಿನಿಮಾ ಮೂಲಕ ಅಲ್ಲಿನ ಪ್ರೇಕ್ಷಕರಿಗೆ ಹತ್ತಿರವಾಗಿರುವ ವಿಜಯ್ ಅವರು ಖಡಕ್ ವಿಲನ್ ಎಂದೇ ಮನೆಮಾತಾಗಿದ್ದಾರೆ. ಹಾಗಾಗಿ ತಮಿಳಿನ ಈ ಸಿನಿಮಾದಲ್ಲೂ ಅವರು ಇದೇ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications