ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆ! ರ‍್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಿಷ್ಟು..
ಕನ್ನಡದ ರ‍್ಯಾಪರ್ ಹಾಗೂ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ ಮತ್ತೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ತಮ್ಮ ಹಾಡುಗಳಿಂದ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಚಂದನ್ ಇತ್ತೀಚೆಗೆ ನಿವೇದಿತಾ ಗೌಡ ಅವರೊಂದಿಗೆ ಬಹಿರಂಗವಾಗಿ ಡಿವೋರ್ಸ್ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು.
ಇದರ ಬೆನ್ನಲ್ಲೇ ಚಂದನ್ ಶೆಟ್ಟಿ ಎರಡನೇ ಮದುವೆ ಮಾಡಿಕೊಳ್ಳಲಿದ್ದಾರೆ. ಈ ಕಾರಣದಿಂದಲೇ ಅವರು ನಿವೇದಿತಾ ಅವರಿಗೆ ಡಿವೋರ್ಸ್ ಕೊಟ್ಟಿದ್ದು ಎಂದೆಲ್ಲ ವದಂತಿಗಳು ಹಬ್ಬಿದ್ದವು. ಇದರ ಬಗ್ಗೆ ಮೌನ ಮುರಿದಿದ್ದ ಚಂದನ್ ಶೆಟ್ಟಿ, ಎಲ್ಲ ವದಂತಿಗಳು ಸುಳ್ಳು ಎಂದು ಹೇಳಿಕೊಂಡಿದ್ದರು.

ಇದಾದ ಕೆಲ ದಿನಗಳ ನಂತರ ಚಂದನ್ ಮತ್ತೊಂದು ನಟಿ ಜೊತೆ ಲವ್‌ನಲ್ಲಿದ್ದಾರೆ. ಅವರನ್ನೇ ಮದುವೆ ಕೂಡ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅದರಲ್ಲೂ ಈ ವದಂತಿಯಲ್ಲಿ ಸ್ಯಾಂಡಲ್‌ವುಡ್ ಬ್ಯೂಟಿ ಸಂಜನಾ ಆನಂದ್ ಅವರ ಹೆಸರು ಜೋರಾಗಿ ಕೇಳಿಬಂದಿತ್ತು.
ಯಾಕೆಂದರೆ ಇತ್ತೀಚೆಗೆ ಚಂದನ್ ಶೆಟ್ಟಿ ಅವರ ನನ್ನ ಡ್ಯಾಶ್ ಮಾಡ್ಕೊಳ್ಳೇ..ಅನ್ನೋ ಹಾಡು ಸಖತ್ ಹಿಟ್ ಆಗಿತ್ತು. ಇದರಲ್ಲಿ ಸಂಜನಾ ಅವರೇ ಚಂದನ್ ಶೆಟ್ಟಿ ಅವರೊಟ್ಟಿಗೆ ಕುಣಿದಿದ್ದರು. ಈ ಹಿನ್ನೆಲೆ ಚಂದನ್ ಇತ್ತೀಚೆಗೆ ಸಂಜನಾ ಅವರೊಂದಿಗೆ ಆತ್ಮೀಯವಾಗಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು.
ಈ ಬಗ್ಗೆ ಖುದ್ದು ಸ್ಪಷ್ಟನೆ ನೀಡಿದ್ದ ಸಂಜನಾ ಆನಂದ್, ಇದೆಲ್ಲ ಸುಳ್ಳು ಸುದ್ದಿ, ಯಾರೂ ನಂಬಬೇಡಿ ಎಂದು ತೆರೆ ಎಳೆದಿದ್ದರು. ಆದರೂ ಇದು ಇಷ್ಟಕ್ಕೇ ನಿಂತಿಲ್ಲ. ಇವರು ಮದುವೆಯಾಗೋದು ಫಿಕ್ಸ್ ಆಗಿದೆ. ಆದರೆ ಸದ್ಯಕ್ಕೆ ಏನೂ ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ ಎನ್ನುವ ವದಂತಿ ಈಗಲೂ ಚಾಲ್ತಿಯಲ್ಲೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಹಾಗೂ ಚಂದನ್ ಶೆಟ್ಟಿ ಅವರ ಫೋಟೋಗಳನ್ನು ಹಂಚಿಕೊಂಡಿರುವ ಹಲವರು ಇವರಿಬ್ಬರು ಹಸೆಮಣೆ ಏರುವುದು ಫಿಕ್ಸ್ ಅಂತೆಲ್ಲ ಬರೆದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು, ಕೆಲವರು ಇಬ್ಬರ ಜೋಡಿ ಚೆನ್ನಾಗಿದೆ ಎಂದೂ ಹರಸಿದ್ದಾರೆ.
ಈ ಲೇಟೆಸ್ಟ್ ವದಂತಿ ಬಗ್ಗೆ ಮೌನ ಮುರಿದಿರುವ ಚಂದನ್ ಶೆಟ್ಟಿ ತಮ್ಮ ಬಗ್ಗೆ ಹರಿದಾಡಿರುವ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ. ದಯವಿಟ್ಟು ಇಂತಹ ಸುಳ್ಳು ವಿಚಾರವನ್ನು ಎಲ್ಲೆಡೆ ಹಬ್ಬಿಸಬೇಡಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸೂತ್ರಧಾರಿ ಸಿನಿಮಾದಲ್ಲಿ ಚಂದನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದು, ಡ್ಯಾಶ್ ಸಾಂಗ್ ಬಂದ ಮೇಲೆ ಇವರಿಬ್ಬರ ಮದುವೆ ವದಂತಿ ಹಬ್ಬಿದೆ ಎನ್ನಲಾಗಿದೆ. ಈಗಾಗಲೇ ಚಂದನ್ ಹಾಗೂ ಸಂಜನಾ ಇಬ್ಬರೂ ಸ್ಪಷ್ಟನೆ ನೀಡಿದ್ದರೂ ಈ ವಿಚಾರ ಹೈಪ್ ಆಗುತ್ತಲೇ ಇದೆ.

ಕೆಲವರು ಚಂದನ್ ಶೆಟ್ಟಿ ಬಗ್ಗೆ ಕೆಟ್ಟದಾಗಿಯೂ ಮಾತನಾಡಿದ್ದು, ನಿವೇದಿತಾ ಗೌಡ ಅವರನ್ನು ಮದುವೆಯಾಗಿ ಹಾಗೇ ಡಿವೋರ್ಸ್ ಕೊಡಬಾರದಿತ್ತು. ಚಂದನ್, ಸಂಜನಾ ಅವರ ಮೇಲಿದ್ದ ಕ್ರಶ್‌ನಿಂದಲೇ ನಿವೇದಿತಾ ಅವರಿಗೆ ಡಿವೋರ್ಸ್ ಕೊಟ್ಟಿದ್ದಾರೆ ಎಂದೆಲ್ಲ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ, ನಿವೇದಿತಾ ಹಾಗೂ ಚಂದನ್ ಶೆಟ್ಟಿ ಪತ್ರಿಕಾಗೋಷ್ಠಿ ನಡೆಸಿಯೇ ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದರು.












Click it and Unblock the Notifications