Kangana Ranaut Cafe: ಕಂಗನಾ ರಣಾವತ್ ಕೆಫೆ- ಒಂದು ಟೀ, ಸಸ್ಯಾಹಾರಿ- ಮಾಂಸಾಹಾರಿ ಥಾಲಿಗೆ ಇಷ್ಟೊಂದು ಬೆಲೆ
ಬಾಲಿವುಡ್ ನಟಿ ಮತ್ತು ಮಂಡಿಯ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಫೆಬ್ರವರಿ 14 ಪ್ರೇಮಿಗಳ ದಿನದಂದು ಕೆಫೆಯನ್ನು ತೆರೆದಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ತಮ್ಮ ಹೊಸ ಕೆಫೆ 'ದಿ ಮೌಂಟೇನ್ ಸ್ಟೋರಿ' ಅನ್ನು ಪ್ರಾರಂಭಿಸಿದ್ದಾರೆ. ಕೆಫೆಯ ಉದ್ಘಾಟನೆಯೊಂದಿಗೆ ಕಂಗನಾ ವ್ಯವಹಾರ ಜಗತ್ತಿಗೆ ಕಾಲಿಟ್ಟಿದ್ದಾರೆ.
ಹೌದು.. ಮಾಧ್ಯಮ ವರದಿಗಳ ಪ್ರಕಾರ ಕೆಫೆ ತೆರೆಯುವ ಮೊದಲು ಕಂಗನಾ ರಣಾವತ್ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮನಾಲಿಯ ಕಾರ್ತಿಕ್ ಸ್ವಾಮಿ ದೇವಸ್ಥಾನವನ್ನು ತಲುಪಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರೇಮಿಗಳ ದಿನದಂದು ಉದ್ಘಾಟನೆಗೊಂಡ ಕಂಗನಾ ಅವರ ಕೆಫೆ 'ದಿ ಮೌಂಟೇನ್ ಸ್ಟೋರಿ' ತನ್ನ ಗ್ರಾಹಕರಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪೂರೈಸಲಿದೆ. ಅಲ್ಲದೆ ಕೆಫೆಗೆ ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ಕೊಡುಗೆಗಳಿವೆ.

30 ರೂ.ಗೆ ಟೀ: ಸಸ್ಯಾಹಾರಿ-ಮಾಂಸಾಹಾರಿ ಥಾಲಿ ಬೆಲೆ ಎಷ್ಟು?
ಕಂಗನಾ ಅವರ ಕೆಫೆಯಲ್ಲಿ ಒಂದು ಕಪ್ ಚಹಾ ಸುಮಾರು 30 ರೂ.ಗೆ ಲಭ್ಯವಿರುತ್ತದೆ. ಸಸ್ಯಾಹಾರಿ ಆಹಾರ ಥಾಲಿ 600 ರಿಂದ 680 ರೂ.ಗಳಿಗೆ ಲಭ್ಯವಿರುತ್ತದೆ ಮತ್ತು ಮಾಂಸಾಹಾರಿ ಥಾಲಿ 800 ರಿಂದ 850 ರೂ.ಗಳಿಗೆ ಸಿಗಲಿದೆ. ಥಾಲಿ ತೆಗೆದುಕೊಳ್ಳುವ ಗ್ರಾಹಕರು ಅದನ್ನು ತಿಂದ ನಂತರ ಹೆಚ್ಚಿನ ಆಹಾರವನ್ನು ಕೇಳಿದರೆ, ಅದಕ್ಕಾಗಿ ಯಾವುದೇ ಹೆಚ್ಚುವರಿ ಬಿಲ್ ವಿಧಿಸಲಾಗುವುದಿಲ್ಲ. ಈ ಥಾಲಿ ಗ್ರಾಹಕರಿಗೆ ಹೊಟ್ಟೆ ತುಂಬಿ ಊಟ ಮಾಡಲು ಬಫೆಯಂತಿರುತ್ತದೆ.
ಹೆತ್ತವರೊಂದಿಗೆ ಕೆಫೆ ಉದ್ಘಾಟಿಸಿದ ಕಂಗನಾ ರನೌತ್
'ದಿ ಮೌಂಟೇನ್ ಸ್ಟೋರಿ' ಕೆಫೆಯ ಉದ್ಘಾಟನೆಗೆ ಕಂಗನಾ ರಣಾವತ್ ತಮ್ಮ ತಂದೆ ಅಮರ್‌ದೀಪ್ ರಣಾವತ್ ಮತ್ತು ತಾಯಿ ಆಶಾ ರಣಾವತ್ ಅವರೊಂದಿಗೆ ಆಗಮಿಸಿದ್ದರು. ಕೆಫೆಯ ಉದ್ಘಾಟನೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲ್ಪಟ್ಟ ಗ್ರಾಮದ ಹಿರಿಯರಿಗೆ ಕಂಗನಾ ಪಹಾಡಿ ಥಾಲಿಯನ್ನು ಉಚಿತವಾಗಿ ನೀಡಿದರು. ಮನಾಲಿಯಲ್ಲಿ ನಿರ್ಮಿಸಿದ ಕಂಗನಾ ಅವರ ಕೆಫೆ ಬೆಟ್ಟದ ಶೈಲಿಯನ್ನು ಆಧರಿಸಿದೆ.
ಸಾಂಪ್ರದಾಯಿಕ ಉಡುಪಿನಲ್ಲಿ ಕೆಫೆ ಸಿಬ್ಬಂದಿ
ಕಂಗನಾ ಅವರ ಕೆಫೆ 'ದಿ ಮೌಂಟೇನ್ ಸ್ಟೋರಿ' ಒಳಗೆ ಮತ್ತು ಹೊರಗೆ ಆಸನ ಸ್ಥಳವನ್ನು ಹೊಂದಿದೆ. ಅಲ್ಲದೆ ಕೆಫೆಯ ಸಂಪೂರ್ಣ ಸಿಬ್ಬಂದಿ ಸಾಂಪ್ರದಾಯಿಕ ಹಿಮಾಚಲಿ ಮತ್ತು ಕುಲ್ವಿ ಉಡುಪುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಫೆಯಲ್ಲಿ ಎಲ್ಲಾ ರೀತಿಯ ಆಹಾರಗಳು ಲಭ್ಯವಿದ್ದು ಹಿಮಾಚಲಿಯ ಅತ್ಯಂತ ಪ್ರಸಿದ್ಧ ಖಾದ್ಯವಾದ ಸಿದ್ದು, ಕಾಂಗ್ರಿ-ಮಂಡ್ಯಾಲಿ ಧಾಮ್ ಮತ್ತು ಲಹೌಲ್‌ನ ಮಾರ್ಚು ಸೇರಿದಂತೆ ಅಂತರರಾಷ್ಟ್ರೀಯ ಭಕ್ಷ್ಯಗಳು ಸಹ ಲಭ್ಯವಿರುತ್ತವೆ.
ಕಂಗನಾ ಕೆಫೆಯ ವಿಡಿಯೋ ವೈರಲ್
ಫೆಬ್ರವರಿ 05 ರಂದು ಕಂಗನಾ ರಣಾವತ್ ತಮ್ಮ ಕೆಫೆ 'ದಿ ಮೌಂಟೇನ್ ಸ್ಟೋರಿ' ಯ ವಿಡಿಯೋ ಹಂಚಿಕೊಂಡಿದ್ದರು. ಈ ವೀಡಿಯೊ ಕೆಫೆಯ ಒಳಾಂಗಣವನ್ನು ತೋರಿಸುತ್ತದೆ. ಕೆಫೆಯಲ್ಲಿ ಮರದ ಪೀಠೋಪಕರಣಗಳು, ಮಂದ ಬೆಳಕಿನಲ್ಲಿರುವ ದೀಪಗಳು ಇದ್ದು ಸಾಂಪ್ರದಾಯಿಕ ಹಿಮಾಚಲಿ ವಿನ್ಯಾಸವನ್ನು ಹೊಂದಿದೆ.
ನನ್ನ ಪುಟ್ಟ ಕೆಫೆ ಎಂದು ಕಂಗನಾ
ವೀಡಿಯೊವನ್ನು ಹಂಚಿಕೊಳ್ಳುವಾಗ ಕಂಗನಾ ರನೌತ್, 'ಬಾಲ್ಯದ ಕನಸು ನನಸಾಗುತ್ತದೆ' ಎಂದು ಬರೆದಿದ್ದಾರೆ. ಹಿಮಾಚಲ ಪ್ರದೇಶದ ಮಡಿಲಲ್ಲಿ ನನ್ನ ಪುಟ್ಟ ಕೆಫೆ ಮಾಡಬೇಕು ಎನ್ನುವ ಆಸೆ ಇತ್ತು. ಆ ಕನಸು ಈಡೇರಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಕಂಗನಾ ರನೌತ್ ಮೂಲತಃ ಸರ್ಕಾಘಾಟ್‌ನ ಭಾಂಬ್ಲಾದ ನಿವಾಸಿ. ಕಂಗನಾ ಮನಾಲಿಯಲ್ಲಿ ಮನೆಯನ್ನು ಸಹ ನಿರ್ಮಿಸಿದ್ದಾರೆ. ಅವರು ಒಂದು ಹೋಟೆಲ್ ಕೂಡ ತೆರೆಯಲಿದ್ದಾರೆ. ಅಲ್ಲದೆ ಇತ್ತೀಚೆಗೆ ಅವರು ಇಲ್ಲಿ ಭೂಮಿ ಖರೀದಿಸಿದ್ದರು. ಇದೀಗ ಕೆಫೆಯನ್ನು ಉದ್ಘಾಟಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.












Click it and Unblock the Notifications