ಕನ್ನಡಿಗರನ್ನು ಕೆಣಕಿದ ಕಮಲ್ ಹಾಸನ್: ಸಿನಿಮಾ ಥಗ್ ಲೈಫ್‌ಗೆ 50 ಕೋಟಿ ಲಾಸ್, ಓಟಿಟಿಯಲ್ಲೂ ಶಾಕ್!

ಬಹು ನಿರೀಕ್ಷೆ ಮೂಡಿಸಿ, ಅನವಶ್ಯಕ ವಿವಾದವನ್ನು ಸೃಷ್ಟಿಸಿಕೊಂಡು ಮಕಾಡೆ ಮಲಗಿದ್ದ ನಟ ಕಮಲ್ ಹಾಸನ್ ಅವರು ನಟಿಸಿದ್ದ ಥಗ್ ಲೈಫ್ ಮತ್ತೊಮ್ಮೆ ಲಾಸ್‌ನಿಂದ ಸುದ್ದಿಯಲ್ಲಿದೆ. ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಕೊಟ್ಟ ವಿವಾದಾತ್ಮಕ ಹೇಳಿಕೆ ಥಗ್‌ಲೈಫ್‌ ಸಿನಿಮಾ ಕರ್ನಾಟಕದಲ್ಲಿ ಬರೋಬ್ಬರಿ
50 ಕೋಟಿಗೂ ಹೆಚ್ಚು ಲಾಸ್ ಆಗುವುದಕ್ಕೆ ಕಾರಣವಾಗಿತ್ತು. ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಕಮಲ್ ಕ್ಷಮೆ ಕೇಳಲಿಲ್ಲ. ಇದೀಗ ಚಿತ್ರತಂಡಕ್ಕೆ ಮತ್ತೊಂದು ಭರ್ಜರಿ ಲಾಸ್‌ ಆಗಿರುವುದು ವರದಿಯಾಗಿದೆ.

ಮಣಿರತ್ನಂ ಅವರು ನಿರ್ದೇಶಿಸಿದ್ದ ಹಾಗೂ ಬಹು ನಿರೀಕ್ಷಿತ ಸಿನಿಮಾ ಥಗ್ ಲೈಫ್ ಸಿನಿಮಾ ಭರ್ಜರಿ ಲಾಸ್ ಆಗಿದೆ. ಕರ್ನಾಟಕದಲ್ಲಿ ಈ ಸಿನಿಮಾ ಏನೆಲ್ಲಾ ಸರ್ಕಸ್ ಮಾಡಿದ ಮೇಲೆಯೂ ಬಿಡುಗಡೆ ಆಗಿರಲಿಲಲ್ಲ. ಹೀಗಾಗಿ, ಈ ಸಿನಿಮಾದ ಲಾಸ್ ಪ್ರಮಾಣ ಭಾರೀ ಹೆಚ್ಚಳವಾಗಿದೆ. ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದೆ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಯಾವುದೇ ಸುಳಿವು ಸಹ ಇಲ್ಲದೆ ಏಕಾಏಕಿ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲಾಗಿತ್ತು. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್‌ಗೆ ಕಮಲ್ ಹಾಸನ್ ಹೋಗಿದ್ದರು. ಆದರೆ ಅವಕಾಶ ಸಿಕ್ಕರೂ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಿರಲಿಲ್ಲ.

Kamal Haasan angers Kannadigas Thug Life movie lost Rs 50 crore OTT also failed

ತಮಿಳು ಭಾಷೆಯಿಂದಲೇ ಕನ್ನಡ ಬಂದಿದೆ ಎನ್ನುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕನ್ನಡಿಗರು ಕಮಲ್ ಹಾಸನ್ ಅವರ ಹೇಳಿಕೆಗೆ ಕೆಂಡಾಮಂಡಲರಾಗಿದ್ದರು. ಎರಡೂ ಭಾಷೆಗಳು ಸ್ವತಂತ್ರ್ಯ ಹಾಗೂ ಸಹೋದರ ಭಾಷೆಗಳು. ದ್ರಾವಿಡ ಭಾಷೆಗಳೆಲ್ಲವೂ ಸಹೋದರ ಭಾಷೆಗಳು. ಒಂದು ಭಾಷೆಯನ್ನು ದೊಡ್ಡದು - ಮತ್ತೊಂದು ಭಾಷೆಯನ್ನು ಚಿಕ್ಕದು ಅಂತ ಹೇಳಬಾರದು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ವಿಷಯವೇನೆಂದರೆ ಕಮಲ್ ಅವರ ಸಿನಿಮಾ ಓಟಿಟಿಯಲ್ಲೂ ಕ್ಲಿಕ್ ಆಗುತ್ತಿಲ್ಲ. ಫ್ರೀಯಾಗಿ ಕೊಟ್ಟರೂ ನಾವು ನೋಡಲ್ಲ ಅಂತ ಜನ ಹೇಳುವಂತಾಗಿದೆ.

ಈ ಸಿನಿಮಾವನ್ನು ತಮಿಳು ಪ್ರೇಕ್ಷಕರೇ ಮೆಚ್ಚಿಕೊಂಡಿರಲಿಲ್ಲ. ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಟ್ರೋಲ್ ಶುರುವಾಗಿತ್ತು. ತಮಿಳಿನಲ್ಲಿ ಸಿನಿಮಾ ಟ್ರೋಲ್ ಆಗುವುದಕ್ಕೆ ಶುರುವಾದ ಬೆನ್ನಲ್ಲೇ ಸಿನಿಮಾ ಸೋತಿತ್ತು. ಸಿನಿಮಾದ ಹೀನಾಯಿ ಸೋಲಿನ ನಂತರವೂ ಕಮಲ್ ಕನ್ನಡಿಗರ ಕ್ಷಮೆ ಕೇಳಿರಲಿಲ್ಲ. 8 ವಾರಗಳ ನಂತರ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಒಪ್ಪಂದವಾಗಿತ್ತು. ಆದರೆ ಈ ಸಿನಿಮಾ, 4 ವಾರ ಕಳೆಯುವುದರ ಒಳಗೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಆದರೆ ಇಲ್ಲೂ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇಲ್ಲೂ ಸಿನಿಮಾ ಫ್ಲಾಪ್ ಆಗಿತ್ತು.

ಇನ್ನು ಅಂದಾಜು 130 ಕೋಟಿ ರೂಪಾಯಿಗೆ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ತೆಗೆದುಕೊಂಡಿತ್ತು ಎಂದು ಹೇಳಲಾಗಿದೆ. ಆದರೆ ಸಿನಿಮಾ ಸೋತಿದ್ದರಿಂದ ಆ ಮೊತ್ತವನ್ನು ತಗ್ಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲೂ ಕೂಡ ಕಮಲ್ ಹಾಸನ್‌ಗೆ ಹಿನ್ನಡೆ ಆಗಿದೆ. ಕನ್ನಡಿಗರನ್ನು ಕೆಣಕಿದ ಕಮಲ್ ಹಾಸನ್ ಅವರಿಗೆ ಎಲ್ಲಾ ಕಡೆಗಳಿಂದಲೂ ಲಾಸ್ ಆಗಿದೆ. ಥಗ್‌ಲೈಫ್ ಸಿನಿಮಾದ ಬಜೆಟ್‌ ಬರೋಬ್ಬರಿ 200 ಕೋಟಿ ರೂ. ಎಂದು ಹೇಳಲಾಗಿದೆ. ನಿರ್ಮಾಣದ ಅರ್ಧದಷ್ಟು ಹಣವೂ ವಾಪಸ್‌ ಬಂದಿಲ್ಲ ಎಂದೇ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+