Kaatera: ಡಿಸೆಂಬರ್ 29ರಂದು ಕಾಟೇರ ರಿಲೀಸ್: ಅಭಿಮಾನಿಗಳ ಸಂಭ್ರಮ

2023ರ ಚಂದನವನದ ಬಹುನಿರೀಕ್ಷಿತ ಚಿತ್ರ ಕಾಟೇರ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಡಿಸೆಂಬರ್ 29ರಂದು ಚಾಲೆಂಜಿಂಗ್ ಸ್ಟಾರ್ ಕಾಟೇರನಾಗಿ ತೆರೆ ಮೇಲೆ ಅಬ್ಬರಿಸಲಿದ್ದಾರೆ.

ಬುಧವಾರ ಚಿತ್ರತಂಡ ಅಭಿಮಾನಿಗಳಿಗೆ ಅಚ್ಚರಿ ಜೊತೆ ಸಂತಸದ ಸುದ್ದಿ ನೀಡಿದೆ. ಚಿತ್ರದ ಮೇಕಿಂಗ್, ದರ್ಶನ್ ಅವತಾರದ ಝಲಕ್ ಅನ್ನು ಬಿಡುಗಡೆ ಮಾಡುವ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.

 Kaatera Release Date Confirmed: Challenging Star Darshan Set to Arrive on December 29

ಕ್ರಾಂತಿ ಸಿನಿಮಾ ನಿರೀಕ್ಷೆ ಮಾಡಿದಷ್ಟು ಹಿಟ್ ಆಗದಿದ್ದ ಕಾರಣ ಕಾಟೇರ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಚಿತ್ರ ಸ್ಯಾಂಡಲ್‌ವುಡ್ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.

ದರ್ಶನ್ ಹೊಸ ಅವತಾರ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್‌ ಅವತಾರದಲ್ಲಿ ಈಗಾಗಲೇ ಮಿಂಚಿದ್ದಾರೆ. ಆದರೆ ಇದು ರೆಟ್ರೋ ಶೈಲಿಯ ಗ್ರಾಮೀಣ ಹಿನ್ನಲೆಯಲ್ಲಿ ನಡೆಯುವ ಕತೆಯಾಗಿದ್ದು, 1980 ರ ದಶಕದ ಗ್ರಾಮೀಣ ಹಿನ್ನಲೆಯಲ್ಲಿ ಚಿತ್ರದ ಕತೆ ಇರಲಿದೆ.

ಪಂಚೆಯುಟ್ಟು ಹಳ್ಳಿ ಹೈದನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ, ಅಲ್ಲದೆ ಭರಪೂರ ಮನರಂಜನೆ ಜೊತೆಗೆ ಮಾಸ್ ದೃಶ್ಯಗಳು ನೋಡುಗರನ್ನು ರೋಮಾಂಚನಗೊಳಿಸಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ದರ್ಶನ್ ಕೂಡ ಚಿತ್ರದ ಬಗ್ಗೆ ಈಗಾಗಲೇ ಅನೇಕ ಕಡೆಗಳಲ್ಲಿ ಮಾತನಾಡಿದ್ದು, ಹಿಂದೆಂದೂ ನೋಡಿರದ ದರ್ಶನ್‌ರನ್ನು ಚಿತ್ರದಲ್ಲಿ ನೋಡಬಹುದು ಎಂದು ಹೇಳಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

ಅದ್ದೂರಿ ನಿರ್ಮಾಣ!

ಕಾಟೇರ ಚಿತ್ರದಕ್ಕೆ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಅದ್ದೂರಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರ ನಿರ್ಮಾಣದಲ್ಲಿ ಯಾವುದೇ ಕೊರತೆಯಾಗದಂತೆ ನಿರ್ಮಾಪಕರು ಹಣ ಸುರಿದಿದ್ದಾರೆ.

ತರುಣ್‌ ಕಿಶೋರ್ ಸುಧೀರ್ ಈ ಅದ್ದೂರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ಸುಧಾಕರ್ ಎಸ್‌ ರಾಜ್ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಜಡೇಶ್ ಹಂಪಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕನಸಿನ ರಾಣಿ ಮಾಲಾಶ್ರಿ ಪುತ್ರಿ ಆರಾಧನಾ ರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು ಕೂಡ ಚಿತ್ರದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+