ಗಿಲ್ಲಿ ಕ್ರೇಜ್‌ ಎಲ್ಲ ಜನ ಮರುಳೋ ಜಾತ್ರೆ ಮರುಳೋ, ಅದ್ರಲ್ಲಿ ಆಶ್ಚರ್ಯ ಏನಿಲ್ಲ: ಜಾನ್ವಿ

ಬಿಗ್‌ಬಾಸ್‌ ಮನೆಯ ಹಾಟ್‌ಟಾಪಿಕ್‌ಗಳಲ್ಲಿ ಗಿಲ್ಲಿ ಸಹ ಒಬ್ಬರು. ಗಿಲ್ಲಿಗೆ ಈಗ ಸಿಕ್ಕಾಪಟ್ಟೆ ಕ್ರೇಜ್‌ ಹಾಗೂ ಫ್ಯಾನ್‌ ಫಾಲೋಯಿಂಗ್‌ ಇರುವುದು ಗೊತ್ತೇ ಇದೆ. ಇನ್ನು ಇತ್ತೀಚೆಗಷ್ಟೇ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿರುವ ಜಾನ್ವಿ ಗಿಲ್ಲಿ ಬಗ್ಗೆ ಅಚ್ಚರಿ ಹೇಳಿಕೆಗನ್ನು ನೀಡಿದ್ದಾರೆ. 'ಗಿಲ್ಲಿ ಕ್ರೇಜ್‌ ನೋಡಿದಾಗ ನನಗೆ ಏನೂ ಅನಿಸಲಿಲ್ಲ. ಯಾಕಂದ್ರೆ ಜನ ಮರುಳೋ ಜಾತ್ರೆ ಮರುಳೋ ಅನ್ನೋದು ನನಗೆ ಗೊತ್ತು. ಬಿಗ್‌ಬಾಸ್‌ ಅಂತ ಬಂದಾಗ ಕೆಲವರಿಗೆ ಆ ಮಟ್ಟದ ಫ್ಯಾನ್‌ ಫಾಲೋಯಿಂಗ್‌ ಸಿಗೋದು ನಾನು ನೋಡಿದ್ದೀನಿ' ಎಂದು ಜಾನ್ವಿ ಹೇಳಿದ್ದಾರೆ.

'ಹಿಂದಿನ ಸೀಸನ್‌ಗಳಲ್ಲೂ ಇದೇ ರೀತಿ ತುಂಬಾ ಜನ ಇದ್ರು, ಅವರ ಹೆಸರು ಹೇಳಲ್ಲ. ಗಿಲ್ಲಿ ಕ್ರೇಜ್‌ ನೋಡಿ ನನಗೆ ಯಾವುದೇ ರೀತಿಯ ಶಾಕ್‌ ಅಥವಾ ಆಶ್ಚರ್ಯ ಆಗಲ್ಲ. ಜನರಿಗೆ ಅವರಲ್ಲಿ ಏನೋ ಇಷ್ಟ ಆಗಿರುತ್ತೆ, ಇಷ್ಟಪಡುತ್ತಾರೆ. ಮುಂದಿನ ಸೀಸನ್‌ ಬರುವವರೆಗೆ ಇದೆಲ್ಲ ಇದ್ದೇ ಇರುತ್ತೆ. ಜನರು ಈ ರೀತಿ ಇಷ್ಟಪಡುತ್ತಿರುವುದು ಅವರ ಆಯ್ಕೆಗೆ ಬಿಟ್ಟಿದ್ದು. ಮನೆಯೊಳಗೆ ನಮಗೆ ಇರಿಟೇಟ್‌ ಆಗೋದು ಹೊರಗಿರುವ ಜನಕ್ಕೆ ಇಷ್ಟ ಆಗಬಹುದು. ನಾವು ಬಿಗ್‌ಬಾಸ್‌ ಮನೆಯೊಳಗೆ ನೋಡುವ ದೃಷ್ಟಿಯೇ ಬೇರೆಯಾದರೆ, ಹೊರಗಿನಿಂದ ನೋಡುವ ದೃಷ್ಟಿಯೇ ಬೇರೆ ಇರುತ್ತೆ' ಎಂದಿದ್ದಾರೆ.

Jhanvi Reacts To Gilli Massive Craze In Bigg Boss Kannada I Was Not Surprised

'ಹೀಗಾಗಿ ಗಿಲ್ಲಿ ಕ್ರೇಜ್‌ ನೋಡಿ ನನಗೆ ಏನೂ ಅನಿಸಲಿಲ್ಲ. ನಿಜ ಹೇಳಬೇಕು ಅಂದ್ರೆ ಬಿಗ್‌ಬಾಸ್‌ ಅಂದ್ರೆನೇ ಕ್ರೇಜ್‌ ಇದೆ. ಅಲ್ಲಿ ಪಾಸಿಟಿವ್‌ ಇರೋರು ನೆಗೆಟಿವ್‌ ಆಗ್ತಾರೆ, ನೆಗೆಟಿವ್‌ ಇರೋರು ಪಾಸಿಟಿವ್‌ ಆಗ್ತಾರೆ. ಅದು ಆ ಶೋಗೆ ಇರುವ ಶಕ್ತಿ. ಜನ ಈ ಶೋನ ಎಷ್ಟು ಸೀರಿಯಸ್‌ ಆಗಿ ನೋಡ್ತಾರೆ ಅನ್ನೋದು ನನಗೆ ಗೊತ್ತು. ಗಿಲ್ಲಿ ಮಾಡೋ ಕಾಮಿಡಿ ಇಷ್ಟ ಆಗಿ ಜನ ಅವನನ್ನ ಇಷ್ಟಪಡ್ತಾರೆ ಅನ್ನೋದ್ರಲ್ಲಿ ನನಗೆ ಎಂತಹ ಆಶ್ಚರ್ಯವೂ ಇಲ್ಲ' ಎಂದು ಜಾನ್ವಿ ಹೇಳಿದ್ದಾರೆ.

'ಗಿಲ್ಲಿ ಇರೋದು ಕಾವ್ಯಗೆ ಪ್ಲಸ್‌'

'ಇನ್ನು ಗಿಲ್ಲಿ ಇರೋದ್ರಿಂದ ಕಾವ್ಯಗೆ ಪ್ಲಸ್‌ ಆಗಿದೆ. ಗಿಲ್ಲಿ ಜೊತೆಗೆ ಕಾವ್ಯ ಜಂಟಿಯಾಗಿ ಹೋಗಿದ್ದು ಕೂಡ ಪ್ಲಸ್‌. ಒಂದು ವೇಳೆ ಗಿಲ್ಲಿ ಇಲ್ಲದೆ ಕಾವ್ಯನ ತಗೊಂಡಾದ ತುಂಬಾ ಡಲ್‌ ಆಗಿ ಕಾಣ್ತಾರೆ. ಈಗಲೂ ಕಾವ್ಯ ಡಲ್‌ ಎಂದಿದ್ದಾರೆ. ಇನ್ನು ಗಿಲ್ಲಿ ಹಾಗಲ್ಲ, ಯಾರಿಲ್ಲ ಅಂದ್ರೂ ಡಲ್‌ ಆಗೋದಿಲ್ಲ. ಅಷ್ಟು ಕಿಲಾಡಿ ಇದ್ದಾನೆ, ಮಾತನಾಡುತ್ತಲೇ ಇರ್ತಾನೆ, ಶರೀರದಲ್ಲಿ ಶಕ್ತಿ ಇಲ್ಲದಿದ್ದರೂ ಕಂಠದಲ್ಲಿ ಇದ್ದೇ ಇದೆ' ಎಂದಿದ್ದಾರೆ.

'ನಾನು ಗಿಲ್ಲಿಗೆ ಸೊಂಟ ಇಲ್ಲ ಅಂತ ಹೇಳ್ತಿದ್ದೆ. ಗಿಲ್ಲಿ ಯಾವಾಗಲೂ ಮಲಗೇ ಇರುತ್ತಿದ್ದ. ಅವನು ನೇರವಾಗಿ ಕುಳಿತಿದ್ದೇ ನಾನು ನೋಡಲಿಲ್ಲ. ಹೀಗಾಗಿ ಗಿಲ್ಲಿಗೆ ಕಾವ್ಯ ಇಲ್ಲದಿದ್ರೂ ನಡೆಯುತ್ತೆ. ಅದಕ್ಕೆ ಇನ್ನೊಂದು ದಾರಿ ಹಿಡಿಯೋದ್ರಲ್ಲಿ ಎತ್ತಿದಕೈ ಗಿಲ್ಲಿ. ಅವನಿಗೆ ರಿಯಾಲಿಟಿ ಶೋಗಳ ಬಗ್ಗೆ ಚೆನ್ನಾಗಿ ಗೊತ್ತಿದೆ' ಎಂದು ಹೇಳಿದ್ದಾರೆ.

'ರಕ್ಷಿತಾ ಶೆಟ್ಟಿ ತುಂಬಾ ಸ್ಮಾರ್ಟ್‌, ಜೊತೆಯಲ್ಲಿದ್ದಾಗ ಏನಾದ್ರೂ ಸರಿಯಿಲ್ಲ ಅಂದಾಗ ಅದನ್ನು ನೇರವಾಗಿ ಹೇಳ್ತಾಳೆ, ಅದನ್ನ ಮೆಚ್ಚಿಕೊಳ್ಳಬೇಕು. ಇದು ನನಗೆ ಟಾರ್ಗೆಟ್‌ ಅಂತ ಅನಿಸಲ್ಲ. ಅವಳು ಎಲ್ಲದಕ್ಕೂ ಓವರ್‌ ಆಗಿ ರಿಯಾಕ್ಟ್‌ ಆಗ್ತಾಳೆ, ನಮ್ಮಂತೆ ನಾರ್ಮಲ್‌ ಇರಲ್ಲ' ಎಂದಿದ್ದಾರೆ ಜಾನ್ವಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+