Jayam Ravi: ಕಾಲಿವುಡ್ ನಟನ ಬಾಳಲ್ಲೂ ವಿಚ್ಛೇದನದ ಬಿರುಗಾಳಿ?
ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ನಟ, ನಟಿಯರ ವಿವಾದಗಳಿಂದಲೇ ಸಖತ್ ಸುದ್ದಿಯಾಗುತ್ತಿದ್ದಾರೆ. ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಚೇದನ, ಯುವ ರಾಜ್‌ಕುಮಾರ್ ದಾಂಪತ್ಯದಲ್ಲಿ ಕಲಹ, ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಸಾಕಷ್ಟು ಸದ್ದು ಮಾಡಿತ್ತು. ಈಗ ತಮಿಳು ಚಿತ್ರರಂಗದ ಖ್ಯಾತ ನಟನ ಬಾಳಲ್ಲೂ ಬಿರುಗಾಳಿ ಎದ್ದಿರುವ ಬಗ್ಗೆ ಸುದ್ದಿಯಾಗುತ್ತಿದ್ದು, ವಿಚ್ಛೇದನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಜಯಂ ರವಿ ಮತ್ತು ಆರತಿ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಈಗ ಸದ್ದು ಮಾಡುತ್ತಿದೆ. ಆರತಿ ರವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಂಡ ಜಯಂ ರವಿ ಜೊತೆ ಇರುವ ಫೋಟೊಗಳನ್ನು ಅಳಿಸಿಹಾಕಿದ್ದು ಈ ಅನುಮಾನಕ್ಕೆ ಕಾರಣವಾಗಿದೆ.

ಇಬ್ಬರು ಬೇರ್ಪಡುವ ಬಗ್ಗೆ ವದಂತಿ ಹಬ್ಬಿದ್ದು. ಆರತಿ ಅವರ ಹೊಸ ಇನ್‌ಸ್ಟಾಗ್ರಾಮ್ ಅಪ್‌ಡೇಟ್ ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.
ಜಯಂ ರವಿ ಅವರ ಪತ್ನಿ ಆರತಿ ತಮ್ಮ ಇನ್‌ಸ್ಟಾಗ್ರಾಂ ಬಯೋವನ್ನು ಉಳಿಸಿಕೊಂಡಿದ್ದಾರೆ, ಜಯಂ ರವಿ ಅವರ ಪತ್ನಿ ಆರತಿ ರವಿ ಅವರು ಜಯಂ ರವಿ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ಇನ್‌ಸ್ಟಾಗ್ರಾಂನಿಂದ ತೆಗೆದುಹಾಕಿದ್ದಾರೆ" ಎಂದು ಎಕ್ಸ್ ಬಳಕೆದಾರರು ಹೇಳಿದ್ದಾರೆ.
ಆರತಿ ರವಿ ತನ್ನ ಮದುವೆಯ ಜೀವನದ ಚಿತ್ರಗಳನ್ನು ಖಾಸಗಿಯಾಗಿ ಇರಿಸಿದ್ದಾರೆ ಮತ್ತು ಇನ್ಸ್ಟಾದಲ್ಲಿ ತನ್ನ ವೈಯಕ್ತಿಕ ಚಿತ್ರಗಳನ್ನು ಮಾತ್ರ ಹಾಕುತ್ತೇನೆ ಎಂದು ಅವರು ಇನ್‌ಸ್ಟಾಗ್ರಾಂ ಪ್ರಶ್ನೋತ್ತರದ ವೇಳೆ ಹೇಳಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.
ಅವರ ವೈಯಕ್ತಿಕ ಬದುಕಿನ ಬಗ್ಗೆ ನೀವೇಕೆ ಅಷ್ಟು ತಲೆ ಕೆಡಿಸಿಕೊಂಡಿದ್ದೀರಾ? ಅವರು ನಿಮಗೆ ಹೇಗಾದರೂ ಸಂಬಂಧ ಹೊಂದಿದ್ದಾರೆಯೇ? ಅರ್ಥವಿಲ್ಲದ ಅನಿಸಿಕೆಗಳಿಗಾಗಿ ಮನುಷ್ಯರು ಏಕೆ ತುಂಬಾ ಕೆಳಮಟ್ಟಕ್ಕೆ ಹೋಗುತ್ತಿದ್ದಾರೆ? ನಿಮ್ಮ ಭವಿಷ್ಯದ ಬಗ್ಗೆ ನೀವು ಆಘಾತಕ್ಕೊಳಗಾಗುವ ಮೊದಲು ನಿಮ್ಮ ಸ್ವಂತ ಜೀವನವನ್ನು ನೀವು ಕಾಳಜಿ ವಹಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಭಿಮಾನಿಯೊಬ್ಬರು ಸ್ಕ್ರೀನ್‌ಶಾಟ್ ಹಂಚಿಕೊಳ್ಳುವ ಮೂಲಕ ಆರತಿ ಅವರ ಇನ್‌ಸ್ಟಾಗ್ರಾಮ್ ಬಯೋವನ್ನು ಗಮನಸೆಳೆದರು ಮತ್ತು "ಇನ್ನೂ ಜಯಂ ರವಿ ಅವರನ್ನು ಮದುವೆಯಾಗಿದ್ದಾರೆ ಎಂದು ಉಲ್ಲೇಖಿಸಿದ್ದೇನೆ ಮತ್ತು ಇದು ವದಂತಿ ಎಂದು ನಾನು ನಂಬುತ್ತೇನೆ ಮತ್ತು ಈ ದಂಪತಿಗಳು ಕೊನೆಯವರೆಗೂ ಜೊತೆಯಿರುತ್ತಾರೆ ಎಂದು ಹೇಳಿದ್ದಾರೆ.
ಜಯಂ ರವಿ ಹಲವು ತಮಿಳಿನಿ ಯಶಸ್ವಿ ನಾಯಕನಟರಲ್ಲಿ ಒಬ್ಬರಾಗಿದ್ದಾರೆ. ಅವರ ಇತ್ತೀಚಿನ ಸಿನಿಮಾ ಸೈರನ್ ಕೂಡ ಹಿಟ್ ಆಗಿತ್ತು. ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾದಲ್ಲಿ ಜಯಂ ರವಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications