Janhvi Kapoor: ಮಾಜಿ ಸಿಎಂ ಮೊಮ್ಮಗನ ಜೊತೆ ಸಪ್ತಪದಿ ತುಳಿಯಲಿರುವ ಜಾನ್ವಿ ಕಪೂರ್..! ಡೇಟ್ ಫಿಕ್ಸ್?
ಬೆಂಗಳೂರು, ಏಪ್ರಿಲ್ 02: ಜಾನ್ವಿ ಕಪೂರ್ (Janhvi Kapoor) ಯಾರಿಗೆತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್‌ನಲ್ಲಿ ಕೆಲವು ಸಿನಿಮಾಗಳಲ್ಲಿ ಸಖತ್ ಬ್ಯೂಸಿಯಾಗಿರುವ ನಟಿ ಜಾನ್ವಿ ಕಪೂರ್ ಅವರು ವೈವಾಹಿಕ ಜೀವನಕ್ಕೆ ಕಾಲಿಡುವ ದಿನಗಳು ಹತ್ತಿರವಾಗುತ್ತಿವೆ. ತನ್ನ ಸೌಂದರ್ಯದಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಚೆಲುವೆ ತನ್ನ ಪ್ರಿಯಕರ ಮಾಜಿ ಸಿಎಂ ಮೊಮ್ಮಗನ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.
ಹೌದು, ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯ ಮೊಮ್ಮಗ ಶಿಖರ್ ಪಹಾರಿಯಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದು ಗುಟ್ಟಾಗೇನು ಉಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವಿಚಾರ ಭಾರೀ ಸದ್ದು ಮಾಡುತ್ತಿದೆ.

ಇದರ ಬೆನ್ನಲ್ಲೆ ಇದೀಗ ನಟಿ ಜಾನ್ವಿ ಕಪೂರ್ ಶಿಖರ್ ಜೊತೆಗೆ ವಿವಾಗವಾಗಲಿದ್ದಾರೆ. ಆದಷ್ಟು ಶೀಘ್ರವೇ ವಿವಾಹ ದಿನಾಂಕ ಫೀಕ್ಸ್ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ವಿಚಾರ ಅವರ ಅಭಿಮಾನಿಗಳಲ್ಲಿ ಖುಷಿ ಹೆಚ್ಚಾಗುವಂತೆ ಮಾಡಿದೆ.
ಸೀಕ್ರೆಟ್ ಕಾಪಾಡಿಕೊಂಡು ಬಂದಿದ್ದ ನಟಿ
ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಮಧ್ಯೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂಬ ಗುಸು ಗುಸು ಬಹಳ ದಿನಗಳ ಹಿಂದೆಯೇ ಕೇಳಿ ಬಂದಿತ್ತು. ಆದರೂ ನಟಿ ತಮ್ಮ ಲವ್ ಬಹಿರಂಗವಾಗಿ ಹೇಳದೇ ಸಾಕಷ್ಟು ಸಮಯದಿಂದಲೂ ಸೀಕ್ರೆಟ್ ಕಾಪಾಡಿಕೊಂಡು ಬಂದಿದ್ದರು. ಆದರೂ ಇವರಿಬ್ಬರ ಹೆಸರು ಬಹಿರಂಗವಾಗಿಯೇ ಕೇಳಿ ಬಂದಿತ್ತು.
ಆಗಾಗ ಇಬ್ಬರು ಕಾಣಿಸಿಕೊಳ್ಳುತ್ತಿದ್ದರು. ನಟಿ ಮತ್ತು ಶಿಖರ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅವರು ಜೊತೆಗಿದ್ದ ಫೋಟೋ ಬಹಿರಂಗವಾಗದ ಬಳಿಕ ಖಚಿತವಾಗಿತ್ತು. ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಸಹ ಇತ್ತೀಚೆಗೆ ಮಹಾರಾಷ್ಟ್ರದ ಮಾಜಿ ಸಿಎಂ ಮೊಮ್ಮಗನ ಕುರಿತು ಪ್ರತಿಕ್ರಿಯಿಸಿದ್ದರು.

ಶಿಖರ್ ವ್ಯಕ್ತಿತ್ವ ಕೊಂಡಾಡಿದ ಬೋನಿ ಕಪೂರ್
ಇಬ್ಬರು ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬೆನ್ನಲ್ಲೆ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಅವರು ಬಹಿರಂಗವಾಗಿಯೇ ಶಿಖರ್ ಪಹಾರಿಯಾ ಬಗ್ಗೆ ಮಾತನಾಡಿದ್ದಾರೆ.
ಶಿಖರ್ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದು, ಅವರು ನನಗೂ ಸ್ನೇಹಿತರಂತಿದ್ದಾರೆ. ಅವರು ಎಂದಿಗೂ ಜಾನ್ವಿಯ ಎಕ್ಸ್ ಅಲ್ಲಾ, ಸದಾ ನಮ್ಮೊಂದಿಗೆ ಜೊತೆಗೇ ಇರುವವರು. ಯಾವಾಗಲೂ ಅವರು ನಮ್ಮ ಸಹಾಯಕ್ಕೆ ಬರುತ್ತಾರೆ ಎಂದು ಶಿಖರ್ ಅವರು ವ್ಯಕ್ತತ್ವವನ್ನು ಕೊಂಡಾಡಿದರು.
ಜಾನ್ವಿ ಲವ್‌ಗೆ ಅಪ್ಪ ಗ್ರೀನ್ ಸಿಗ್ನಲ್?
ಬೋನಿ ಕಪೂರ್ ಅವರು ಈ ರೀತಿ ಹೇಳುವುದನ್ನು ನೋಡದರೆ, ಅವರು ಪುತ್ರಿ ಜಾನ್ವಿ ಕಪೂರ್ ಲವ್‌ಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವು ಬಾಲಿವುಡ್ ಅಂಗಳದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.'












Click it and Unblock the Notifications