Chandan Shetty 2nd Marriage: ಎರಡನೇ ಮದುವೆ ಆಗಲು ರೆಡಿಯಾದ್ರಾ ಚಂದನ್ ಶೆಟ್ಟಿ? ಹುಡುಗಿ ಇವರೇ ಅಂತೆ ನೋಡಿ
ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪ್ರೀತಿಸಿ ಮದುವೆಯಾದವರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕಾಲ ಕಳೆದಂತೆ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದೆ. ಸದ್ಯ ನಿವೇದಿತಾ ಗೌಡ ಅವರು ರೀಲ್ಸ್ ಮಾಡುತ್ತಾ ಬಿಂದಾಸ್ ಆಗಿದ್ದಾರೆ. ಇತ್ತ ಚಂದನ್ ಶೆಟ್ಟಿ ಅವರು ಸಹ ಹಾಡುಗಳನ್ನ ಬಿಡುಗಡೆ ಮಾಡುತ್ತಾ ಫುಲ್ ಬ್ಯುಸಿಯಾಗಿದ್ದಾರೆ.
ನಿವೇದಿತಾ ಗೌಡ ಅವರಿಗೆ ಡಿವೋರ್ಸ್ ನೀಡಿದ ನಂತರ ಕೆಲಸದಲ್ಲಿ ಹೆಚ್ಚೆಚ್ಚು ತಲ್ಲೀನವಾಗಿರುವ ಚಂದನ್ ಶೆಟ್ಟಿ ಸದ್ಯ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ಹಾಡಿನ ಹೆಸರು 'ಕಾಟನ್ ಕ್ಯಾಂಡಿ'. ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಬಿಡುಗಡೆಯಾದ ಈ ಹಾಡಿನಲ್ಲಿ ದುಬೈನ ಮನಮೋಹಕ ದೃಶ್ಯಗಳಿವೆ. ಅದ್ಧೂರಿತನ ಹಾಡಿನಲ್ಲಿ ಹಾಸು ಹೊಕ್ಕಿದ್ದು, ಈ ಸಾಂಗ್ ಬಿಡುಗಡೆಯ ಮಧ್ಯ ಚಂದನ ಶೆಟ್ಟಿ ಅವರು ಎರಡನೇ ಮದುವೆಗೆ ರೆಡಿಯಾದ್ರಾ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.

ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಾಂಗ್‌ಗಳನ್ನು ನೀಡಿರುವ ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ಹೊಸ ಸಾಂಗ್ ಬಿಡುಗಡೆಯಾಗಿದ್ದು, ರಿಲೀಸ್ ಆದ ಒಂದೇ ದಿನಕ್ಕೆ ʼಕಾಟನ್ ಕ್ಯಾಂಡಿʼ ಹಾಡು ಸಖತ್ ಹಿಟ್ ಆಗಿದೆ. ಹೊಸ ವರ್ಷ ಹತ್ತಿರವಿರುವಾಗಲೇ ಈ ಹಾಡು ಬಿಡುಗಡೆಯಾಗಿದ್ದು, ಇದು ಪಾರ್ಟಿ ಸಾಂಗ್ ಅಂತಾ ಸೋಷಿಯಲ್ ಮೀಡಿಯಾ ಬಳಕೆದಾರರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದೀಗ ರಿಲೀಸ್ ಆಗಿರುವ ʼಕಾಟನ್ ಕ್ಯಾಂಡಿʼ ಹಾಡಿನಲ್ಲಿ ಚಂದನ್ ಶೆಟ್ಟಿ ತಮಗೆ ಬ್ರೇಕಪ್ ಆಗಿರೋ ಬಗ್ಗೆ ತಿಳಿಸಿದ್ದಾರೆ. ಇದು ಚಂದನ್ ಶೆಟ್ಟಿ ತಮ್ಮ 2ನೇ ಮದುವೆ ಬಗ್ಗೆ ನೀಡಿರೋ ಸುಳಿವು ಇರಬಹುದು ಎಂದು ಹೇಳಲಾಗಿದೆ.
ಚಂದನ್ ಶೆಟ್ಟಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದು, ರೂಲ್ಸ್‌ನ ಪ್ರಕಾರವೇ ಈ ಜೋಡಿ ಸಪರೇಟ್ ಆಗಿದ್ದು, ಒಬ್ಬರಿಗೊಬ್ಬರು ಗೌರವ ನೀಡುತ್ತಾ ಇಬ್ಬರೂ ದೂರವಾಗಿದ್ದಾರೆ. ಇದೀಗ ಚಂದನ್ ಶೆಟ್ಟಿಗೆ ಅವರ ಮನೆಯಿಂದಲೇ ಎರಡನೇ ಮದುವೆಯಾಗುವಂತೆ ಒತ್ತಾಯಗಳು ಕೇಳಿ ಬರ್ತಾ ಇದೆಯಂತೆ. ಹೀಗಾಗಿ ಚಂದನ್ ಶೆಟ್ಟಿ 2ನೇ ಮದುವೆಯಾಗಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಸದ್ಯ ಚಂದನ್ ಶೆಟ್ಟಿ ಅವರು ಸ್ಯಾಂಡಲ್‌ವುಟ್ ನಟಿ ಸಂಜನಾ ಆನಂದ್ ಜೊತೆ ಮದುವೆಯಾಗುತ್ತಾರಾ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಚಂದನ್ ಶೆಟ್ಟಿ ಹಾಗೂ ಸಂಜನಾ ಅವರು ʼಸೂತ್ರಧಾರಿ' ಸಿನಿಮಾದ ಡ್ಯಾಶ್ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿತ್ತು. ಈ ಸೂಪರ್ ಹಿಟ್ ಸಾಂಗ್‌ನಲ್ಲಿ ಚಂದನ್ ಶೆಟ್ಟಿ ಅವರು ಸಂಜನಾ ಆನಂದ್ ಜೊತೆಗೆ ʼನನ್ನ ಡ್ಯಾಶ್ ಮಾಡ್ಕೊಳೆ ನನ್ನ ಡ್ಯಾಶ್ ಅನ್ಕೊಳ್ಳೆ ನಾನೇ ಚಿನ್ನದ ಗಂಟೆ ಚಿಂತೆ ಬಿಟ್ಟು ಸೊಂಟಕೆ ಕಟ್ಕೊಳೆʼ ಅಂತಾ ಸಖತ್ ಡ್ಯಾನ್ಸ್ ಮಾಡಿದ್ದರು. ಈ ಸಾಂಗ್ ಬಿಡುಗಡೆಯ ಬಳಿಕ ಚಂದನ್ ಶೆಟ್ಟಿ ಅವರು ಸಂಜನಾ ನಡುವೆ ಏನೋ ಕುಚ್ ಕುಚ್ ನಡೆಯುತ್ತಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಆನಂದ್ ಜೊತೆಗೆ ಚಂದನ್ ಶೆಟ್ಟಿ ಮದುವೆಯಾದ್ರೆ ಚೆನ್ನಾಗಿರುತ್ತದೆ ಅಂತಾ ಅನೇಕರು ಕಾಮೆಂಟ್ ಸಹ ಮಾಡಿದ್ದಾರೆ.
ಚಂದನ್ ಶೆಟ್ಟಿ ಹಾಗೂ ಸಂಜನಾ ಅವರು ಮದುವೆ ಕುರಿತ ವದಂತಿಗಳಿಗೆ ಚಂದನ್ ಶೆಟ್ಟಿ ಅವರು ತಿರುಗೇಟು ನೀಡಿದ್ದು, ಅವುಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ನಕಲಿ ಸುದ್ದಿ .. ದಯವಿಟ್ಟು ಸುಳ್ಳು ಮಾಹಿತಿ ಹರಡುವುದನ್ನು ನಿಲ್ಲಿಸಿ ಎಂದು ಚಂದನ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications