Mokshitha Pai: ಬಿಗ್ ಬಾಸ್ ತಂಡದಿಂದ ಮೋಕ್ಷಿತಾಗೆ ಮಹಾ ಮೋಸ: ಫ್ಯಾನ್ಸ್ ಫುಲ್ ಗರಂ
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ವಾರಗಳತ್ತ ಸಾಗುತ್ತಿದ್ದು, ಇನ್ನೇನು ಮೂರು ವಾರಗಳಲ್ಲಿ ಈ ಸೀಜನ್ ಮುಗಿಯಲಿದೆ. ಜನವರಿ 26 ಗಣರಾಜೋತ್ಸವದ ಭಾನುವಾರ ಬಿಗ್ ಬಾಸ್ ಕನ್ನಡ ಸೀಜನ್ 11ರ ಗ್ರಾಂಡ್ ಫಿನಾಲೆ ನಡೆಯುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಾಗಿ ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ಬಿಗ್ ಬಾಸ್‌ನಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಈ ತಂಡದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11 ಫಿನಾಲೆ ಹತ್ತಿರ ಬರುತ್ತಿದ್ದಂತೆ ಬಿಗ್ ಬಾಸ್ ತಂಡ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಅವರನ್ನು ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೋಗಳ ವೈರಲ್ ಆಗುತ್ತಿದ್ದು, ಬಿಗ್ ಬಾಸ್ ತಂಡ ಮೋಕ್ಷಿತಾ ಅವರನ್ನು ಬರಬರುತ್ತಾ ಕಡಿಮೆ ತೋರಿಸುತ್ತಿದ್ದಾರೆ. ಈ ಮೂಲಕ ಬೇರೊಬ್ಬ ಮಹಿಳಾ ಸ್ಪರ್ಧಿಯನ್ನು ಹೈಲೈಟ್ ಮಾಡಬೇಕು ಎನ್ನುವ ಉದ್ದೇಶದಿಂದ ಗೆಲುವಿನ ಓಟದಲ್ಲಿ ಇರುವ ಮೋಕ್ಷಿತಾ ಅವರನ್ನು ಮೂಲೆ ಗುಂಪು ಮಾಡುತ್ತಿದ್ದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿಗೆ ಪ್ರೋಮೋಗಳಲ್ಲಿ ಕೆಲವು ಸ್ಪರ್ಧಿಗಳನ್ನಷ್ಟೇ ಹೆಚ್ಚಾಗಿ ತೋರಿಸುತ್ತಿದ್ದು, ಮೋಕ್ಷಿತಾ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ವೀಕೆಂಡ್ ಸಂಚಿಕೆಯಲ್ಲೂ ಮೋಕ್ಷಿತಾ ಅವರನ್ನು ಸರಿಯಾಗಿ ತೋರಿಸುತ್ತಿಲ್ಲ. ಕಳೆದ ವಾರ ರಸಗುಲ್ಲಾ ಬಾಯಲ್ಲಿಟ್ಟು ಹಾಡುವ ಚಟುವಟಿಕೆಯಲ್ಲೂ ಮೋಕ್ಷಿತಾ ಅವರ ಭಾಗವನ್ನು ತೋರಿಸಿಲ್ಲ. ಇನ್ನು ಸಾಮಾನ್ಯವಾಗಿ ಕಿಚ್ಚ ಸುದೀಪ್ ಎಲ್ಲರೊಂದಿಗೂ ಮಾತನಾಡುತ್ತಾರೆ. ಬೇರೆ ಎಲ್ಲರ ಜೊತೆ ಮಾತನಾಡುವ ಕಂಟೆಂಟ್‌ಗಳನ್ನು ತೋರಿಸುವ ಬಿಗ್ ಬಾಸ್ ತಂಡ, ಮೋಕ್ಷಿತಾ ಅವರ ಜೊತೆಗಿನ ಸಂವಾದವನ್ನೇ ವೀಕ್ಷಕರಿಗೆ ತೋರಿಸುತ್ತಿಲ್ಲ ಎಂದೆಲ್ಲಾ ಮೋಕ್ಷಿತಾ ಅಭಿಮಾನಿಗಳು ಬಿಗ್ ಬಾಸ್ ತಂಡದ ವಿರುದ್ಧ ಆರೋಪಿಸಿದ್ದಾರೆ.
ಈ ಬಗ್ಗೆ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೋಕ್ಷಿತಾ ಪೈ ಕನ್ನಡ ಕಿರುತೆರೆಯಲ್ಲೇ ಪಾರು ಅಂತಾಲೇ ಸಖತ್ ಫೇಮಸ್. ಪಾರು ಧಾರಾವಾಹಿ ಮೂಲಕ ನಟನೆಯಲ್ಲಿ ಮಿಂಚಿದ ಮೋಕ್ಷಿತಾ ಐದು ವರ್ಷಗಳ ಕಾಲ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ಅವರು ಬಿಗ್ ಬಾಸ್‌ಗೆ ಬಂದ ಮೇಲಂತೂ ಮತ್ತಷ್ಟು ಜನರಿಗೆ ಇಷ್ಟವಾಗಿದ್ದಾರೆ. ಹೀಗಾಗಿ ಜನಗಳ ಬೆಂಬಲವೂ ಅವರಿಗಿದ್ದು, ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಜನ್ 11ರ ಟಾಪ್ ಐದು ಸ್ಪರ್ಧಿಗಳಲ್ಲಿ ಮೋಕ್ಷಿತಾ ಕೂಡ ಒಬ್ಬರಾಗಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.












Click it and Unblock the Notifications