ಮನಸ್ಸಿನಿಂದ ನಾನು ಪಕ್ಕಾ ಭಾರತೀಯಳು: ಪಾರ್ವತಿ ಭಜನೆ ವಿಡಿಯೋ ಮೂಲಕ ವೈರಲ್ ಆದ ಇರಾನಿಯನ್ ನಟಿ

ಕಲೆ ಮತ್ತು ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ. ಇದಕ್ಕೆ ಒಂದೊಳ್ಳೆ ಉದಾಹರಣೆ ಎಂದರೆ ಇತ್ತೀಚೆಗೆ ಬಿಡುಗಡೆಯಾದ ಹನುಮಾನ್ ಅಂಶ್ ಸಿನಿಮಾದ ʻಪಾರ್ವತಿʼ ಮ್ಯೂಸಿಕ್ ವಿಡಿಯೋ ಸಿಕ್ಕ ಯಶಸ್ಸು. ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಭಕ್ತಿಗೀತೆಯ ವಿಡಿಯೋ ಮೂಲಕ ಇರಾನಿಯನ್ ನಟಿ ಅಗ್ನಿ ಅಗ್ಯಾರಿ ರಾತ್ರೋರಾತ್ರಿ ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಭಾರತ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ವಿಶೇಷ ಒಲವು ಹೊಂದಿರುವ ಈ ನಟಿ, ತಮಗೆ ಭಾರತದೊಂದಿಗೆ ಜನ್ಮ ಜನ್ಮಾಂತರದ ನಂಟಿದೆ ಹಾಗೂ ತಾವು ಮನಸ್ಸಿನಿಂದ ಪಕ್ಕಾ ಭಾರತೀಯಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Iranian Actor Agni Agyari on Parvati Song Success I Have a Past Life Connection with India

ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ 'ಪಾರ್ವತಿ ಭಜನೆ'

'ಹನುಮಾನ್ ಅಂಶ್' ಸಿನಿಮಾದ ಈ ಭಕ್ತಿಗೀತೆಗೆ ಖ್ಯಾತ ಗಾಯಕ ಸಾಧು ತಿವಾರಿ ದನಿಯಾಗಿದ್ದಾರೆ. ಈ ವಿಡಿಯೋದಲ್ಲಿ ಅವರು ಹಾಡುತ್ತಿದ್ದರೆ, ಅಗ್ನಿ ಅಗ್ಯಾರಿ ಅವರು ಹ್ಯಾಂಡ್ ಪ್ಯಾನ್ ಮತ್ತು ಕಹೂನ್ (ಕ್ಲ್ಯಾಪ್‌ಬಾಕ್ಸ್) ನಂತಹ ಸಂಗೀತ ವಾದ್ಯಗಳನ್ನ ನುಡಿಸುತ್ತಾ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ, ಅಗ್ನಿ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ. ಕೇವಲ ಈ ಮ್ಯೂಸಿಕ್ ವಿಡಿಯೋದಲ್ಲಿ ಮಾತ್ರ ಬಣ್ಣ ಹಚ್ಚಿದ್ದಾರೆ. "ಅವರಿಗೆ ನಟಿಯ ಬದಲು ಸಂಗೀತ ವಾದ್ಯಗಳನ್ನ ನುಡಿಸುವವರು ಬೇಕಿತ್ತು. ನನ್ನ ಸಂಗೀತದ ತರಬೇತಿ ಇಲ್ಲಿ ನೆರವಾಯಿತು. ಈ ವಿಡಿಯೋದಲ್ಲಿ ನಾನು ನನ್ನದೇ ಸ್ವಂತ ಸೀರೆಯನ್ನು ಉಟ್ಟಿದ್ದೇನೆ" ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಯೂಟ್ಯೂಬ್ ಮ್ಯೂಸಿಕ್‌ನ ಸಾಪ್ತಾಹಿಕ ಪಟ್ಟಿಯಲ್ಲಿ ಭಾರತದಲ್ಲಿ ನಂಬರ್ 1 ಹಾಗೂ ಜಾಗತಿಕ ಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ಈ ಅದ್ಭುತ ಅವಕಾಶ ನೀಡಿದ ನಿರ್ದೇಶಕ ಡಾ. ವಿಶಾಲ್ ಚತುರ್ವೇದಿ ಹಾಗೂ ಗಾಯಕ, ಸಂಯೋಜಕ ರಿಷಿ ಪಾಠಕ್ ಅವರಿಗೆ ಅಗ್ನಿ ಧನ್ಯವಾದ ತಿಳಿಸಿದ್ದಾರೆ.

ಅಗ್ನಿ ಅಗ್ಯಾರಿಗೆ ಜನ್ಮ ಜನ್ಮಾಂತರದ 'ಭಾರತದ ನಂಟು'

ಇರಾನ್‌ನ ಟೆಹ್ರಾನ್‌ನಲ್ಲಿ ಝೊರಾಸ್ಟ್ರಿಯನ್ (ಪಾರ್ಸಿ) ಕುಟುಂಬದಲ್ಲಿ ಹುಟ್ಟಿ ಬೆಳೆದ ಅಗ್ನಿ, ತಮ್ಮನ್ನ ತಾವು ಭಾರತೀಯಳು ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. "ಭಾರತದೊಂದಿಗೆ ನನ್ನದೇನೋ ಜನ್ಮ ಜನ್ಮಾಂತರದ ಕನೆಕ್ಷನ್ ಇದೆ ಅನ್ನಿಸುತ್ತಿದೆ. ಬಾಲ್ಯದಿಂದಲೇ ನನಗೆ ಭಾರತೀಯ ಸಿನಿಮಾಗಳ ಬಗ್ಗೆ ವಿಶೇಷ ಆಕರ್ಷಣೆ ಇತ್ತು.

'ಓಂ ಜೈ ಜಗದೀಶ ಹರೇ' ಭಜನೆ ನನಗೆ ಅಚ್ಚುಮೆಚ್ಚಾಗಿತ್ತು. ಅದನ್ನ ನಾನು ಪರ್ಷಿಯನ್ ಭಾಷೆಯಲ್ಲಿ ಬರೆದುಕೊಂಡು, ನಮ್ಮ ತಾಯಿಯ ವಿದ್ಯಾರ್ಥಿಯೊಬ್ಬರು ಉಡುಗೊರೆಯಾಗಿ ನೀಡಿದ್ದ ಸರಸ್ವತಿ ದೇವಿಯ ಫೋಟೋ ಮುಂದೆ ನಿಂತು ಹಾಡುತ್ತಿದ್ದೆ" ಎಂದು ತಮ್ಮ ಬಾಲ್ಯದ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ.

ಹಿಂದಿ ಭಾಷೆ ಕಲಿತು ಬಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಮಿಂಚುತ್ತಿರುವ ನಟಿ

ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಅಗ್ನಿ, ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಕರೀನಾ ಕಪೂರ್ ಮತ್ತು ಯಾಮಿ ಗೌತಮ್ ಅವರಂತಹ ದಿಗ್ಗಜರೊಂದಿಗೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಡೇ ಅಚ್ಚೇ ಲಗ್ತೇ ಹೈ-3' ಮತ್ತು 'ಶೋಟೈಮ್' ನಂತಹ ಜನಪ್ರಿಯ ಟಿವಿ ಸರಣಿಗಳಲ್ಲೂ ನಟಿಸಿದ್ದಾರೆ.

ಕೇವಲ ವಿದೇಶಿ ಪಾತ್ರಗಳಿಗೆ ಮಾತ್ರ ಸೀಮಿತವಾಗಬಾರದು ಎಂಬ ಕಾರಣಕ್ಕೆ, ಸತತ ಎರಡು ವರ್ಷಗಳ ಕಾಲ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳದೆ ಹಿಂದಿ ಭಾಷೆಯನ್ನ ಸ್ಪಷ್ಟವಾಗಿ ಮಾತನಾಡಲು ಕಲಿತಿದ್ದಾರೆ.

ಇದರ ಫಲವಾಗಿ, ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ಮಾಣದ 'ದೋ ದೀವಾನೆ ಶಹರ್ ಮೇ' ಹಾಗೂ ಅರವಿಂದ್ ಪಾಂಡೆ ನಿರ್ದೇಶನದ 'ಲವ್ ಲಾಟರಿ' ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನ ಗಿಟ್ಟಿಸಿಕೊಂಡಿದ್ದಾರೆ. "ಲವ್ ಲಾಟರಿ ಸಿನಿಮಾದಲ್ಲಿ ನಾನು ಬಹಳ ಮುಖ್ಯವಾದ ಪಾಸಿಟಿವ್ ಪಾತ್ರದಲ್ಲಿ ನಟಿಸಿದ್ದೇನೆ. ಇದೀಗ ಭಾರತೀಯರು ನನಗೆ ನೀಡುತ್ತಿರುವ ಪ್ರೀತಿಯನ್ನ ಕಂಡು, ಸದ್ಯ ಭಾರತದಲ್ಲೇ ಇರುವ ನನ್ನ ಪೋಷಕರು ಕೂಡ ಅತ್ಯಂತ ಸಂತೋಷಗೊಂಡಿದ್ದಾರೆ" ಎಂದು ಅಗ್ನಿ ಅಗ್ಯಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+