ಮಿಲಿಟರಿ ಡ್ರೆಸ್‌ ಹಾಕಿ ‘ಲಿಪ್‌ ಕಿಸ್’‌ ಮಾಡಿದ್ದ ಹೃತಿಕ್‌-ದೀಪಿಕಾ ಮೇಲೆ ಬಿತ್ತು ಕೇಸ್‌!

ಸಿನಿಮಾ ಅಂದ್ರೆ ಅಲ್ಲಿ ಹಸಿಬಿಸಿ ದೃಶ್ಯಗಳು ಕಾಮನ್, ಹಂಗಂತಾ ಗಡಿ ಮೀರಿ ವರ್ತಿಸಿದರೆ ಸಂಕಷ್ಟ ಕೂಡ ಪಕ್ಕಾ. ಇದೇ ರೀತಿ ನಟಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಲಿಪ್ ಲಾಕ್ ಮಾಡಿ ಕೇಸ್ ಹಾಕಿಸಿಕೊಂಡಿದ್ದಾರೆ. ಹಾಗಾದರೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ವಿರುದ್ಧ ಬರೀ ಕಿಸ್ ಮಾಡಿದ್ದಕ್ಕೆ ಕೇಸ್ ಹಾಕಿರೋದು ಯಾರು? ಬನ್ನಿ ಆ ಕುರಿತು ಮಾಹಿತಿ ತಿಳಿಯೋಣ.

ಅಂದಹಾಗೆ ಕನ್ನಡ ಸಿನಿಮಾ ರಂಗ & ತೆಲುಗು ಚಿತ್ರರಂಗ ನೀಡುತ್ತಿರುವ ಪೈಪೋಟಿ ಕಾರಣ ಹಿಂದಿ ಚಿತ್ರರಂಗ ನಲುಗಿ ಹೋಗಿದೆ. ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳು ಕೂಡ ಈ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಎದುರು ತೋಪೆದ್ದು ಹೋಗಿವೆ. ಹೀಗಿದ್ದಾಗಲೇ ಹೃತಿಕ್ ರೋಷನ್ ಅವರಿಗೆ ಒಂದು ಬ್ರೇಕ್ ಬೇಕಿತ್ತು. ಹೀಗಾಗಿ ಜನವರಿ 25 ರಂದು ಫೈಟರ್‌ ಸಿನಿಮಾ ಬಿಡುಗಡೆ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಫೈಟರ್‌ ಸಿನಿಮಾದ ಗಳಿಕೆ ಪರವಾಗಿಲ್ಲ ಎನ್ನುವಂತೆ, ಸ್ವಲ್ಪ ಸದ್ದನ್ನೂ ಮಾಡಿದೆ.

Hrithik Roshans Fighter faces legal notice from IAF officer over kissing scene in uniform

ಐಯ್ಯಯ್ಯೋ ಏನಾಯ್ತು?

ಹೀಗಿದ್ದಾಗ ಇದೇ ಸಿನಿಮಾದ ಕಿಸ್ಸಿಂಗ್ ಸೀನ್ ವಿಚಾರವಾಗಿಯೇ ಹೃತಿಕ್ ರೋಷನ್ ವಿರುದ್ಧ ಕೇಸ್ ಬಿದ್ದಿದೆ. ಹಾಗೇ ದೀಪಿಕಾ ಪಡುಕೋಣೆಗೂ ಸಂಕಷ್ಟ ಎದುರಾಗಿದೆ. ಹಾಗಾದರೆ ಹೀಗೆ ಕೇಸ್ ಹಾಕಿದ್ದು ಯಾರು? ದೀಪಿಕಾ & ಹೃತಿಕ್ ಲಿಪ್ ಲಾಕ್ ಮಾಡುವಾಗ ಮಾಡಿದ ತಪ್ಪು ಎಂತಹದ್ದು ಗೊತ್ತಾ? ದೇಶಾದ್ಯಂತ ಈ ಬಗ್ಗೆ ಇದೀಗ ಆಕ್ರೋಶ ಭುಗಿಲೇಳಲು ಕಾರಣವೇನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ದೀಪಿಕಾಗೆ ಕಾನೂನು ಸಂಕಷ್ಟ?

ಯೆಸ್, ಹೃತಿಕ್ ರೋಷನ್ & ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರಕ್ಕೆ ಸಂಕಷ್ಟವೂ ಅಪ್ಪಳಿಸಿದೆ. ನಟ ನಟಿಯ ನಡುವೆ ಚುಂಬನ ದೃಶ್ಯಕ್ಕೆ ಸಂಬಂಧಪಟ್ಟಂತೆ ಫೈಟರ್‌ ಸಿನಿಮಾದ ವಿರುದ್ಧ ವಿಂಗ್‌ ಕಮಾಂಡರ್‌ ಸೌಮ್ಯ ದೀಪ್‌ ದಾಸ್‌ ಲೀಗಲ್‌ ನೊಟಿಸ್‌ ನೀಡಿದ್ದಾರಂತೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗೇ ದೀಪಿಕಾ ಮತ್ತು ಹೃತಿಕ್ ರೋಷನ್ ವಿರುದ್ಧ ಆಕ್ರೋಶವೂ ಭುಗಿಲೆದ್ದಿದೆ. ಇನ್ನು 'ಐಎಎಫ್‌ ಸಮವಸ್ತ್ರ ಬರೀ ಬಟ್ಟೆಯಲ್ಲ. ಇದು ಕರ್ತವ್ಯ, ರಾಷ್ಟ್ರೀಯ ಭದ್ರತೆ ಮತ್ತು ನಿಸ್ವಾರ್ಥ ಸೇವೆಗೆ ಅಚಲ ಬದ್ಧತೆಯ ಪ್ರಬಲ ಸಂಕೇತವಾಗಿದೆ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಏನಾಯ್ತು ಫೈಟರ್ ಸಿನಿಮಾ ಕಥೆ?

ಮೊದಲೇ ಹೇಳಿದಂತೆ ನಟ ಹೃತಿಕ್ ರೋಷನ್ ಅವರಿಗೆ ಒಂದು ದೊಡ್ಡ ಬ್ರೇಕ್ ಬೇಕಾಗಿದೆ. ಹೀಗಾಗಿಯೇ ಫೈಟರ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು ನಟ ಹೃತಿಕ್. ಇನ್ನ ಹೃತಿಕ ರೋಷನ್ ನಿರೀಕ್ಷೆಗಳನ್ನ ಫೈಟರ್ ಸಿನಿಮಾ ತಲುಪದೇ ಇದ್ದರೂ, ಒಂದು ಮಟ್ಟಿಗೆ ಸಕ್ಸಸ್ ಆಗಿದೆ. ಹಾಗೇ ಫೈಟರ್‌ ಸಿನಿಮಾ ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಪಡೆಯುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಕೂಡ ಉತ್ತಮ ವಹಿವಾಟು ನಡೆಸುತ್ತಿದೆ. ಸಿದ್ಧಾರ್ಥ್ ಆನಂದ್ ಡೈರೆಕ್ಷನ್ ಇರುವ ಫೈಟರ್ ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ & ಅಕ್ಷಯ್ ಒಬೆರಾಯ್ ನಟಿಸಿದ್ದಾರೆ.

ಅಂದಹಾಗೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಫೈಟರ್ ಚಿತ್ರ, ಈವರೆಗೆ ಸುಮಾರು 300 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ. ಹಾಗೇ ಚಿತ್ರದಲ್ಲಿ, ನಟ ಹೃತಿಕ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಲಿಯಾಸ್ ಪ್ಯಾಟಿ ಆಗಿ & ದೀಪಿಕಾ ಪಡುಕೋಣೆ ಸ್ಕ್ವಾಡ್ರನ್ ಲೀಡರ್ ಮಿನಾಲ್ ರಾಥೋಡ್ ಅಕಾ ಮಿನ್ನಿ ಆಗಿಯು ಮತ್ತು ಅನಿಲ್ ದೇಶಕ್ಕಾಗಿ ಹೋರಾಡುವ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಲಿಯಾಸ್, ರಾಕಿ ಪಾತ್ರದಲ್ಲಿ ಕಾಣಿಸಿದ್ದು ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+