ಪುನೀತ್ ರಾಜ್‌ಕುಮಾರ್ ಸಿನಿಮಾ ಶಿವಣ್ಣ ಮಾಡ್ತಾ ಇದ್ದಾರಾ? ಅಭಿಮಾನಿಗಳ ಡಿ-ಬಾಸ್ ದರ್ಶನ್ ಇದೀಗ ಶಿವಣ್ಣ ಜೊತೆ ನಟಿಸುತ್ತಾರಾ?

ಪವರ್ ಸ್ಟಾರ್ ಪುನೀತ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅಪ್ಪು ಅಂದ್ರೆ ಈಗಿನ್ನು ಹುಟ್ಟಿರುವ ಮಗುವಿನಿಂದ ಹಿಡಿದು, ದೊಡ್ಡವರಾಗಿ ಬೆಳೆದಿರುವ ನಮ್ಮ ತನಕ ಎಲ್ಲರಿಗೂ ಇಷ್ಟ ಇಷ್ಟ. ಯಾಕಂದ್ರೆ ಬೆಟ್ಟದ ಹೂವು ಸಿನಿಮಾದಿಂದ ಹಿಡಿದು ಗಂಧದ ಗುಡಿ ಸಿನಿಮಾ ತನಕ ಈ ನಟನ ಸಾಧನೆಗೆ ಈ ಭೂಮಿ ಮೇಲೆ ಯಾರೂ ಸಾಟಿ ಇಲ್ಲ. ಹೀಗಿದ್ದಾಗ ನಟ ಶಿವಣ್ಣ ಹಾಗೇ ಅಪ್ಪು ಅವರ ಅಣ್ಣ, ಪುನೀತ್ ಸರ್ ನಿಲ್ಲಿಸಿದ್ದ ಪ್ರಾಜೆಕ್ಟ್ ಮುಂದುವರಿಸಲು ಮುಂದಾಗಿದ್ದಾರೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ!

ಹೌದು ಭಾರತೀಯರಿಗೆಲ್ಲ ರಾಜ್‌ಕುಮಾರ್ ಹೇಗೋ ಅದೇ ರೀತಿ ಪುನೀತ್ ರಾಜ್‌ಕುಮಾರ್ ಕೂಡ ಹೃದಯದ 'ಅಪಧಮನಿ & ಅಭಿಧಮನಿ' ಆಗೋಗಿದ್ದಾರೆ. ಇಂದಿಗೂ ಭಾರತದಲ್ಲಿ ಮೂಲೆ ಮೂಲೆಯಲ್ಲೂ ಡಾ. ರಾಜ್ ಮತ್ತು ಪುನೀತ್ ರಾಜ್ ಇಬ್ಬರೂ ಚಿರಪರಿಚಿತ ಆಗೋಗಿದ್ದಾರೆ. ಹೀಗಿದ್ದಾಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಲ್ಲಿಸಿರುವ ಹೊಸದೊಂದು ಸಿನಿಮಾ ಪ್ರಾಜೆಕ್ಟ್ ಶುರು ಮಾಡಲು ಅವರ ಅಣ್ಣ ಶಿವಣ್ಣ ಸಿದ್ಧರಾಗಿದ್ದಾರೆ ಎಂಬ ಮಾತು ಓಡಾಡ್ತಿದೆ ನಟ ಶಿವರಾಜ್‌ಕುಮಾರ್ ಇದೀಗ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಅದೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಮ್ಮ ಜೊತೆಗಂತೆ!

Hatrick Hero Shivarajkumar Upcoming Movie Will Start With Dinakar Thoogudeepa

ಪುನೀತ್ ನಿಲ್ಲಿಸಿದ್ದ ಪ್ರಾಜೆಕ್ಟ್ ಶಿವಣ್ಣ ಪಾಲು?

ಅಷ್ಟಕ್ಕೂ ಅಪ್ಪು ಅಂದ್ರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಾವನ್ನ ಇಡೀ ಭಾರತ ಆಘಾತದಿಂದ ಸ್ವೀಕಾರ ಮಾಡಿತ್ತು. ಅದರಲ್ಲೂ ಅಪ್ಪು ಸರ್ ಮೃತಪಟ್ಟ ದಿನ ಇಡೀ ಕನ್ನಡ ನಾಡು ನೋವಲ್ಲಿ ನರಳಿತ್ತು. ಮಹಾತ್ಮ ಗಾಂಧಿಜೀ ನಂತರ ಪವರ್ ಸ್ಟಾರ್ ಪುನೀತ್ ಅವರ ಅಂತಿಮ ದರ್ಶನಕ್ಕೆ ಅತಿಹೆಚ್ಚು ಜನ ಬಂದಿದ್ದರು ಎನ್ನುವ ದಾಖಲೆ ಕೂಡ ಸಂಚಲನ ಸೃಷ್ಟಿಸಿತ್ತು. ಹೀಗಿದ್ದಾಗ ಅಪ್ಪು ಅವ್ರು ಮಾಡಬೇಕಿದ್ದ ಹಲವು ಪ್ರಾಜೆಕ್ಟ್ ನಿಂತು ಹೋದವು.

ಶಿವಣ್ಣ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್?

ಹೀಗೆ ಅಪ್ಪು ಅವರು ನಿಲ್ಲಿಸಿದ್ದ ಸಿನಿಮಾ ಪೈಕಿ, ಒಂದು ಸಿನಿಮಾ ನಟ ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರು ನಿರ್ದೇಶನ ಮಾಡಬೇಕಿತ್ತು. ಆದ್ರೆ ಹೀಗೆ ನಿಂತ ಪ್ರಾಜೆಕ್ಟ್ ಈಗ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಶುರುವಾಯ್ತಾ? ಅನ್ನೋ ಅನುಮಾನ ಕಾಡುತ್ತಿದೆ. ಇದರ ಜೊತೆಗೆ ನಟ ಶಿವರಾಜ್‌ಕುಮಾರ್ ಅವರ ಮುಂದಿನ ಸಿನಿಮಾ, ಅಂದ್ರೆ 131ನೇ ಸಿನಿಮಾದಲ್ಲಿ ನಟ ದರ್ಶನ್ ಅವರು ಕೂಡ ನಟಿಸುತ್ತಾರಾ? ಎಂಬ ಡೌಟ್ ಕೂಡ ಈಗ ದೊಡ್ಡದಾಗಿ ಹಬ್ಬಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚೆ ಶುರು ಮಾಡಿದ್ದಾರೆ. ಈ ಮೂಲಕ ಎಲ್ಲೆಲ್ಲೂ ಸದ್ದು ಮಾಡ್ತಿದೆ ಶಿವಣ್ಣ ಅವರ 131ನೇ ಸಿನಿಮಾ ಅಪ್‌ಡೇಟ್.

Hatrick Hero Shivarajkumar Upcoming Movie Will Start With Dinakar Thoogudeepa

ದೊಡ್ಮನೆ ದೀಪ ಮತ್ತೆ ಬೆಳಗುತ್ತಾ?

ಅಷ್ಟಕ್ಕೂ ಸಾಲು, ಸಾಲು ಸಿನಿಮಾ ಒಪ್ಪಿಕೊಂಡಿರುವ ಶಿವರಾಜ್‌ಕುಮಾರ್‌ ಇದೀಗ ನಿರ್ದೇಶಕ ದಿನಕರ್​ ತೂಗುದೀಪ ಜೊತೆ ಕೈಜೋಡಿಸಿದ್ದಾರೆ. ಶಿವರಾಜ್‌ಕುಮಾರ್‌ರ 131ನೇ ಸಿನಿಮಾ ಅನ್ನ ದಿನಕರ್‌ ಡೈರೆಕ್ಟ್ ಮಾಡಲಿದ್ದಾರೆ. ಪ್ರಿಯದರ್ಶಿನಿ ರಾಮ ರೆಡ್ಡಿ ಬರೆದಿರುವ ಕಥೆಗೆ, 'ಬಿಂದ್ಯಾ ಮೂವೀಸ್' ಹಣ ಹಾಕುತ್ತಿದೆ ಎನ್ನಲಾಗಿದೆ. 2023 ರಲ್ಲಿ 'ಜೈಲರ್​' & 'ಘೋಸ್ಟ್​' ಮೂಲಕ ನಟ ಶಿವಣ್ಣ ಕಮಾಲ್ ಮಾಡಿದ್ದರು. ಅವರು ಇದೀಗ ಭೈರತಿ ರಣಗಲ್‌ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿದ್ದಾಗ ಹೊಸ ಅಪ್‌ಡೇಟ್ ಹಲ್‌ಚಲ್ ಎಬ್ಬಿಸಿದೆ.

ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ!

ಜೊತೆ ಜೊತೆಯಲಿ, ನವಗ್ರಹ & ಸಾರಥಿ ನಿರ್ದೇಶಿಸಿರುವ ದಿನಕರ್‌ ತೂಗುದೀಪ ಅವರ ಹೊಸ ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಾಗಿದೆ. 'ಆಕ್ಷನ್‌ ಮತ್ತು ಮಾಸ್‌ ಕಥೆ ಹೊಂದಿರುವ ಈ ಹೊಸ ಸಿನಿಮಾದ ಕೆಲಸ ಶುರು ಆಗಿದೆ. ಶಿವಣ್ಣ ಈಗಾಗಲೇ ಒಪ್ಪಿಕೊಂಡಿದ್ದ ಸಿನಿಮಾ ಮುಗಿದ ಬಳಿಕ ಶೂಟಿಂಗ್ ಹೋಗುವ ಯೋಜನೆ ಇದೆ' ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಶಿವಣ್ಣ ಅವರ 131ನೇ ಸಿನಿಮಾ, ಚಿತ್ರೀಕರಣಕ್ಕೂ ಮೊದಲೇ ಅಬ್ಬರಿಸಲು ಶುರು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+