Hanumantha Lamani: 52389318 ವೋಟ್ ಗಳಿಸಿದ ಹನುಮಂತ? ಎಲ್ಲಾ ಭಾಷೆಗಳ ಬಿಗ್‌ಬಾಸ್ ದಾಖಲೆ ಉಡೀಸ್
ಭಾರತದಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ಕೆಲ ಭಾಷೆಗಳ ವಾಹಿನಿಯಲ್ಲಿ ಪ್ರತೀ ವರ್ಷ ಪ್ರಸಾರವಾಗುತ್ತದೆ. ನೂರು ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ಹಣ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಮತಗಳ ಆಧಾರದ ಮೇಲೆ ವಿನ್ನರ್ ಪಟ್ಟ ನೀಡಲಾಗುವುದು. ಹೀಗೆ ಈ ಬಾರಿ ಕನ್ನಡದ ಬಿಗ್‌ಬಾಸ್ ದಾಖಲೆಯನ್ನೇ ಸೃಷ್ಟಿ ಮಾಡಿದೆ. 52389318 ವೋಟ್ ಗಳಿಸಿ ಈ ಬಾರಿಯ ಸ್ಪರ್ಧಿ ಎಲ್ಲಾ ಭಾಷೆಗಳ ಬಿಗ್‌ಬಾಸ್ ದಾಖಲೆ ಉಡೀಸ್ ಮಾಡಿದ್ದಾರೆ.
ಹೌದು... ಬಿಗ್‌ಬಾಸ್ ಕನ್ನಡ ಸೀಸನ್ 11 ಇಂದು ಪೂರ್ಣಗೊಳ್ಳಲಿದೆ. ಇಂದಿನ ಸಂಚಿಕೆಯಲ್ಲಿ ವಿನ್ನರ್ ಘೋಷಣೆ ಮಾಡಲಾಗುವುದು. ಇದಕ್ಕಾಗಿ ಇಡೀ ಕರ್ನಾಟಕದ ಜನತೆ ಕಾದು ಕುಳಿತಿದೆ. ಅಂದ ಹಾಗೆ ಕಳೆದ ದಿನ ಬಿಗ್‌ಬಾಸ್ ವಿನ್ನರ್ ಗಳಿಸಿದ ಮತಗಳು ಎಷ್ಟು ಎನ್ನುವ ಬಗ್ಗೆ ರಿವೀಲ್ ಮಾಡಲಾಗಿದೆ. ಆದರೆ ಈ ಮತ ಗಳಿಸಿದ ಸ್ಪರ್ಧಿ ಯಾರು ಎನ್ನುವುದು ಮಾತ್ರ ಹೇಳಿಲ್ಲ. ಇಂದು ಆ ಸ್ಪರ್ಧಿಯ ಕೈಯನ್ನು ಸುದೀಪ್ ಎತ್ತುವ ಮೂಲಕ ಟ್ರೋಫಿ ನೀಡಲಿದ್ದಾರೆ.

ಕಳೆದ ದಿನ ಕಿಚ್ಚ ಸುದೀಪ್ ಈ ಬಾರಿಯ ವಿನ್ನರ್ ಒಟ್ಟು 52389318 ವೋಟ್ ಗಳಿಸಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಈ ಮತಗಳನ್ನು ಪಡೆದಿದ್ದು ಬೇರೆ ಯಾರೂ ಅಲ್ಲ ಹನುಮಂತ ಲಮಾಣಿ. ಹೌದು... ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿದ್ದಾರೆ. ಅಂದರೆ 52389318 ವೋಟ್ ಗಳಿಸಿ ಎಲ್ಲಾ ಬಾಷೆಗಳ ಬಿಗ್‌ಬಾಸ್ ದಾಖಲೆ ಮುರಿದಿದ್ದಾರೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಜನ ಹೇಳುತ್ತಿದ್ದಾರೆ.
ಬಹುತೇಕ ಸಮೀಕ್ಷೆಗಳ ಪ್ರಕಾರ ಹನುಮಂತ ಲಮಾಣಿ ಈ ಬಾರಿ ವಿನ್ನರ್ ಆಗುವುದು ಗ್ಯಾರಂಟಿ. ಕೆಲ ಸಮೀಕ್ಷೆ ಹನುಮಂತ ಗೆಲ್ಲುವುದು ಪಕ್ಕಾ ಎಂದು ನಿಖರವಾಗಿ ಭವಿಷ್ಯ ನುಡಿದಿವೆ. ಇನ್ನೂ ಟಿವಿ ಕ್ಯಾಮರಾ ಹೋದಕಡೆಗಳಲೆಲ್ಲಾ ಹಳ್ಳಿ ಹುಡುಗ ಹನುಮಂತ ಗೆಲ್ಲಬೇಕು ಅನ್ನೋ ಮಾತೇ ಹೆಚ್ಚಾಗಿದೆ.
ಹನುಮಂತ ಗೆಲ್ಲದೇ ಇದ್ದರೆ ಮೀಸೆ, ತಲೆ ಕೂದಲು ತೆಗೆಸುವ ಮಾತುಗಳನ್ನು ಅವರ ಅಭಿಮಾನಿಗಳು ಆಡಿದ್ದಾರೆ. ಅಷ್ಟೇ ಅಲ್ಲ ಹನುಮಂತನ ಗೆಲುವಿಗಾಗಿ ಕೆಲ ಮಹಿಳೆಯರು ದೇವಸ್ಥಾನಗಳಲ್ಲಿ ಪೂಜೆ ಕೂಡ ಮಾಡಿಸುತ್ತಿದ್ದಾರೆ. ಮಕ್ಕಳು ಹಾಗೂ ಹಿರಿಯರೂ ಕೂಡ ಬಡ ಹುಡುಗ ಹನುಮಂತನೇ ಈ ಬಾರಿ ಗೆಲ್ಲಬೇಕು ಎಂದು ಓಟ್ ಮಾಡಿದ್ದಾರೆ.
ಹೀಗಾಗಿ ಉತ್ತರ ಕರ್ನಾಟಕದ ಹುಲಿಗೆ ಭರ್ಜರಿ ಬೆಂಬಲ ಸಿಕ್ಕಿದೆ. ಹಳ್ಳಿಯಿಂದ ನಗರ ಪ್ರದೇಶಗಳವರೆಗೆ ಹನುಮಂತನಿಗೇ ಓಟ್‌ಗಳು ಹೆಚ್ಚಾಗಿ ಬಂದಿವೆ. ಅಷ್ಟೇ ಯಾಕೆ ಕಿರುತೆರೆ ತಾರೆಯರೂ ಕೂಡ ಹನುಮಂತ ಗೆಲ್ಲುತ್ತಾರೆ ಅಂತಲೇ ಹೇಳಿದ್ದಾರೆ. ಹೀಗಾಗಿ ಹನುಮಂತ ರನ್ನರ್ ಅಪ್ ಆಗುವ ಮಾತೇ ಇಲ್ಲ. 52389318 ವೋಟ್ ಗಳಿಸಿದವರು ಹನುಮಂತನೇ ಎಂದು ಜನ ಫಿಕ್ಸ್ ಆಗಿದ್ದಾರೆ.
ಅಪ್ಪಿ ತಪ್ಪಿಯೂ ಈ ಮಾತು ಬದಲಾಗಲು ಸಾಧ್ಯವೇ ಇಲ್ಲ ಎನ್ನುವಷ್ಟು ಯುವ ಸಮೂಹ ಗ್ಯಾರಂಟಿ ಕೊಡುತ್ತಿದೆ. ಒಂದು ವೇಳೆ ಇದೇ ಮಾತು ನಿಜವಾಗಿದ್ದರೆ ಇಂದು ರಾತ್ರಿ ಆಕಾಶದಲ್ಲಿ ಪಟಾಕಿಗಳ ಸದ್ದು ಜೋರಾಗಿ ಕೇಳಿಸುವುದು ಖಚಿತ. ಇಂದು ಗ್ರ್ಯಾಂಡ್ ಫಿನಾಲೆ ಮುಗಿಯುವ ಹೊತ್ತಿಗೆ ವಿಜೇತರು ಯಾರು ಎನ್ನುವುದು ಗೊತ್ತಾಗಲಿದೆ.












Click it and Unblock the Notifications