Hanumantha: ಹನುಮಂತನಿಗೆ ಭರ್ಜರಿ ಸಿನಿಮಾ ಆಫರ್: ಯಾವ ಸಿನಿಮಾ ಮಾಡುವರು ಹಳ್ಳಿ ಹೈದಾ?

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಹನುಮಂತ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ರಿಯಾಲಿಟಿ ಶೋನಲ್ಲಿ ಗೆದ್ದ ಬಳಿಕ ಸಾಕಷ್ಟು ಆಫರ್‌ಗಳು ಹನುಮಂತನನ್ನು ಹುಡುಕಿಕೊಂಡು ಬರುತ್ತಿವೆ. ಹಾಗಾದರೆ ಹನುಮಂತನ ಮುಂದಿನ ನಡೆ ಏನು? ಸಿನಿಮಾದಲ್ಲಿ ನಟಿಸುತ್ತಾರಾ ಹನುಮಂತ? ಇದೆಲ್ಲದಕ್ಕೂ ಉತ್ತರ ಇಲ್ಲಿದೆ.

ಬಿಗ್ ಬಾಸ್ ನಲ್ಲಿ ಗೆದ್ದ ಮೇಲೆ ಹನುಮಂತನಿಗೆ ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳು ಬರುತ್ತಿವೆ. ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಹನುಮಂತ ಅವರು ನಟಿಸಲು ಆಫರ್‌ಗಳು ಬಂದಿವೆ. ಆದರೆ ಹನುಮಂತ ಈ ಆಫರ್‌ಗಳನ್ನು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

hanumantha get huge movie offer which movie will the bigg boss winner do

ಹೌದು.. ಹನುಮಂತ ಸಿನಿಮಾ ಸಹವಾಸವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಗಂಟೆಗಟ್ಟೆಲೆ ಕಾಯುವಿಕೆ, ಮೇಕಪ್, ತಳುಕು ಬಳಕು, ಬಣ್ಣದ ಜಗತ್ತಿನಿಂದ ದೂರ ಇರಲು ಹನುಮಂತ ಬಯಸಿದ್ದಾರೆ ಎನ್ನಲಾಗುತ್ತಿದೆ. ಬದಲಾಗಿದೆ ತಮ್ಮನ್ನು ರಾಜ್ಯದಲ್ಲಿ ಈ ಮಟ್ಟಕ್ಕೆ ಗುರುತಿಸಿಕೊಳ್ಳುವಂತೆ ಮಾಡಿದ ರಿಯಾಲಿಟಿ ಶೋಗಳನ್ನು ಮಾಡಲು ಹನುಮಂತ ಬಯಸಿದ್ದಾರೆ. ಹೀಗಾಗು ಒಂದಾದ ಮೇಲೆ ಒಂದು ರಿಯಾಲಿಟಿ ಶೋ ಮಾಡುತ್ತಿರುವ ಹನುಮಂತ ರಿಯಾಲಿಟಿ ಶೋ ಮೂಲಕವೇ ಜನರ ಪ್ರೀತಿ ಗಳಿಸುವ ಗುರಿಯನ್ನು ಹೊಂದಿದ್ದಾರೆ.

ಎಲ್ಲಿಗೆ ಬಂತು ಹನುಮಂತನ ಮದುವೆ ವಿಚಾರ?

ಹನುಮಂತ ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ಮದುವೆ ಆಗಬೇಕು, ಮನೆ ಕಟ್ಟಬೇಕು ಅನ್ನೋ ಕನಸನ್ನು ಹೊಂದಿದ್ದಾರೆ. ಅವರ ಕನಸಿನಂತೆ ಫ್ಯಾಮಿಲಿ ಕಡೆಗೆ ಗಮನ ಕೊಡುತ್ತಿದ್ದಾರೆ. ಹೀಗಾಗಿ ಸಿನಿಮಾ ಆಫರ್‌ಗಳು ಬಂದರೂ ಕೂಡ ಹನುಮಂತ ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಹುಡುಗಿಗೆ ಪ್ರಪೋಸ್ ಮಾಡಿದ ಹನುಮಂತ

ಭರ್ಜರಿ ಬ್ಯಾಚುಲರ್ ಎನ್ನುವ ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ಹನುಮಂತ ಹಾಸಿಯಾ ಬೇಗಂ ಎನ್ನುವ ಹುಡುಗಿಗೆ ಪ್ರಪೋಸ್ ಮಾಡಿದರು. ಈ ಶೋ ಸೀನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಇದು ಸ್ಕ್ರಿಪ್ಟೆಡ್ ಸೀನ್‌ಗಳು ಆಗಿದ್ದು ನಿಜವಾಗಲೂ ಹನುಮಂತ ಆ ಹುಡುಗಿಗೆ ಪ್ರಪೋಸ್ ಮಾಡಿಲ್ಲ. ಹನುಮಂತ ಮದುವೆ ಆಗುವ ಹುಡುಗಿ ಬೇರೆಯೇ ಇದ್ದಾಳೆ. ಹಾಗಾದರೆ ಹನುಮಂತನ ಹುಡುಗಿ ಯಾರು?

ಅತ್ತೆ ಮಗಳನ್ನೇ ಮದುವೆ ಆಗುತ್ತಾರೆ ಹನುಮಂತ

ಹನುಮಂತನಿಗೆ ಅತ್ತೆ ಮಗಳು ಇದ್ದಾಳೆ. ಇದೇ ಹುಡುಗಿಯನ್ನು ಹನುಮಂತ ಮದುವೆ ಆಗಲಿದ್ದಾರೆ ಎನ್ನುವ ಒಂದಿಷ್ಟು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದಕ್ಕೆ ಖುದ್ದು ಹನುಮಂತ ಅವರೇ ಮಾಧ್ಯಮಗಳು ಈ ಬಗ್ಗೆ ಸುದ್ದಿ ಎತ್ತಿದಾಗ ನಾಚಿಕೊಂಡು ಯಾವುದೇ ಉತ್ತರ ನೀಡದೆ ಸುಮ್ಮನಾಗಿದ್ದರು. ಇದು ಸಂಶಯವನ್ನು ಹುಟ್ಟುಹಾಕಿದೆ. ಆದರೆ ಹನುಮಂತ ಈ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಹನುಮಂತ ಬಿಗ್‌ಬಾಸ್‌ ಮನೆಯಲ್ಲಿ ಇರುವಾಗಲೂ ಫೇಮಸ್ ಹಾಗೂ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಮೇಲೂ ಫೇಮಸ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+