ಕಾಂತಾರ ನಟ ಕನ್ನಡಿಗ ಗುಲ್ಶನ್ ದೇವಯ್ಯಗೆ ಮಹಾಮೋಸ, ಆ ಸಿನಿಮಾ ಬಿಟ್ಟು ಹೊರ ಬಂದಿದ್ದೇಕೆ? Gulshan Devaiah

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಂಬಾಳೆ ಸಂಸ್ಥೆ ದೊಡ್ಡ ಕೊಡುಗೆ ನೀಡುತ್ತಿದ್ದು, ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಿನಿಮಾ ರಂಗ ಜಾಗತಿಕ ಮಟ್ಟದಲ್ಲಿ ಮಿಂಚಲು ಹೊಂಬಾಳೆ ಶ್ರಮ ಕೂಡ ದೊಡ್ಡದಾಗಿದೆ. ಅದರಲ್ಲೂ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಿ, ಪರಭಾಷೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡದ ನಟ & ನಟಿಯರಿಗೆ ಅವಕಾಶ ನೀಡುತ್ತಾ ಮಾದರಿ ಆಗಿದ್ದಾರೆ. ಇದೇ ರೀತಿ ಕನ್ನಡಿಗ ಗುಲ್ಶನ್ ದೇವಯ್ಯಗೆ ಕಾಂತಾರ ಸಿನಿಮಾದಲ್ಲಿ ದೊಡ್ಡ ಪಾತ್ರ ನೀಡಿ, ಆ ಮೂಲಕ ದೊಡ್ಡ ಹಿಟ್ ಕೊಡಲಾಗಿತ್ತು. ಆದರೆ, ಇದೇ ಕಾಂತಾರ ಸಿನಿಮಾ ನಟ ಗುಲ್ಶನ್ ದೇವಯ್ಯಗೆ ಮಹಾಮೋಸ ಆಗಿತ್ತಂತೆ...

ಹೌದು, ಸಿನಿಮಾ ರಂಗದಲ್ಲಿ ನಟರು ಹಾಗೂ ನಟಿಯರ ಪಾಲಿನ ಸಂಭಾವನೆ ಕೊಡುವ ಬಗ್ಗೆ ಕಿರಿಕ್ ಇದ್ದೇ ಇರುತ್ತದೆ. ಅಲ್ಲದೆ ಮಾತನಾಡಿದ ಸಂಭಾವನೆಗೆ ಕತ್ತರಿ ಬಿದ್ದ ಉದಾಹರಣೆಗಳು ಇವೆ. ಹೀಗಾಗಿ ಸಿನಿಮಾ ಸಂಭಾವನೆ ನಂಬಿಕೊಂಡು ಬದುಕುವ ನಟ & ನಟಿ ನರಳಾಡುವ ಸ್ಥಿತಿ ನಿರ್ಮಾಣ ಆಗುತ್ತದೆ. ಅದರಲ್ಲೂ ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗದಲ್ಲಿ ಕೂಡ ಇದೇ ರೀತಿಯ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಇಂತಹ ಸಮಯದಲ್ಲೇ ಕಾಂತಾರ ನಟ ಗುಲ್ಶನ್ ದೇವಯ್ಯಗೆ ಮಹಾಮೋಸ ಮಾಡಿದ್ದು ಯಾರು?

Gulshan Devaiah Quits Film Over Professional Misconduct and Unpaid Pay

ಹಣ ಕೊಡದೆ ಸಿನಿಮಾದಲ್ಲಿ ಮೋಸ

ಗುಲ್ಶನ್ ದೇವಯ್ಯ ಅವರು ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ತಾವು ಒಂದು ಸಿನಿಮಾ ಅರ್ಧಕ್ಕೆ ಬಿಟ್ಟು ಏಕೆ ಹೊರಗೆ ಬಂದೆ? ಎಂಬುದನ್ನ ವಿವರಿಸಿದ್ದಾರೆ. ಕಾಂತಾರದ ಮೂಲಕ ಇಡೀ ಇಂಡಿಯಾದಲ್ಲಿ ಮಾತಾಗಿರುವ ಗುಲ್ಶನ್ ದೇವಯ್ಯ ಈಗಾಗಲೇ ಹಲವು ಹಿಟ್ ಸಿನಿಮಾ ನೀಡಿದ್ದಾರೆ. ಅಲ್ಲದೆ ಸಾಲು ಸಾಲು ಅವಕಾಶಗಳು ಈಗ ಅವರನ್ನು ಹುಡುಕಿಕೊಂಡು ಬರುತ್ತಿವೆ. ಇದಕ್ಕೆಲ್ಲಾ ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ಕಾಂತಾರ ಕಾರಣ ಎನ್ನುವ ಹೆಮ್ಮೆ ಕನ್ನಡಿಗರಿಗೆ ಇದೆ.

ಯಾವ ಸಿನಿಮಾದಲ್ಲಿ ಮೋಸ ಆಗಿತ್ತು?

ಆದರೆ ಇದೆಲ್ಲವನ್ನೂ ಮೀರಿ, ಗುಲ್ಶನ್ ದೇವಯ್ಯ ಅವರಿಗೆ ಯಾವುದೋ ಒಂದು ಸಿನಿಮಾದಲ್ಲಿ ಸಂಭಾವನೆ ಅಂದ್ರೆ ತಮ್ಮ ಸಂಬಳ ಕೊಡದೆ ಆಟ ಆಡಿಸಿದ್ದರಂತೆ. ಇದು ಸಾಲದು ಎನ್ನುವಂತೆ ಗುಲ್ಶನ್ ಅವರ ಮ್ಯಾನೇಜರ್ ಜೊತೆಗೂ ಆ ಸಿನಿಮಾ ತಂಡದ ಕಿರಿಕ್ ಆಗಿತ್ತಂತೆ. ಹೀಗೆ ತಮಗೆ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ಸಂಬಳ ಕೊಡದೆ, ಇದರ ಜೊತೆ ಮ್ಯಾನೇಜರ್ ಜೊತೆಗು ಕಿರಿಕ್ ಮಾಡಿಕೊಂಡ ಸಿನಿಮಾ ತಂಡದಿಂದ ನಾನು ಹೊರಗೆ ಬಂದುಬಿಟ್ಟೆ ಎಂದಿದ್ದಾರೆ. ಇದು ಹಿಂದಿ ಸಿನಿಮಾ ಇರಬೇಕು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಸ್ಕ್ರೀನ್ ಸ್ಪಾಟ್‌ಲೈಟ್ ಎಂಬ ಚಾನಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮಗೆ ಆಗಿದ್ದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.

ಟಾಕ್ಸಿಕ್ ಅಬ್ಬರಕ್ಕೆ ದಾಖಲೆಗಳು ಪುಡಿ ಪುಡಿ

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ದೊಡ್ಡ ಮಟ್ಟಿಗೆ ಹವಾ ಎಬ್ಬಿಸಿ ದಾಖಲೆ ಧೂಳ್ ಧೂಳ್ ಮಾಡಲು ಮುಂದೆ ನುಗ್ಗುತ್ತಿದೆ. ಟಾಕ್ಸಿಕ್ ಸಿನಿಮಾ ಟೀಸರ್ ಯಶ್ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್ ಆಗಿದ್ದು, ಟೀಸರ್ ರಿಲೀಸ್ ಆದ ಸುಮಾರು 5 ಗಂಟೆಯಲ್ಲಿ ಭರ್ಜರಿ 7 ಮಿಲಿಯನ್ ವೀವ್ಸ್ ಪಡೆದಿದೆ. ಹಾಗೇ ಹತ್ತಿರ ಹತ್ತಿರ 7 ಲಕ್ಷದಷ್ಟು ಲೈಕ್ಸ್ ಕೂಡ ಗಿಟ್ಟಿಸಿಕೊಂಡಿದೆ. ಇನ್ನೂ ಒಂದು ವಾರ ಟಾಕ್ಸಿಕ್ ಟೀಸರ್ ಹೀಗೆಯೇ ದೊಡ್ಡ ಸೌಂಡ್ ಮಾಡುತ್ತಾ ಟ್ರೆಂಡ್ ಕ್ರಿಯೇಟ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಫ್ಯಾನ್ಸ್ ಭರ್ಜರಿಯಾಗಿ ಯಶ್ ಅವರ ಹುಟ್ಟುಹಬ್ಬ ಸಂಭ್ರಮಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+