Goodachari 2: ‘ಗೂಢಚಾರಿ-2’ಗೆ ಸಿಕ್ಕೇ ಬಿಟ್ಟಳು ಸುಂದರಿ, ಅವರು ಇವರೇ ನೋಡಿ!
'ಗೂಢಚಾರಿ' ಸಿನಿಮಾ ತೆಲುಗು ಚಿತ್ರರಂಗದಲ್ಲಿ ದಾಖಲೆ ಬರೆದ ಸೂಪರ್ ಹಿಟ್ ಚಿತ್ರ ಹೀಗಾಗಿ ಅದರ ಮುಂದಿನ ಭಾಗಕ್ಕೆ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ 'ಗೂಢಚಾರಿ-2' ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಅಡಿವಿ ಶೇಷ್ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿದ್ದ ಆ್ಯಕ್ಷನ್ & ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ ಇದಾಗಿತ್ತು. ಹೀಗೆ ಗಲ್ಲಾಪೆಟ್ಟಿಗೆ ಕೊಳ್ಳೇ ಹೊಡೆದಿದ್ದ ಈ ಸಿನಿಮಾ ಪಾರ್ಟ್-2ಗೆ ಇದೀಗ ಸುಂದರಿ ಸಿಕ್ಕೇ ಬಿಟ್ಟಿದ್ದಾಳೆ.
'ಗೂಢಚಾರಿ' ಸೀಕ್ವೆಲ್ ಬರ್ತಿರೋದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಕೂಡ ಹೆಚ್ಚಾಗಿತ್ತು. ಈಗಾಗಲೆ ರಿಲೀಸ್ ಆಗಿದ್ದ ಗೂಢಚಾರಿ-2 ಫಸ್ಟ್ ಲುಕ್ ಸದ್ದು ಮಾಡಿತ್ತು. ಈಗ ಚಿತ್ರ ತಂಡ ನಾಯಕಿಯ ಪರಿಚಯ ಮಾಡಿಕೊಟ್ಟಿದೆ. ಪ್ರತಿಭಾನ್ವಿತ ನಟಿ ಎಂಬ ಬಿರುದನ್ನೂ ಪಡೆದಿರುವ ಬನಿತಾ ಸಂಧು, ಈ ಚಿತ್ರಕ್ಕೆ ಹೀರೋಯಿನ್ ಆಗಿ ನಟಿಸುತ್ತಿದ್ದಾಳಂತೆ. ಹಲವಾರು ಹಿಂದಿ & ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಬನಿತಾ ಸಂಧು.

ಸುಂದರಿ ಹೇಳಿದ ಮನದಾಳದ ಮಾತು!
ಇನ್ನು 'ಗೂಢಚಾರಿ-2'ಗೆ ನಾಯಕಿಯಾಗಿ ಆಯ್ಕೆಯಾದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ನಟಿ ಬನಿತಾ. ಇದು ನನ್ನ ಮೊದಲನೆ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ಟೀಂ ಜೊತೆಗೆ ಕೈ ಜೋಡಿಸುವುದಕ್ಕೆ ಕಾಯುತ್ತಿದ್ದೇನೆ. ಹಿಂದೆಂದು ಮಾಡದ ವಿಭಿನ್ನವಾದ ಪಾತ್ರವೊಂದರಲ್ಲಿ ಈಗ ನಟಿಸುತ್ತಿದ್ದೇನೆ. ಪ್ರೇಕ್ಷಕರು ನನ್ನ ಸಂಪೂರ್ಣ ಹೊಸ ಅವತಾರದಲ್ಲಿ ನೋಡುತ್ತಾರೆ. ಈ ಸಿನಿಮಾದಲ್ಲಿ ಕೆಲಸ ಮಾಡಲು ನಾನು ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ನಟಿ ಬನಿತಾ.
ಖುದ್ದಾಗಿ ಕಥೆ ಬರೆದ ಹೀರೋ
ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದಾರೆ. ಕಾರ್ತೀಕೇಯ 2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು 'ಗೂಢಚಾರಿ 2' ಸಿನಿಮಾಗೆ ಕೂಡ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ & ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಸೇರಿ AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ಅಡಿ ಟಿಜಿ ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ 'ಗೂಢಚಾರಿ 2' ಸಿನಿಮಾ ಅಭಿಮಾನಿಗಳಲ್ಲಿ ಇದೀಗ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.
ಒಟ್ನಲ್ಲಿ 'ಗೂಢಚಾರಿ 2'ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ. ಇದೀಗ ಹೀರೋಯಿನ್ ಕೂಡ ಫೈನಲ್ ಆಗಿದ್ದು, ಅಭಿಮಾನಿಗಳ ಗಮನವನ್ನು ಕೂಡ ಸೆಳೆದಿದೆ. ಹಾಗೇ 'ಗೂಢಚಾರಿ' ದಾಖಲೆಗಳನ್ನು 'ಗೂಢಚಾರಿ 2' ಹಿಂದಿಕ್ಕುವ ಬಗ್ಗೆ ಕೂಡ ನಿರೀಕ್ಷೆಗಳು ದಟ್ಟವಾಗಿವೆ.












Click it and Unblock the Notifications