Gold Suresh: ಗೋಲ್ಡ್‌ ಸುರೇಶ್‌ ಬ್ಯುಸಿನೆಸ್ ಏನು, ಕೋಟಿ.. ಕೋಟಿ ಗಳಿಸಿದ್ದು ಹೇಗೆ: ಈಗ ಏನಾಯ್ತು!

ಬಿಗ್‌ಬಾಸ್‌ನಲ್ಲಿ ನಯ ವಿನಯದಿಂದ ಸದ್ದು ಮಾಡಿದ್ದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಗೋಲ್ಡ್‌ ಸುರೇಶ್‌ ಅವರು ಏಕಾಏಕಿ ಬಿಗ್‌ಬಾಸ್‌ನಿಂದ ಹೊರ ಬಂದಿದ್ದಾರೆ. ಈ ಬೆಳವಣಿಗೆಗೆ ಕರ್ನಾಟಕದ ಜನ ಹಾಗೂ ಬಿಗ್‌ಬಾಸ್‌ನ ಸ್ಪರ್ಧಿಗಳಿಗೆ ಶಾಕಿಂಗ್ ಆಗಿದೆ. ಕನ್ನಡ ಬಿಗ್‌ಬಾಸ್‌ ಸೀಸನ್‌ 11 ಇದೀಗ ಸಿಕ್ಕಾಪಟ್ಟೆ ರೋಚಕ ಹಂತವನ್ನು ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್‌ನ ಟಾಪ್‌ 5 ಕಂಟೆಂಸ್ಟೆಂಟ್ ಪಟ್ಟಿ ಬಿಡುಗಡೆಯಾಗಲಿದೆ. ಗೋಲ್ಡ್‌ ಸುರೇಶ್‌ ಅವರು ಸಹ ಈ ಬಾರಿಯ ಸೀಸನ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದರು. ಹೀಗಾಗಿ, ಅವರು ಸಹ ಈ ಬಾರಿ ಟಾಪ್‌ 5ನಲ್ಲಿ ಇರಲಿದ್ದಾರೆ ಅಂತ ಬಿಗ್‌ಬಾಸ್‌ನ ವೀಕ್ಷಕರು ಅಂದಾಜಿಸಿದ್ದರು. ಆದರೆ, ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಈ ನಡುವೆ ಸುರೇಶ್‌ ಅವರ ಬ್ಯುಸಿನೆಸ್‌ನಲ್ಲಾಗಿರುವ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ. ಹಾಗಾದರೆ ಅವರು ಮಾಡುತ್ತಿದ್ದ ಬ್ಯುಸಿನೆಸ್ ಏನು, ಈ ಸುದ್ದಿ ನಿಜಾನಾ ಎನ್ನುವುದು ಇಲ್ಲಿದೆ.

ಈ ಬಾರಿಯ ಬಿಗ್‌ಬಾಸ್‌ ಪಯಣವನ್ನು ಅರ್ಧಕ್ಕೆ ಮುಗಿಸಿದವರೇ ಹೆಚ್ಚಾಗುತ್ತಿದ್ದು, ಈ ಸಾಲಿಗೆ ಗೋಲ್ಡ್ ಸುರೇಶ್‌ ಅವರು ಸಹ ಸೇರ್ಪಡೆಯಾಗಿದ್ದಾರೆ. ಕನ್ನಡ ಬಿಗ್‌ಬಾಸ್‌ ಸೀಸನ್ 11ರಲ್ಲಿ ಸದ್ದು ಮಾಡಿದ್ದ ಹಲವು ಸ್ಪರ್ಧಿಗಳು ಅರ್ಧದಲ್ಲೇ ಅವರ ಪಯಣವನ್ನು ಮುಕ್ತಾಯ ಮಾಡಿದ್ದಾರೆ. ಇದೇ ಸಾಲಿಗೆ ಇದೀಗ ಗೋಲ್ಡ್‌ ಸುರೇಶ್‌ ಅವರು ಸೇರಿದ್ದಾರೆ.

Gold Suresh Updates Gold Suresh business how did he earn crores What happened now

ಬಿಗ್‌ಬಾಸ್‌ ಮನೆಗೆ ಹನುಮಂತ ಬಂದ ಮೇಲೆ ಗೋಲ್ಡ್‌ ಸುರೇಶ್‌ ಹಾಗೂ ಹನುಮಂತು ಅವರ ಜೋಡಿಯ ಫನ್‌ಗಳು ಜನರಿಗೆ ಇಷ್ಟವಾಗಿತ್ತು. ಲೇ ಮಾವ ಅಂತ ಗೋಲ್ಡ್‌ ಸುರೇಶ್‌ ಅವರನ್ನು ಹನುಮಂತ ಕರೆಯುವುದು ಟ್ರೆಂಡ್ ಸೃಷ್ಟಿ ಮಾಡಿತ್ತು. ಇದೀಗ ಬಿಗ್‌ಬಾಸ್‌ನ ಸುಮಧುರ ಪಯಣವನ್ನು ಗೋಲ್ಡ್‌ ಸುರೇಶ್‌ ಅವರು ಅರ್ಧಕ್ಕೆ ನಿಲ್ಲಿಸುವುದಕ್ಕೆ ಅವರ ಬ್ಯುಸಿನೆಸ್‌ ಕಾರಣನಾ ಎನ್ನುವುದು ಚರ್ಚೆಯಾಗ್ತಿದೆ.

ಬಿಗ್‌ಬಾಸ್‌ ಕೂಡ ಯಾವ ಕಾರಣಕ್ಕಾಗಿ ಸುರೇಶ್‌ ಅವರನ್ನು ಈ ರೀತಿ ಏಕಾಏಕಿ ಹೊರಕ್ಕೆ ಕಳುಹಿಸಲಾಗುತ್ತಿದೆ ಎನ್ನುವುದರ ಬಗ್ಗೆ ಮಾತನಾಡಿಲ್ಲ. ಇದರ ನಡುವೆ ಬಿಗ್‌ಬಾಸ್‌ ಸ್ಪರ್ಧಿಗಳ ಗುಸುಗುಸು ಗಾಸಿಪ್ ಈ ಚರ್ಚೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಐಶ್ವರ್ಯಾ ಸಿಂದೋಗಿ ಹಾಗೂ ಹಲವರು ಬಿಗ್‌ಬಾಸ್‌ನಿಂದ ಗೋಲ್ಡ್‌ ಸುರೇಶ್‌ ಅವರು ಹೊರಗಡೆ ಯಾಕೆ ಹೋಗಿರಬಹುದು ಅಂತ ಮಾತನಾಡಿಕೊಂಡಿದ್ದಾರೆ.

ಈ ಮಾತುಗಳು ನಿಜವಿರಬಹುದೇ ಅಂತಲೂ ಚರ್ಚೆಯಾಗ್ತಿದೆ. ಸದ್ಯದ ಮಾಹಿತಿಯಂತೆ ಗೋಲ್ಡ್‌ ಸುರೇಶ್‌ ಅವರ ಕುಟುಂಬದವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಅವರ ತಂದೆ ಸಹ ಆರೋಗ್ಯವಾಗಿದ್ದು, ಕುಟುಂಬದಲ್ಲಿ ಯಾರಿಗೂ ಆರೋಗ್ಯ ಅಥವಾ ಬೇರೆ ಯಾವುದೇ ತುರ್ತು ಸಮಸ್ಯೆ ಇಲ್ಲ ಎನ್ನಲಾಗಿದೆ.

ಗೋಲ್ಡ್‌ ಸುರೇಶ್‌ ಅವರ ಬ್ಯುಸಿನೆಸ್ ಯಾವುದು: ಈಗ ಗೋಲ್ಡ್‌ ಸುರೇಶ್‌ ಅವರ ಬ್ಯುಸಿನೆಸ್ ಯಾವುದು ಎನ್ನುವ ವಿಚಾರವೇ ತುಂಬಾ ಚರ್ಚೆಯಾಗುತ್ತಿದೆ. ಬ್ಯುಸಿನೆಸ್ ಏನಾದರೂ ಸಮಸ್ಯೆ ಆಗಿಯೇ ಎನ್ನುವ ಪ್ರಶ್ನೆ ಎದುರಾಗಿದೆ. ಗೋಲ್ಡ್‌ ಸುರೇಶ್‌ ಅವರು ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ ಎಂದು ಸುದ್ದಿಯಾಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಏರುಪೇರಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗೋಲ್ಡ್‌ ಸುರೇಶ್‌ ಅವರಿಗೆ ಓದಲು ಇಷ್ಟವಿರಲಿಲ್ಲ. ಮನೆಯಲ್ಲಿ ವ್ಯವಸಾಯ ಮಾಡುವುದಕ್ಕೆ ಬಲವಂತ ಮಾಡಿದಾಗ ಅವರು ಮನೆಬಿಟ್ಟು ಬಂದಿದ್ದರು ಅಂತ ಅವರೇ ಹೇಳಿಕೊಂಡಿದ್ದರು. ಅವರು ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿರುವುದರಿಂದ ಈ ರೀತಿ ಸಮಸ್ಯೆ ಆಗಿದೆ ಎನ್ನಲಾಗಿದೆ. ಆದರೆ, ಈ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+