Bigg Boss: ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಗೆ ಮತ್ತೆ ಎಂಟ್ರಿ, ಕಿಚ್ಚ ಸುದೀಪ್....

ಗೋಲ್ಡ್ ಸುರೇಶ್ ಬಿಗ್‌ಬಾಸ್ ವೀಕ್ಷಕರಿಗೆ & ಬಿಗ್‌ಬಾಸ್ ಕಾರ್ಯಕ್ರಮದ ಬೆನ್ನೆಲುಬು ಅಂತಾ ಕರೆಸಿಕೊಳ್ಳುವ ಕಿಚ್ಚ ಸುದೀಪ್ ಅವರಿಗೂ ಹತ್ತಿರ ಆಗಿದ್ದರು. ಗೋಲ್ಡ್ ಸುರೇಶ್ ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ತಮ್ಮ ಚಿನ್ನದ ಮೂಲಕವೇ ಸದ್ದು ಮಾಡಿದ್ದರು. ಅದರಲ್ಲೂ ಮೈತುಂಬಾ ಚಿನ್ನ ಹಾಕುತ್ತಿದ್ದ ಗೋಲ್ಡ್ ಸುರೇಶ್ ಬಗ್ಗೆ ಸಹ ಸ್ಪರ್ಧಿಗಳು ಸಿಕ್ಕಾಪಟ್ಟೆ ರೇಗಿಸಿದ್ದು ಕೂಡ ಉಂಟು. ಆದರೆ ದಿಢೀರ್ ಅಂತಾ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದುಬಿಟ್ಟರು. ಹೀಗಿದ್ದಾಗಲೇ ದಿಢೀರ್, ಗೋಲ್ಡ್ ಸುರೇಶ್ ಬಿಗ್‌ಬಾಸ್‌ಗೆ ಮತ್ತೆ ಎಂಟ್ರಿ ಕೊಟ್ಟೇ ಬಿಟ್ಟಿದ್ದಾರೆ!

ಚಿನ್ನ.. ಚಿನ್ನ.. ಚಿನ್ನ... ಹೀಗೆ ಗೋಲ್ಡ್ ಸುರೇಶ್ ಅವರು ಮೈತುಂಬಾ ಚಿನ್ನ ಹಾಕ್ತಾರೆ. ಗೋಲ್ಡ್ ಸುರೇಶ್ ಅವರು ಚಿನ್ನದ ಬಗ್ಗೆ ತಮಗೆ ಇರುವ ಅತಿಯಾದ ಸೆಳೆತದಿಂದಲೇ ಸಖತ್ ಫೇಮಸ್ ಆಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಹವಾ ಎಬ್ಬಿಸಿದ್ದ ಗೋಲ್ಡ್ ಸುರೇಶ್ ಕುತ್ತಿಗೆಯಲ್ಲಿ 2 ಚಿನ್ನದ ಸರ ಸೇರಿ, ಕೈಯಲ್ಲಿ ಬ್ರೇಸ್ ಲೈಟ್ & ಉಂಗುರಗಳನ್ನ ಕೂಡ ಹಾಕುತ್ತಾರೆ.

Gold Suresh Returns to Bigg Boss Kannada for Compelling Reasons

ಎಲ್ಲ ಚಿನ್ನವನ್ನೂ ಸೇರಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮೈಮೇಲೆ ಹಾಕ್ತಾರಂತೆ ಇದೇ ಗೋಲ್ಡ್ ಸುರೇಶ್ ಅವರು. ಹೀಗಿದ್ದಾಗ ಗೋಲ್ಡ್ ಸುರೇಶ್ ಅವರು ದಿಢೀರ್ ಬಿಗ್‌ಬಾಸ್ ಮನೆ ಬಿಟ್ಟು ಕಳೆದ ವಾರ ಹೊರಗೆ ಹೋಗಿಬಿಟ್ಟಿದ್ದರು. ಆದರೆ ಇದೀಗ ಮತ್ತೆ ಬಿಗ್‌ಬಾಸ್‌ಗೆ ಎಂಟ್ರಿಯನ್ನ ಕೊಟ್ಟಿದ್ದಾರೆ!

ಗೋಲ್ಡ್ ಸುರೇಶ್ ಆಟ ಮತ್ತೆ ಶುರು?

ಎಲ್ಲರಿಗು ಗೊತ್ತಿರುವಂತೆ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಲ್ಲಿ ಭರ್ಜರಿ ಹವಾ ಎಬ್ಬಿಸಿದ್ರು. ಮೈಮೇಲೆ ರಾಶಿ, ರಾಶಿ ಚಿನ್ನ ಹಾಕುವ ಗೋಲ್ಡ್ ಸುರೇಶ್ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆಲ್ಲುತ್ತಾರೆ ಅನ್ನೋ ಭರವಸೆ ಮೂಡಿತ್ತು. ಈ ಕಾರಣಕ್ಕೆ ಕನ್ನಡಿಗರು ಕೂಡ ಗೋಲ್ಡ್ ಸುರೇಶ್ ಬೆನ್ನಿಗೆ ನಿಂತಿದ್ದರು. ಆದರೆ, ಇದ್ದಕ್ಕಿದ್ದಂತೆ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯನ್ನೇ ಬಿಟ್ಟು ಹೊರ ಬಂದರು. ಇಂತಹ ಸಮಯದಲ್ಲೇ ಮತ್ತೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟರೆ ಹೇಗೆ ಇರಬೇಡ ಹೇಳಿ?

ಹೌದು, ಇದೀಗ ಗೋಲ್ಡ್ ಸುರೇಶ್ ಮತ್ತೊಮ್ಮೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದರು ನಿಜ ಆದರೆ ಸ್ಪರ್ಧಿಯಾಗಿ ಅಲ್ಲ. ಗೋಲ್ಡ್ ಸುರೇಶ್ ಅವರು ದಿಢೀರ್ ಅಂತಾ ಬಿಗ್‌ಬಾಸ್ ಮನೆಯ ಬಿಟ್ಟು ಹೊರಗೆ ಹೋದ ಹಿನ್ನೆಲೆಯಲ್ಲಿ ಅವರಿಗೆ ಸರಿಯಾಗಿ ಬೀಳ್ಕೊಡುಗೆ ನೀಡಿರಲಿಲ್ಲ. ಈ ವಿಚಾರ ಅರಿತುಕೊಂಡೋ ಅಥವಾ ಗೋಲ್ಡ್ ಸುರೇಶ್‌ಗೆ ಬಹುಮಾನ ತಲುಪಿಸುವ ಕಾರಣಕ್ಕೋ ಗೊತ್ತಿಲ್ಲ, ಆದರೆ ದಿಢೀರ್ ಅಂತಾ ಮತ್ತೆ ಗೋಲ್ಡ್ ಸುರೇಶ್ ಅವರನ್ನ ವಾಪಸ್ ಕರೆಸಲಾಗಿತ್ತು.

ಕಿಚ್ಚನ ಖಡಕ್ ಉತ್ತರಕ್ಕೆ ಗೋಲ್ಡ್ ಸೈಲೆಂಟ್!

ಹೀಗೆ ಮತ್ತೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ವಾಪಸ್ ಬಂದ ಗೋಲ್ಡ್ ಸುರೇಶ್ ಅವರು ಮತ್ತೊಮ್ಮೆ ಬಿಗ್‌ಬಾಸ್ ಮನೆ ಒಳಗೆ ಹೋಗಿ ಆಟ ಆಡುತ್ತೀನಿ ಅವಕಾಶ ಕೊಡಿ ಅಂತಾ ಕೇಳಿಕೊಂಡರು. ಆದರೆ ಹೀಗೆ ಬಿಗ್‌ಬಾಸ್ ಮನೆ ಒಳಗೆ ಮತ್ತೆ ಹೋಗ್ತೀನಿ ಅಂತಾ ಕಿಚ್ಚ ಸುದೀಪ್ ಅವರ ಎದುರು ಗೋಲ್ಡ್ ಸುರೇಶ್ ಹೇಳಿದ ನಂತರ, ಅದಕ್ಕೆ ಕಿಚ್ಚ ಸುದೀಪ್ ಅವರು ಒಪ್ಪಿಗೆ ಸೂಚಿಸಲಿಲ್ಲ! ಇದು ಸಾಧ್ಯವೇ ಇಲ್ಲ ಅಂತಾ ಹೇಳಿದರು. ಒಟ್ನಲ್ಲಿ ದಿಢೀರ್ ಅಂತಾ ರೀ ಎಂಟ್ರಿ ಕೊಟ್ಟಿದ್ದ ಗೋಲ್ಡ್ ಸುರೇಶ್ ಅವರು ಅದೇ ರೀತಿ ದಿಢೀರ್ ಅಂತಾ ಮಾಯ ಕೂಡ ಆಗಿಬಿಟ್ಟರು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+