ಗೋಲ್ಡ್‌ ಸುರೆಶ್‌ ಆಸ್ಪತ್ರೆಗೆ ದಾಖಲು

Gold Suresh: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ ಗೋಲ್ಡ್‌ ಸುರೆಶ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳದುಬಂದಿದೆ. ಕಾರಣಾಂತರಗಳಿಂದ ಬಿಗ್‌ ಬಾಸ್‌ ಮನೆಯಿಂದ ಅರ್ಧಕ್ಕೆ ಬಿಟ್ಟು ಹೊರಗಡೆ ಬಂದಿದ್ದರು. ಬಿಗ್‌ ಬಾಸ್‌ ಮನೆಯಲ್ಲಿದ್ದಷ್ಟು ದಿನ ಅವರು ಟಾಸ್ಕ್‌ಗಳನ್ನು ಉತ್ತಮವಾಗಿ ಆಡಿ ವೀಕ್ಷಕರ ಮನ ಗೆದ್ದಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ ವೇಳೆ ಗೋಲ್ಡ್​ ಸುರೇಶ್ ಅವರು ಕಾಲಿಗೆ ಗಂಭೀರವಾಗಿ ​ಪಟ್ಟು ಮಾಡಿಕೊಂಡಿದ್ದರು. ಈ ಹಿನ್ನೆಲೆ ಗೋಲ್ಡ್ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಳೆ ಗೋಲ್ಡ್ ಸುರೇಶ್​ ಅವರಿಗೆ ಆಪರೇಷನ್ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Gold Suresh Admitted to Hospital

ಅವರು ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಕ್ಯಾಪ್ಟನ್ ಆಗಿ ಮನೆಯಲ್ಲಿ ಖುಷಿಯಾಗಿದ್ದ ಗೋಲ್ಡ್ ಸುರೇಶ್‌ ಅವರನ್ನು ಕಾರಣಾಂತರಗಳಿಂದ ಬಿಗ್‌ ಬಾಸ್‌ ಮನೆಯಿಂದ ದಿಢೀರ್ ಹೊರ ಕಳುಹಿಸಲಾಯಿತು. ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ ಎಂದು ಅನೌನ್ಸ್‌ ಮಾಡುವ ಮೂಲಕ ಅವನ್ನು ಹೊರಗಡೆ ಕಳುಹಿಸಲಾಗಿತ್ತು. ಆಗ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಹೊರ ಬಂದಿದ್ದರು.

ಎಲಿಮಿನೇಟ್​ ಆಗಿ ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗುವುದು ಬೇರೆ. ಆದರೆ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣದಿಂದ ಬಿಗ್ ಬಾಸ್​ ಮನೆಗೆ ವಿದಾಯ ಹೇಳುವುದು ನಿಜಕ್ಕೂ ಬೇಸರದ ಸಂಗತಿ. ಗೋಲ್ಡ್ ಸುರೇಶ್ ಅವರಿಗೆ ಈ ಪರಿಸ್ಥಿತಿ ಬಂದಿದೆ. ಚೆನ್ನಾಗಿ ಆಟ ಆಡುತ್ತಿರುವಾಗಲೇ ಅವರು ಬಿಗ್ ಬಾಸ್​ ಶೋನಿಂದ ಹೊರಗೆ ಬರಬೇಕಾಯಿತು. ಡಿಸೆಂಬರ್​ 16ರ ಸಂಚಿಕೆಯಲ್ಲಿ ಅವರು ದೊಡ್ಮನೆ ಬಿಟ್ಟು ಹೊರಬಂದಿದ್ದನ್ನು ತೋರಿಸಲಾಗಿತ್ತು.

ಸಾಮಾನ್ಯವಾಗಿ ಬಿಗ್ ಬಾಸ್ ಆಟದಿಂದ ಯಾರೇ ಎಲಿಮಿನೇಟ್​ ಆದರೂ ಅವರನ್ನು ವೇದಿಕೆಗೆ ಕರೆದು ಸುದೀಪ್​ ಮಾತನಾಡಿಸುತ್ತಾರೆ. ಆದರೆ ಈ ರೀತಿ ಅನಿವಾರ್ಯ ಕಾರಣಗಳಿಂದ ಮನೆ ಬಿಟ್ಟು ತೆರಳಬೇಕಾದ ಸಂದರ್ಭ ಬಂದರೆ ಆಗ ಕಿಚ್ಚ ಸುದೀಪ್ ಜೊತೆ ಮಾತನಾಡುವ ಅವಕಾಶ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಗೋಲ್ಡ್ ಸುರೇಶ್ ಸಹ ಅಂತಹ ಚಾನ್ಸ್ ಮಿಸ್​ ಮಾಡಿಕೊಂಡು ದೊಡ್ಮನೆಯಿಂದ ಹೊರಗೆ ಕಾಲಿಟ್ಟಿದ್ದರು.

ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಗೋಲ್ಡ್ ಸುರೇಶ್ ಅವರು ಕೂಡಲೇ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಬರಬೇಕೆಂದು ಬಿಗ್ ಬಾಸ್ ಆದೇಶ ನೀಡಿದರು. ಅವರಿಗೆ 77ನೇ ದಿನದಲ್ಲಿ ಎಲ್ಲರೂ ಭಾವುಕ ವಿದಾಯ ಹೇಳಿದರು.

"ಮನೆಯಿಂದ ಎಮರ್ಜೆನ್ಸಿ ಇದ್ದರೆ ನಿಮಗೆ ಆ ಸಂದೇಶ ತಲುಪಿಸುತ್ತೇವೆ ಎಂದು ಹೇಳಿದ್ದೆವು. ನೀವು ಗಾಬರಿ ಆಗುವಂತಹದ್ದು ಏನೂ ಇಲ್ಲ. ಆದರೆ, ಈಗ ನೀವು ಮನೆಗೆ ತೆರಳಬೇಕು. ಸುರೇಶ್ ಅವರು ಸೋತು ಹೋಗುತ್ತಿಲ್ಲ. ಕ್ಯಾಪ್ಟನ್ ಆಗಿ ಗೆದ್ದು ಹೋಗುತ್ತಿದ್ದಾರೆ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಕಷ್ಟಪಟ್ಟು ಆಟ ಆಡಿ ಸುರೇಶ್ ಅವರು ಈ ವಾರ ಕ್ಯಾಪ್ಟನ್ ಆಗಿದ್ದರು. ಆದರೆ, ಅರ್ಧಕ್ಕೆ ಶೋನಿಂದ ಹೊರಗಡೆ ಬಂದಿದ್ದರಿಂದ ಅವರ ಶ್ರಮ ವ್ಯರ್ಥ ಆದಂತೆ ಆಗಿತ್ತು. ಆದರೆ ನಿಜ ಏನಂದ್ರೆ ಅವರ ಬಿಸಿನೆಸ್‌ನಲ್ಲಿ ನಷ್ಟ ಉಂಟಾದ ಕಾರಣ ಅವರನ್ನು ಹೊರಗಡೆ ಕಳುಹಿಸಲಾಗಿತ್ತು ಎಂದು ತಿಳಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+