Gelathi Gayathri Serial: ಗೆಳತಿ ಗಾಯತ್ರೀ ಹೀರೋ ಸೂರ್ಯ ಪಾತ್ರಧಾರಿ ಫಿಟ್ನೆಸ್ ಗುಟ್ಟು ರಿವೀಲ್, ಯಾರೀ ಪೂಜಾ?

ʼGelathi Gayatriʼ ಸನ್‌ ಉದಯ ಟಿವಿಯಲ್ಲಿ ಮೊನ್ನೆ ಮೊನ್ನೆ ಪ್ರಸಾರ ಆರಂಭಿಸಿರುವ ಸೀರಿಯಲ್.‌ ಇದು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 7:00 ಗಂಟೆಗೆ ಪ್ರಸಾರವಾಗುತ್ತಿದೆ. ಇದೊಂದು ಗೆಳೆತನದ ಕಥೆ. ಇದರಲ್ಲಿ ನೋವಿನ ಲವ್‌ಸ್ಟೋರಿಯೂ ಇದೆ. ಆ ಲವ್‌ಸ್ಟೋರಿಯ ಕೇಂದ್ರ ಪಾತ್ರವೇ ಸೂರ್ಯ. ಈ ಪಾತ್ರ ಮಾಡಿರೋದು ನಾಗಾರ್ಜುನ ಬಿ. ಈ ಹಿಂದೆ ಅಗ್ನಿಸಾಕ್ಷಿಯಲ್ಲಿ ಕೌಶಿಕ್‌ ಅನ್ನೋ ಪಾತ್ರಕ್ಕೆ ಜೀವ ತುಂಬಿದ ನಟ. ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಇವರ ನಟನೆ ನೋಡಿ ಇವ್ರೇ ಸೀರಿಯಲ್‌ ಹೀರೋ ಆಗಬಹುದಿತ್ತು ಅಂತ ಬಹಳಷ್ಟು ಜನ ಕಾಮೆಂಟ್‌ ಮಾಡುತ್ತಿದ್ದರು. ಅವರ ಮಾತು ಇದೀಗ ನಿಜವಾದ ಹಾಗಿದೆ. ʼಅಗ್ನಿಸಾಕ್ಷಿʼ ಹೀರೋಯಿನ್‌ ವೈಷ್ಣವಿ ಗೌಡ ಕಂ ಬ್ಯಾಕ್‌ ಮಾಡ್ತಿರೋ ʼಗೆಳತಿ ಗಾಯತ್ರಿʼ ಸೀರಿಯಲ್‌ಗೆ ಇವರೇ ನಾಯಕ. ಇವರು ಮಾಡ್ತಿರೋ ಪಾತ್ರದ ಹೆಸರು ಸೂರ್ಯ. ಸಾಕಷ್ಟು ಲೇಯರ್‌ ಇರುವಂಥಾ ಪಾತ್ರ ಇದು.

Gelanthi Gayathri

ಅಗ್ನಿಸಾಕ್ಷಿಯ ಕೌಶಿಕ್‌

ಸೀರಿಯಲ್‌ ಪ್ರಿಯರು ಎಂದೂ ಮರೆಯದ ಧಾರಾವಾಹಿ ʼಅಗ್ನಿಸಾಕ್ಷಿʼ. ಇದರಲ್ಲಿ ವೈಷ್ಣವಿ ಗೌಡ ಸನ್ನಿಧಿ ಪಾತ್ರ ಮಾಡಿದ್ದರು. ಇವರ ಪತಿ ಸಿದ್ಧಾರ್ಥನಾಗಿ ವಿಜಯ್‌ ಸೂರ್ಯ ಮಿಂಚಿದ್ದರು. ಇವರಿಬ್ಬರಿಗೂ ನೇಮ್‌ ಆಂಡ್‌ ಫೇಮ್‌ ತಂದುಕೊಟ್ಟ ಸೀರಿಯಲ್‌ ಇದು. ಈ ಸೀರಿಯಲ್‌ನಲ್ಲಿ ಸಿದ್ಧಾರ್ಥನ ತಂಗಿ ಅಂಜಲಿ ಪಾತ್ರಕ್ಕೂ ಅದರದೇ ಆದ ತೂಕ ಇತ್ತು. ಈ ಹುಡುಗಿಯನ್ನು ಮದುವೆಯಾಗೋ ಹುಡುಗನಾಗಿ ಕಾಣಿಸಿಕೊಂಡವರು ನಾಗಾರ್ಜುನ. ಕೌಶಿಕ್‌ ಆಲಿಯಾಸ್‌ ತೇಜಸ್‌ ಅನ್ನೋ ಪಾತ್ರದಲ್ಲಿ ಅಂಜಲಿಯನ್ನು ಪ್ರೀತಿಸುವಂತೆ ನಟಿಸಿ ಕೊನೆಗೂ ಅವಳಿಂದ ದೂರಾಗುವ ಪಾತ್ರದಲ್ಲಿ ನಾಗಾರ್ಜುನ ಕಾಣಿಸಿಕೊಂಡಿದ್ದರು. ಇದರಲ್ಲಿ ಇವರ ನಟನೆ ನೋಡಿದ ಬಹಳ ಮಂದಿ ಇವರ ನಟನೆ ಮೆಚ್ಚಿ ಒಂದು ವೇಳೆ ಸಿದ್ಧಾರ್ಥನ ಪಾತ್ರಕ್ಕೆ ವಿಜಯ್‌ ಸೂರ್ಯ ಬರದೇ ಇದ್ದಿದ್ದರೆ ಇವರೇ ಹೀರೋ ಆಗಬಹುದಿತ್ತು ಅಂತ ಕಾಮೆಂಟ್‌ ಮಾಡಿದ್ದರು. ಅನೇಕರಿಗೆ ಇವತ್ತಿಗೂ ಇವರು ಫೇವರಿಟ್.‌ ಟಿ.ಎನ್‌. ಸೀತಾರಾಂ ಅವರ ಮಗಳು ಜಾನಕಿ ಸೀರಿಯಲ್‌ನಲ್ಲೂ ಇವರು ಮಹತ್ವದ ಪಾತ್ರದಲ್ಲಿ ನಟಿಸಿದ್ದರು.

ಯಾರು ಈ ನಾಗಾರ್ಜುನ

ಇವರು ಮೈಸೂರು ಮೂಲದ ನಟ. ಜೊತೆಗೆ ಉದ್ಯಮಿಯೂ ಹೌದು. ಚೇಸ್‌ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ನಟನೆಯಲ್ಲಿ ಬಹಳ ಆಸಕ್ತಿ ಇರುವ ಇವರು ಅದಕ್ಕಾಗಿ ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಳ್ತಾರೆ. ಹೀರೋ ಆಗಬೇಕು ಅಂದರೆ ಆಕ್ಟಿಂಗ್‌ ಸ್ಕಿಲ್‌ ಜೊತೆಗೆ ಲುಕ್‌ ಗುಡ್‌ ಫ್ಯಾಕ್ಟರ್‌ ಕೂಡ ಮುಖ್ಯ ಅಂತ ನಂಬಿಕೊಂಡಿದ್ದಾರೆ.

ಮದುವೆ ಆಗಿದೆ, ಪತ್ನಿ ಸಾಥ್‌ ಇದೆ

ಮೊನ್ನೆ ಗೆಳತಿ ಗಾಯತ್ರಿ ಸೀರಿಯಲ್‌ನ ಕಾರ್ಯಕ್ರಮದಲ್ಲಿ ಇವರು ಮಾತಾಡಿದ್ದು ಮಜಾ ಇತ್ತು. ಕಲಾವಿದನಿಗೆ ಪ್ರತಿಭೆ ಇದ್ದರೆ ಸಾಲದು, ಅದಕ್ಕೆ ತಕ್ಕ ವೇದಿಕೆಯೂ ಬೇಕು ಅನ್ನೋದನ್ನು ತನ್ನ ಅನುಭವದ ಹಿನ್ನೆಲೆಯಲ್ಲಿ ಹೇಳಿದರು. ಜೊತೆಗೆ ಈ ವೇಳೆ ತನ್ನ ಮನರಂಜನಾ ಜರ್ನಿಯಲ್ಲಿ ಸಾಥ್‌ ನೀಡುವ ಪತ್ನಿ ಪೂಜಾರನ್ನೂ ನೆನಪು ಮಾಡಿಕೊಂಡರು. ತನ್ನ ಇಷ್ಟೊಳ್ಳೆ ಫಿಸಿಕ್‌ಗೆ ಆಕೆ ನೀಡುವ ಡಯೆಟ್‌ ಫುಡ್‌ ಬಹು ಮುಖ್ಯ ಕಾರಣ ಅನ್ನೋದನ್ನು ರಿವೀಲ್‌ ಮಾಡಿದರು.

ಸೀರಿಯಲ್‌ನಲ್ಲಿ ಇವರ ಪಾತ್ರಕ್ಕಿರೋ ಮಹತ್ವ ಏನು?

ಗೆಳತಿ ಗಾಯತ್ರಿ ಸೀರಿಯಲ್‌ನ ನಾಯಕಿ ಪಾರ್ವತಿ. ಆಕೆ ಆಗರ್ಭ ಶ್ರೀಮಂತೆ. ಅವಳ ಜೀವದ ಗೆಳತಿ ಸೂಜಿ ಅರ್ಥಾತ್‌ ಗಾಯತ್ರಿ, ಯಾವುದೋ ಕಾರಣಕ್ಕೆ ಈ ಗೆಳತಿಯರು ಬೇರೆ ಆಗಿರುತ್ತಾರೆ. ಗಾಯತ್ರಿಯ ಪ್ರೀತಿಸುತ್ತಿದ್ದ ಹುಡುಗ ಸೂರ್ಯ. ಲೈಫಲ್ಲಿ ತನಗೆ ಅಂತ ಏನನ್ನೂ ಕೇಳದ ಪಾರ್ವತಿ ಒಮ್ಮೆ ಮಾತ್ರ ಕೈ ಕುಯ್ದುಕೊಂಡು ಸೂರ್ಯನನ್ನೇ ತಾನು ಮದುವೆ ಆಗೋದಾಗಿ ಹಠ ಮಾಡ್ತಾಳೆ. ಅವನಿಲ್ಲದೇ ಹೋದರೆ ಸತ್ತೇ ಹೋಗುವುದಾಗಿ ಹೇಳುತ್ತಾಳೆ. ಗಾಬರಿಬಿದ್ದ ಪಾರ್ವತಿ ಹೆತ್ತವರು ಅದ್ಹೇಗೋ ಸೂರ್ಯನ ಜೊತೆಗೆ ಪಾರ್ವತಿ ಮದುವೆಯನ್ನೂ ಮಾಡುತ್ತಾರೆ. ಇದೀಗ ಪಾರ್ವತಿಗೆ ಸೂರ್ಯ ಮೆಚ್ಚಿನ ಪತಿಯಾಗಿದ್ದಾನೆ. ಅವರಿಗೊಬ್ಬಳು ಮಗಳೂ ಇದ್ದಾಳೆ. ಆದರೆ ಪ್ರೀತಿಸುವ ಹುಡುಗನಿಗಾಗಿ ಕಾಯುತ್ತಿದ್ದ ಗಾಯತ್ರಿಗೆ ತಾನು ಪ್ರೀತಿಸುತ್ತಿದ್ದ ಸೂರ್ಯ ಪಾರ್ವತಿಯನ್ನು ಮದುವೆ ಆಗಿರೋದು ತಿಳಿಯುತ್ತದೆ. ಇಷ್ಟು ದಿನ ಮದುವೆಯನ್ನೂ ಆಗದೇ ಅವನಿಗಾಗಿ ಜೀವ ಹಿಡಿದುಕೊಂಡಿದ್ದ ಗಾಯತ್ರೀ ಇದೀಗ ಅವನನ್ನು ತನ್ನ ಬದುಕಿನಿಂದ ಆಚೆ ಕಳಿಸುವ ಪ್ರಯತ್ನದಲ್ಲಿದ್ದಾಳೆ.

ಹಿಂದೆ ಪ್ರೇಮಿಸುತ್ತಿದ್ದವಳಿಗೆ ಬಾಸ್‌

ಪಾರ್ವತಿಯ ದೆಸೆಯಿಂದ ಅವರ ಕಂಪನಿಯಲ್ಲಿ ಗಾಯತ್ರಿಗೆ ಕೆಲಸ ಸಿಕ್ಕಿದೆ. ಆದರೆ ಇಲ್ಲಿ ಅವಳ ಬಾಸ್‌ ಒಂದು ಕಾಲದಲ್ಲಿ ಅವಳನ್ನು ಪ್ರೀತಿಸುತ್ತಿದ್ದ ಸೂರ್ಯ. ಒಂದಲ್ಲ ಒಂದು ದಿನ ಅವಳಿಗಾಗಿ ವಾಪಾಸ್‌ ಬರುವುದಾಗಿ ಹೇಳಿ ಹೋಗಿದ್ದ ಸೂರ್ಯ ಈಗ ಅವಳ ಜೀವದ ಗೆಳತಿ ಪಾರ್ವತಿಯ ಗಂಡನಾಗಿ ಆ ಟೆಕ್ಸ್ಟ್‌ ಟೈಲ್ಸ್‌ ಕಂಪನಿಯ ಸಿಇಓ ಆಗಿ ಅವಳಿಗೆ ಬಾಸ್‌ ಆಗಿ ಎದುರಾಗಿದ್ದಾನೆ.

ಬಹಳ ಎಮೋಶನಲ್‌ ಆಗಿರುವ ಸೂರ್ಯನ ಪಾತ್ರವನ್ನು ನಾಗಾರ್ಜುನ ಬಹಳ ಸೊಗಸಾಗಿ ನಟಿಸುತ್ತಿದ್ದಾರೆ. ಅವರ ನಟನೆಯನ್ನು ಮೆಚ್ಚಿಕೊಂಡು ಬಹಳ ಮಂದಿ ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲಿಗೆ ಇಬ್ಬರು ಗೆಳತಿಯ ಮುದ್ದಿನ ಹುಡುಗನಾಗುತ್ತಿರುವ ನಾಗಾರ್ಜುನ ಈ ಸೀರಿಯಲ್‌ ಮೂಲಕ ಹೊಸ ಭರವಸೆಯೊಂದನ್ನು ಮೂಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+