Film Releases: ಕನ್ನಡದ ಎರಡು ಸಿನಿಮಾ ಸೇರಿ ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾ ಮತ್ತು ವೆಬ್ ಸಿರೀಸ್ ಪಟ್ಟಿ
ಮುಂಬೈ, ಮೇ. 02 : ಈ ವಾರದಲ್ಲಿ ಹಲವು ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳು ಬಿಡುಗಡೆಯಾಗುತ್ತಿದ್ದು, ಸಿನಿಪ್ರೇಕ್ಷಕರಿಗೆ ಮನರಂಜಿಸಲು ಸಿದ್ಧವಾಗಿವೆ. ಈ ವಾರ ತೆರೆಗೆ ಬರುತ್ತಿರುವ ಚಲನಚಿತ್ರಗಳು ಮತ್ತು ಶೋಗಳು ಪ್ರೇಕ್ಷಕರನ್ನು ಸ್ವಾತಂತ್ರ್ಯ ಪೂರ್ವದ ಸಮಯಕ್ಕೆ ತೆಗೆದುಕೊಂಡು ಹೋಗುವ ಭರವಸೆ ನೀಡಿವೆ.
ಹೌದು... ಈ ವಾರದ ದೊಡ್ಡ ಬಿಡುಗಡೆಯಾಗಿ ಸಂಜಯ್ ಲೀಲಾ ಬನ್ಸಾಲಿ ಅವರ 'ಹೀರಾಮಂಡಿ' ಇದೆ. ಇದರ ಜೊತೆಗೆ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರನ್ನು ಮನರಂಜಿಸಲು ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಕನ್ನಡದ ಎರಡು ಚಿತ್ರಗಳು ಚಿತ್ರಮಂದಿರಕ್ಕೆ ಅಪ್ಪಳಿಸಲು ರೆಡಿಯಾಗಿವೆ. ನಟ ಆದಿತ್ಯ ನಟನೆಯ ಕಾಂಗರೂ ಮತ್ತು ಉಸಿರೇ.. ಉಸಿರೇ ಸಿನಿಮಾಗಳು ಚಿತ್ರಪರದೆಯ ಮೇಲೆ ರಾರಾಜಿಸಲಿವೆ.

ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಮತ್ತು ವೆಬ್ ಸಿರೀಸ್
1. ಹೀರಾಮಂಡಿ: ಹೀರಾಮಂಡಿ ವಾರದ ಅತಿ ದೊಡ್ಡ ಬಿಡುಗಡೆಗಳಲ್ಲಿ ಒಂದು. ಹಲವು ದಿನಗಳಿಂದ ಕಾಯುತ್ತಿರುವ ಈ ವೆಬ್ ಸಿರೀಸ್ ಅನ್ನು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಯಾರಿಸಿದ್ದು, ಮೇ 1, 2024 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ವೆಬ್ ಸರಣಿ ಸ್ವಾತಂತ್ರ್ಯಪೂರ್ವ ಲಾಹೋರ್, ಅಂದಿನ ವೇಶ್ಯೆಯರು ಮತ್ತು ನವಾಬ್, ಸ್ವಾತಂತ್ರ್ಯ ಹೋರಾಟಗಳನ್ನು ನಮ್ಮ ಮುಂದಿಡುತ್ತದೆ. ಎಂದಿನಂತೆ ಬನ್ಸಾಲಿ ಅವರ ಕಮಾಲ್ ವೆಬ್ ಸಿರೀಸ್‌ನಲ್ಲಿದೆ.
2. ಉಸಿರೇ... ಉಸಿರೇ...: ಕನ್ನಡ ಸಿನಿಮಾ ಉಸಿರೇ ಉಸಿರೇ ಮೇ 3ರ ಶುಕ್ರವಾರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿ.ಎಂ. ವಿಜಯ್ ಅವರ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ರಾಜೀವ್ ಮತ್ತು ಶ್ರೀಜಿತ್ ಘೋಷ್ ಇದ್ದಾರೆ. ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಬಿದ್ದ ನಂತರ, ಚಿತ್ರದ ನಾಯಕ ನಟ ನಟಿ ಹೊಸ ಜೀವನ ಪ್ರಾರಂಭಿಸಲು ತಮ್ಮ ಕುಟುಂಬದಿಂದ ಓಡಿಹೋಗುತ್ತಾರೆ. ಆದರೆ ಒಂದು ಘೋರ ಘಟನೆ ಅವರಿಬ್ಬರ ಜೀವನವನ್ನೇ ಬದಲಾಯಿಸುತ್ತದೆ... ಮುಂದೇನು ಎನ್ನುವುದು ಚಿತ್ರದಲ್ಲಿ ನೋಡಬೇಕು.
3. ಕಾಂಗರೂ: ಮತ್ತೊಂದು ಕನ್ನಡ ಸಿನಿಮಾ ಕಾಂಗರೂ ಮೇ 3ರ ಶುಕ್ರವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಆದಿತ್ಯ, ರಂಜನಿ ರಾಘವನ್, ಕರಿ ಸುಬ್ಬು ಮತ್ತು ನಾಗೇಂದ್ರ ಅವರನ್ನು ಒಳಗೊಂಡಿರುವ ಕಾಂಗರೂ, ಮಿಸ್ಸಿಂಗ್ ಕೇಸ್ ಒಮದನ್ನು ತನಿಖೆ ನಡೆಸುತ್ತಿರುವ ಹೊಸದಾಗಿ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿ ಪೃಥ್ವಿಯ ಕಥೆಯ ಸುತ್ತ ಸುತ್ತುತ್ತದೆ.

4. ಶಬರಿ: ನಟಿ ವರಲಕ್ಷ್ಮಿ ಶರತ್‌ಕುಮಾರ್ ನಟನೆಯ 'ಶಬರಿ' ಮೇ 3ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನಿಲ್ ಕಲ್ಟ್ಜ್ ನಿರ್ದೇಶನದ ಚಿತ್ರವು ತಾಯಿ ಮತ್ತು ಮಗಳ ಕಥೆಯನ್ನು ಹೊಂದಿದೆ. ವೈಜ್ಞಾನಿಕ ಕಾಲ್ಪನಿಕ ನಾಟಕವು ಎಲ್ಲರ ಗಮನ ಸೆಳೆಯಲಿದ್ದು, ಚಿತ್ರದ ಕೊನೆಯ 10 ನಿಮಿಷಗಳಲ್ಲಿ ಯಾರೂ ನಿರೀಕ್ಷಿಸದ ಟ್ವಿಸ್ಟ್ ಅನ್ನು ನೀಡುತ್ತದೆ. ಮೂಲತಃ ತೆಲುಗಿನಲ್ಲಿ ತಯಾರಾದ ಶಬರಿ ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಲಿದೆ.
5. ಅರಣ್ಮನೈ 4: ಈಗಾಗಲೇ ಅಚ್ಚೋ ಅಚ್ಚೋ ಅಚ್ಚಚ್ಚೋ ಹಾಡಿನ ಮೂಲಕ ಸದ್ದು ಮಾಡಿರುವ ತಮಿಳು ಚಿತ್ರ 'ಅರಣ್ಮನೈ 4' ಒಂದು ಕಾಮಿಡಿ ಹಾರರ್ ಆಗಿದೆ. 2024 ರ ಮೇ 3ರ ಶುಕ್ರವಾರ ಬಿಡುಗಡೆಯಾಗಲಿದೆ. ಈ ಚಲನಚಿತ್ರವು ತನ್ನ ಸಹೋದರಿಯ ಅನುಮಾನಾಸ್ಪದ ಸಾವಿನ ನಂತರ ಭಯಾನಕ ಸತ್ಯವನ್ನು ಹೊರಗೆಡವಲು ಬಂದ ವ್ಯಕ್ತಿಯ ಕಥೆಯ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ರಾಶಿ ಖನ್ನಾ, ತಮನ್ನಾ ಭಾಟಿಯಾ, ಸಂತೋಷ್ ಪ್ರತಾಪ್, ಸಂತಾನಂ ಮತ್ತು ಗರುಂಡ ರಾಮ್ ಇದ್ದಾರೆ.
-
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications