Bigg Boss: ಕಿರಿಕ್ ಕೀರ್ತಿ ಸಮೀಕ್ಷೆಯಲ್ಲಿ ಬಿಗ್ ವಿನ್ನರ್ ಯಾರು ಗೊತ್ತಾ? ಇಲ್ಲಿದೆ ಸ್ಪೋಟಕ ಮಾಹಿತಿ

ಬಿಗ್‌ಬಾಸ್‌ನ ಹಳೆಯ ಸ್ಪರ್ಧಿ ಕಿರಿಕ್ ಕೀರ್ತಿ ಸಮೀಕ್ಷೆಯೊಂದನ್ನು ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿನ್ನರ್ ಯಾರಾಗಬೇಕು ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಮೀಕ್ಷೆಯ ಪ್ರಕಾರ ಯಾರು ವಿನ್ನರ್ ಎನ್ನುವ ಬಗ್ಗೆ ಕಿರಿಕ್ ಕೀರ್ತಿ ಈಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು.. ಕಿರಿಕ್ ಕೀರ್ತಿ ತಮ್ಮ ಫೇಸ್ ಬುಕ್ ಪೇಜ್‌ ಮೂಲಕ ಸಮೀಕ್ಷೆ ಮಾಡಿದ್ದರು. ಈ ಸಮೀಕ್ಷೆಯಲ್ಲಿ ಎಷ್ಟು ಮತಗಳು ಯಾರಿಗೆ ಬಂದಿವೆ ಎನ್ನುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಸಮೀಕ್ಷೆಯಲ್ಲಿ ಯಾರು ವಿನ್ ಆಗಿದ್ದಾರೆ? ಎಲ್ಲಾ ಮಾಹಿತಿ ಇಲ್ಲಿದೆ.

Former Bigg Boss runner-up Kirik Keerthi do survey on bigg boss season 11 winner

ಕಿರಿಕ್ ಕೀರ್ತಿ ಫೋಟೋವೊಂದನ್ನು ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೊದಲು ತ್ರಿವಿಕ್ರಮ್ ನಂತರ ಹನುಮಂತ, ಮೋಕ್ಷಿತಾ ಪೈ, ಉಗ್ರಂ ಮಂಜು ಟಾಪ್ 3 ಸ್ಪರ್ಧಿಗಳಾಗಿದ್ದಾರೆ. ಕಿರಿಕ್ ಕೀರ್ತಿ ತಮ್ಮ ಫೇಸ್‌ ಬುಕ್ ಪೇಜ್‌ನಲ್ಲಿ 'ನಿಮ್ಮ ಪ್ರಕಾರ ಯಾರು ಬಿಗ್‌ಬಾಸ್‌ ಗೆಲ್ಲಬೇಕು' ಎಂದು ಪ್ರಶ್ನೆ ಕೇಳಿದ್ದರು. ಜೊತೆಗೆ ಕೆಲ ಸ್ಫರ್ಧಿಗಳ ಫೋಟೋಗಳನ್ನು ಹಂಚಿಕೊಂಡು ಮತ ಹಾಕುವಂತೆ ಸೂಚನೆ ನೀಡಿದ್ದರು.

ಪ್ರಸ್ತುತ ಈ ಸಮೀಕ್ಷೆಯ ರಿಸಲ್ಟ್ ಅನ್ನು ಕೀರ್ತಿ ಅವರು ಫೇಸ್‌ಬುಕ್‌ ಪೇಸ್‌ನಲ್ಲಿ ಶೇರ್ ಮಾಡಿದ್ದಾರೆ. ಒಟ್ಟು 27,000 ಜನ ವೋಟ್ ಮಾಡಿದ್ದಾರೆ. ಈ ಪೈಕಿ ಹೆಚ್ಚು ಮತಗಳು ತ್ರಿವಿಕ್ರಮ್ ಅವರಿಗೆ ಬಂದಿವೆ. ಅಲ್ಲಿ ಕಿರಿಕ್ ಕೀರ್ತಿ ಅವರು ನಡೆಸಿದ ಸಮೀಕ್ಷೆಯಲ್ಲಿ ತ್ರಿವಿಕ್ರಮ್ ವಿಜೇತರಾಗಲಿದ್ದಾರೆ. ನಂತರ ರನ್ನರ್ ಅಪ್ ಆಗಿ ಹನುಮಂತ ಅವರ ಇದ್ದಾರೆ. ಮೂರನೇ ಸ್ಥಾನದಲ್ಲಿ ಮೋಕ್ಷಿತಾ ಅವರು ಇದ್ದರೆ, ನಾಲ್ಕನೇ ಸ್ಥಾನದಲ್ಲಿ ರಜತ್ ಇದ್ದಾರೆ.

ಇವರಾದ ಬಳಿಕ ಭವ್ಯಾ ಹಾಗೂ ಮಂಜು ಅವರು ಐದು ಹಾಗೂ ಆರನೇ ಸ್ಥಾನದಲ್ಲಿ ಇದ್ದಾರೆ. ಹಾಗಾದರೆ ಕಿರಿಕ್ ಕೀರ್ತಿ ಅವರು ಮಾಡಿದ ಸಮೀಕ್ಷೆಯಂತೇ ರಿಸಲ್ಟ್ ಇರುತ್ತಾ ಅಥವಾ ಬದಲಾಗುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ. ಯಾಕೆಂದರೆ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಎಂದು ತುಂಬಾ ಜನ ಹೇಳಿಕೊಂಡಿದ್ದಾರೆ.

ಟಿವಿ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಈ ಬಾಋಇ ವಿನ್ನರ್ ಹನುಮಂತ ಎಂದು ಹೇಳಲಾಗಿದೆ. ಆದರೂ ಗ್ರ್ಯಾಂಡ್‌ ಫಿನಾಲೆಯಲ್ಲಿ ಫಲಿತಾಂಶ ಬದಲಾಗಬಹುದು. ಇದೆಲ್ಲಾದಕ್ಕೂ ಇಂದಿನ ಗ್ರ್ಯಾಂಡ್ ಫಿನಾಲೆಯಲ್ಲೇ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+