#FirstDayAsSpyInPakistan: ಗೂಢಚಾರಿಯಾಗಿ ಪಾಕಿಸ್ತಾನದಲ್ಲಿ ಮೊದಲ ದಿನ; ಏನಿದು ಹೊಸ ಟ್ರೆಂಡಿಂಗ್?
ಈಗೆಲ್ಲ ಸೋಷಿಯಲ್ ಮೀಡಿಯಾದ್ದೇ ದರ್ಬಾರ್, ದಿನಕ್ಕೊಂದು ಟ್ರೆಂಡ್ ಅಂತೂ ಇದ್ದೇ ಇರುತ್ತೆ. ಹೊಸ ಅಥವಾ ಹಳೆಯ ಹಾಡು, ಡೈಲಾಗ್, ರೀಲ್ ಟ್ರೆಂಡಾಗಿಬಿಡುತ್ತಿವೆ. ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಏನೇ ಟ್ರೆಂಡ್ ಆದರೂ ಬಳಕೆದಾರರು ನಮ್ದೂ ಒಂದು ಇರಲಿ ಅಂತ ಅದನ್ನು ಫಾಲೋ ಮಾಡುವ ಪ್ರವೃತ್ತಿ ಮುಂದುವರಿಸಿದ್ದಾರೆ. ಈಗ ಈ ಸರದಿಯಲ್ಲಿರುವುದು #FirstDayAsSpyInPakistan (ಪಾಕಿಸ್ತಾನದಲ್ಲಿ ಗೂಢಚಾರನಾಗಿ ಮೊದಲ ದಿನ). ಈಗ ಸೋಷಿಯಲ್ ಮೀಡಿಯಾದಲ್ಲೇ ಸದ್ಯ ಇದೇ ಟ್ರೆಂಡಿಂಗ್ನಲ್ಲಿದ್ದು, ರೀಲ್ಸ್, ಮೀಮ್ಗಳು ಹರಿದಾಡುತ್ತಿವೆ. ಇದರ ಹಿನ್ನೆಲೆ ಏನು ಎನ್ನುವ ಕುತೂಹಲಕಾರಿ ವಿಚಾರ ಇಲ್ಲಿ ತಿಳಿಯಿರಿ..
ಇತ್ತೀಚೆಗೆ ತೆರೆಕಂಡ ಬಾಲಿವುಡ್ನ ಗೂಢಚಾರ ಚಿತ್ರ "ಧುರಂಧರ್"ನಿಂದಾಗಿ ಈ ಟ್ರೆಂಡ್ ಹುಟ್ಟಿಕೊಂಡಿತು. ಈ ಚಿತ್ರವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಜಾಲವನ್ನು ನಾಶಮಾಡಲು ಕಾರ್ಯನಿರ್ವಹಿಸುತ್ತಿರುವ ರಹಸ್ಯ ಭಾರತೀಯ ಗೂಢಚಾರಿ ನಟ ರಣವೀರ್ ಸಿಂಗ್ ಅವರ ಹಮ್ಜಾ ಅವರನ್ನು ಅನುಸರಿಸುತ್ತದೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ವಿವಾದಗಳಿಂದ ಸುತ್ತುವರೆದಿರುವ ಈ ಸಿನಿಮಾ ಸದ್ಯ ಭಾರತದಲ್ಲಿ ಒಂದು ತಮಾಷೆಯ ಪ್ರವೃತ್ತಿಗೆ ಕಾರಣವಾಗಿದೆ. ಕಂಟೆಂಟ್ ಕ್ರಿಯೇಟರ್ಗಳು "ಪಾಕಿಸ್ತಾನದಲ್ಲಿ ಗೂಢಚಾರನಾಗಿ ಮೊದಲ ದಿನ" ಎಂಬ ಶೀರ್ಷಿಕೆಯೊಂದಿಗೆ ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಗೂಢಚಾರಿಯಾಗಿ ಹೋಗುವ ಭಾರತೀಯರು ಅಲ್ಲಿ ಸಿಕ್ಕಿಬಿದ್ದಾಗ ಪರಿಸ್ಥಿತಿ ಹೇಗಿರುತ್ತೆ? ಎಂಬರ್ಥದಲ್ಲಿ ತಮಾಷೆಯಾಗಿ ಈ ರೀಲ್ಸ್ ಮಾಡುತ್ತಿದ್ದಾರೆ.

ಕನ್ನಡ ನಟರ ಡೈಲಾಗ್ ಬಳಸಿ ಮೀಮ್
ಭಾರತೀಯರು ಹಾಗೂ ಪಾಕಿಸ್ತಾನದವರ ಆಚರಣೆಗಳು ವಿಭಿನ್ನವಾಗಿದ್ದು, ಒಂದು ವೇಳೆ ಪಾಕಿಸ್ತಾನಕ್ಕೆ ಗೂಢಚಾರಿಯಾಗಿ ಹೋಗಿ ಅಲ್ಲಿಯವರಂತೆಯೇ ನಟಿಸಲು ಪ್ರಯತ್ನಿಸುವುದರ ನಡುವೆ ಬಾಯ್ತಪ್ಪಿ ಭಾರತದ ವಿಚಾರಗಳನ್ನು ಪ್ರದರ್ಶಿಸಿದಾಗ ಆಗುವ ಎಡವಟ್ಟುಗಳು ಹಾಗೂ ಆಗ ಪಾಕಿಸ್ತಾನದವರ ಕೈಯಲ್ಲಿ ನಮ್ ಕಥೆ ಮುಗೀತು ಎಂಬರ್ಥದಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಇನ್ನು ಕನ್ನಡಿಗರು ಒಂದು ಹೆಜ್ಜೆ ಮುಂದೆ ಹೋಗಿ, ಪ್ರಮುಖ ನಟರು ಪಾಕಿಸ್ತಾನಕ್ಕೆ ಹೋಗಿ ಸಿಕ್ಕಿಬಿದ್ದಾಗ ಏನು ಹೇಳ್ತಾರೆ ಎಂದು ಊಹಿಸಿಕೊಂಡು ಅವರ ಡೈಲಾಗ್ಗಳನ್ನೇ ಬಳಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಉದಾಹರಣೆಗೆ ನಟ ಸಾಹಸಸಿಂಹ ವಿಷ್ಣುವರ್ಧನ್ ಪಾಕಿಸ್ತಾನಕ್ಕೆ ಹೋದಾಗ..
ಪಾಕ್: ನಿನ್ ಹೆಸರೇನು?
ವಿಷ್ಣುದಾದಾ: ಅಬ್ದುಲ್ ರೆಹಮಾನ್ ಹಮ್ಝಾ ಅಲಿ ಖಾನ್
ಪಾಕ್: ನಿನ್ ನೋಡಿದ್ರೆ ಯಾಕೋ ಡೌಟ್ ಬರ್ತಿದೆ. ಕೈಯಲ್ಲೇನಿದೆ ತೋರ್ಸು?
ವಿಷ್ಣುದಾದಾ: ಇದು ಬರೀ ಕೈಯಲ್ಲ. ಈ ಕೈ ಕರ್ನಾಟಕದ ಆಸ್ತಿ. ಈ ಐದು ಬೆರಳುಗಳಲ್ಲಿರೋದು, ಐದು ಕೋಟಿ ಕನ್ನಡಿಗರ ಶಕ್ತಿ. ಮುಷ್ಠಿ ಮಾಡಿ ಹೊಡುದ್ರೆ ಆ ವ್ಯಕ್ತಿ, ಎದ್ದು ಬಂದಿದ್ದು ಚರಿತ್ರೆಯಲ್ಲೇ ಇಲ್ಲ ಎನ್ನುವ ಡೈಲಾಗ್ ಬರೆದು ಮೀಮ್ ಹಂಚಿಕೊಳ್ಳುತ್ತಿದ್ದಾರೆ.
Thread 🧵
— Shilpa (@shilpa_cn) December 17, 2025
"My first day as a spy in Pakistan" Karnataka version..😭😂
1. Freebie spy pic.twitter.com/WC8AROxfsH
ಡಾ.ರಾಜ್ಕುಮಾರ್, ನಟ ದರ್ಶನ್ ತೂಗುದೀಪ, ರಾಕಿಂಗ್ ಸ್ಟಾರ್ ಯಶ್, ರಾಜ್ ಬಿ.ಶೆಟ್ಟಿ, ರಿಷಬ್ ಶೆಟ್ಟಿ, ಗೃಹ ಸಚಿವ ಜಿ.ಪರಮೇಶ್ವರ್, ವಾಟಾಳ್ ನಾಗರಾಜ್, ರೆಬಲ್ ಸ್ಟಾರ್ ಅಂಬರೀಷ್, ಜಗ್ಗೇಶ್, ಕುಮಾರಸ್ವಾಮಿ ಸೇರಿದಂತೆ ಹಲವರ ಮೀಮ್ಗಳನ್ನು ಅವರ ಫೇಮಸ್ ಡೈಲಾಗ್ಗಳೊಂದಿಗೆ ಈ ಟ್ರೆಂಡ್ಗೆ ಸೇರಿಸಿದ್ದಾರೆ. ಕನ್ನಡದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ಗಳು ಕೂಡ ಇದಕ್ಕೆ ರೀಲ್ಸ್ ಮಾಡಿದ್ದಾರೆ. ಪಾಕಿಸ್ತಾನದವರ ಕೈಯಲ್ಲಿ ಸಿಕ್ಕಾಕೊಂಡಾಗ ತಮ್ಮ ಫೋಟೋಗೆ ಹಾರ ಹಾಕಿದಂತೆ ಎಡಿಟ್ ಮಾಡುವ ಮೂಲಕ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂ ಫೀಡ್ನಲ್ಲಿ ಸದ್ಯ ಇದೇ ರೀಲ್ಗಳು ತುಂಬಿ ತುಳುಕಾಡುತ್ತಿವೆ.
-
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications