Actor Darshan: "ನಟ ದರ್ಶನ್ ಅವರೇ ಮುಂದಿನ ಸಿಎಂ"
Actor Darshan Thoogudeepa: ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆಯೇ "ಮುಂದಿನ ಸಿಎಂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್," ಅಂತ ಡಿಬಾ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಾದ್ರೆ ಹೀಗೆ ಹೇಳಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇಂದು (ಡಿಸೆಂಬರ್ 11) ರಾಜ್ಯಾದ್ಯಂತ ತೆರೆ ಕಂಡಿದೆ. ಥಿಯೇಟರ್‌ಗಳ ಎದುರು ಸಿನಿಮಾನ ನೋಡಲು ದರ್ಶನ್ ಅಭಿಮಾನಿಗಳ ಸಾಗರ ನೆರೆದು ಹಬ್ಬ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಿನಿಮಾ ವೀಕ್ಷಣೆ ಮಾಡಿ ಹೊರಬಂದವರ ಬಾಯಲ್ಲಂತೂ "ಮುಂದಿನ ಸಿಎಂ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್" ಅವರೇ ಎಂದು ಘೋಷಣೆ ಕೂಗುತ್ತಿದ್ದಾರೆ.

ಡೆವಿಲ್ ಸಿನಿಮಾ ವೀಕ್ಷಣ ಮಾಡಿ ಥಿಯೇಟರ್‌ನಿಂದ ಹೊರಬಂದ ಅಭಿಮಾನಿಗಳು 2028ಕ್ಕೆ ಅಂದರೆ, 'ಮುಂದಿನ ಸಿಎಂ ದರ್ಶನ್' ಎಂದು ಕೂಗಿ ಜೈಕಾರ ಹಾಕಿದ್ದಾರೆ. ಸಿನಿಮಾದಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ದೃಶ್ಯವೊಂದು ಇದೆ. ಅದರಂತೆಯೇ ಈ ದೃಶ್ಯ ವೀಕ್ಷಿಸಿದ ಅಭಿಮಾನಿಗಳು ಥಿಯೇಟರ್ ಹೊರಗಡೆ ಬಂದು ಈ ಘೋಷಣೆ ಕೂಗಿ ಗಮನ ಕುತೂಹಲ ಹುಟ್ಟುಹಾಕಿದ್ದಾರೆ.
ಜೊತೆ ನಟ ದರ್ಶನ್ ಜೈಲಿನಿಂದ ಹೊರಗಡೆ ಬಂದು ರಾಜಕೀಯಕ್ಕೆ ಎಂಟ್ರಿ ಕುಡುವುದಂತೂ ಗ್ಯಾರಂಟಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈಗಾಗಲೇ ನಟ ದರ್ಶನ್ ರಾಜಕೀಯಕ್ಕೆ ಬರುವ ಕೊಡುವ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ದರ್ಶನ್ ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತಾರೆಯೋ ಎಂಬ ಕುತೂಹಲದಲ್ಲಿದ್ದಾರೆ. ಇದೆಲ್ಲದರ ನಡುವೆ ಈ ಘೋಷಣೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ಡೆವಿಲ್ ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬೆಳಗ್ಗೆ 6 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದ್ದು, ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ ಎಂದು ತಿಳಿದುಬಂದಿದೆ. ಡೆವಿಲ್ ಚಿತ್ರಕ್ಕೆ ಪ್ರಕಾಶ್ ವೀರ್ ಆಯಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಯಂತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?: ಮತ್ತೊಂದೆಡೆ ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿಕೆ ನೀಡಿದ ಮೇಲೆಯೇ ಈ ಚರ್ಚೆ ಮತ್ತಷ್ಟು ಜೋರಾಗಿದೆ. ಇದೇ ಇದೀಗ ವಿಪಕ್ಷಗಳ ಬಾಯಿಗೆ ಆಹಾರ ಆದಂತಾಗಿದೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ನನ್ನ ತಂದೆಯೇ ಐದು ವರ್ಷ ಸಿಎಂ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದೀಗ ಇದೇ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಕೆಲ ದಿನಗಳಿಂದ ಈ ಸಿಎಂ ಬದಲಾವಣೆ ವಿಚಾರ ಮರೆಯಾಗಿತ್ತು.
ಇನ್ನೂ ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಯತೀಂದ್ರ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ನೀಡಲಿ ಎಂದು ಅಚ್ಚರಿ ಹೇಳಿಕೆ ನೀಡಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಈ ಹಿಂದೆ ಹೇಳಿದಂತೆ ಹೇಳಿದ್ದಾರೆ.












Click it and Unblock the Notifications