ಜೈಲಿಂದ ಡಿಬಾಸ್ ಎಂಟ್ರಿ ಹೀಗಿರುತ್ತೆ ಅಂದ್ರು ಫ್ಯಾನ್ಸ್! ಸೋಶಿಯಲ್ ಮೀಡಿಯಾ ಶೇಕ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸತತ ನಾಲ್ಕೂವರೆ ತಿಂಗಳು ಜೈಲುವಾಸದಲ್ಲಿದ್ದ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಹಬ್ಬವೇ ಮಾಡ್ತಿದ್ದಾರೆ.
ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಜೈಲಿ ಸೇರಿದ ನಂತರೂ ಅವರ ಕ್ರೇಜ್ ಕಡಿಮೆಯಾಗಿರಲಿಲ್ಲ. ಅಭಿಮಾನಿಗಳು ಅಂದಿನಿಂದ ಇಂದಿನವರೆಗೂ ಬಾಸ್ ಬಾಸ್ ಎಂದು ಜೊತೆಯಲ್ಲೇ ನಿಂತಿದ್ದರು. ಇನ್ನು ಪ್ರತಿದಿನವೂ ಬಾಸ್ ಬೇಗ ಹೊರಗೆ ಬರಲಿ ಎಂದು ಸ್ಟೇಟಸ್ ಹಾಕಿಕೊಳ್ಳುತ್ತಿದ್ದರು.

ಇನ್ನು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದ ಪ್ರತಿ ಬಾರಿಯೂ ಅಭಿಮಾನಿಗಳು ಡಿಬಾಸ್ ಇವತ್ತು ಹೊರಗಡೆ ಬಂದೇ ಬರ್ತಾರೆ ಎಂದು ಹೇಳಿಕೊಳ್ಳುತ್ತಿದ್ದರು. ಇಂದು ಕೊನೆಗೂ ಅವರ ಆಸೆ ಈಡೇರಿದೆ. ದರ್ಶನ್ ಅವರಿಗೆ ಜಾಮೀನು ಮಂಜೂರಾದ ವಿಷಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
The Devil Is Back..For Deepavali 131 Days..Await Comes To an End..#Devil #challengingstardarshan #DBoss pic.twitter.com/QPd3hHKCmO
— D Company(R)Official (@Dcompany171) October 30, 2024
ಇನ್ನು ಕೆಲವರು ದರ್ಶನ್ ಅವರು ಅಭಿನಯಿಸಿದ್ದ ವಿವಿಧ ಸಿನಿಮಾಗಳಲ್ಲಿ ಕೈದಿ ಪಾತ್ರ ಮಾಡಿರುವ ದೃಶ್ಯಗಳನ್ನು ಹಂಚಿಕೊಳ್ಳುತ್ತಾ, ಬಾಸ್ ಈಸ್ ಬ್ಯಾಕ್ ಎಂದು ಪೋಸ್ಟ್ ಹಾಕುತ್ತಿದ್ದಾರೆ. ನವಗ್ರಹ, ಕಾಟೇರ ಹಾಗೂ ಶಾಸ್ತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ದರ್ಶನ್ ಕೈದಿ ಪಾತ್ರ ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ದರ್ಶನ್ ಜೈಲಿನಿಂದ ರಿಲೀಸ್ ಆಗುವ ದೃಶ್ಯಗಳು ಕೂಡ ಇವೆ.
DBoss Is Back 🔥#DBoss #Darshanpic.twitter.com/Cz7NI4UEhs
— 𝐑𝐀𝐆𝐇𝐀𝐕⁴⁵ (@Iamraghav264) October 30, 2024
ಇವುಗಳನ್ನು ಎಡಿಟ್ ಮಾಡಿರುವ ದರ್ಶನ್ ಅಭಿಮಾನಿಗಳು ಡೆವಿಲ್ ಈಸ್ ಬ್ಯಾಕ್...ಎಂದೆಲ್ಲ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ. ಎಕ್ಸ್‌ನಲ್ಲೂ (ಟ್ವಿಟರ್) ಈಗ ಡಿಬಾಸ್, ಡೆವಿಲ್ ಟ್ರೆಂಡಿಂಗ್‌ನಲ್ಲಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಕೊನೆಗೂ ಬಿಡುಗಡೆ ಜಾಮೀನು ಸಿಕ್ಕಿದೆ. ಆರು ವಾರಗಳವರೆಗೆ ದರ್ಶನ್ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ. ಜಾಮೀನು ಮಂಜೂರು ಮಾಡಲು ದರ್ಶನ್ ಅವರ ಆರೋಗ್ಯ ಸ್ಥಿತಿಯೇ ಪ್ರಧಾನ ಕಾರಣ ಎನ್ನಲಾಗಿದೆ. ದರ್ಶನ್ ಆರೋಗ್ಯ ಸ್ಥಿತಿಯ ವರದಿ ಅವಲೋಕಿಸಿ, ಜಾಮೀನು ಮಂಜೂರು ಮಾಡಿದೆ.

ಅಲ್ಲದೆ ದರ್ಶನ್ ಚಿಕಿತ್ಸೆ ಪಡೆಯುವ ವಿವರಗಳನ್ನು ಇನ್ನೊಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಹೇಳಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಅವರು ಇತ್ತೀಚೆಗೆ ಬೆನ್ನುನೋವಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಇದಕ್ಕೆ ತುರ್ತಾಗಿ ಆಪರೇಷನ್ ಅಗತ್ಯವಿದೆ ಎಂದೇ ದರ್ಶನ್ ಪರ ವಕೀಲರು ಕೋರ್ಟ್‌ನಲ್ಲಿ ಜಾಮೀನು ಕೋರಿದ್ದರು.
Finally Navagraha Team Completed 💥💥
— Analytic Board (@AnalyticB0ard) October 30, 2024
Darshan is Back 💥
Nan avatte elidde avr barde irodke Sattilla Bande Bartare antha 🙏🙏#Darshan #DBoss pic.twitter.com/tB593PXCzj
ದರ್ಶನ್‌ಗೆ ಬೆನ್ನುನೋವಿನ ಸಮಸ್ಯೆ ತೀವ್ರವಾಗಿದ್ದು, ಅವರು ಇಷ್ಟಪಡುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ಹೈಕೋರ್ಟ್, ಆರು ವಾರಗಳ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಸುಮಾರು ನಾಲ್ಕು ತಿಂಗಳ ಬಳಿಕ ದರ್ಶನ್ ಅವರಿಗೆ ಜೈಲುವಾಸದಿಂದ ಮುಕ್ತಿ ಸಿಕ್ಕಿದೆ.
ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರಿಗೆ ಈ ಸುದ್ದಿ ಇಷ್ಟೊತ್ತಿಗೆ ತಲುಪಿರುವ ಸಾಧ್ಯತೆ ಇದೆ. ಕೋರ್ಟ್ ಆದೇಶ ಕೈಗೆ ಸಿಕ್ಕ ತಕ್ಷಣವೇ ದರ್ಶನ್ ಅವರನ್ನು ಜೈಲಿನಿಂದ ಹೊರಗೆ ಕಳಿಸುವುದಾಗಿ ಬಳ್ಳಾರಿ ಜೈಲಾಧಿಕಾರಿಗಳು ಸಹ ಹೇಳಿದ್ದಾರೆ. ದರ್ಶನ್ ಹೊರಬರುತ್ತಿದ್ದಂತೆ ದೊಡ್ಡ ಹಬ್ಬ ಮಾಡಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.












Click it and Unblock the Notifications