ಕೈಯಲ್ಲಿ ₹2,000 ಕೋಟಿ ಆಸ್ತಿ ಇದ್ರೂ ಸಿನಿಮಾದಲ್ಲಿ ಚಾನ್ಸ್‌ ಕೇಳಿದ ಖ್ಯಾತ ನಟಿ

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ್ದ ಖ್ಯಾತ ನಟಿಯೊಬ್ಬರು ಹಲವು ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಲು ಮುಂದಾಗಿದ್ದಾರೆ. ಅಚ್ಚರಿ ಎಂದರೆ ಇವರು ಸಿನಿಮಾಗಳಿಗೆ ಗುಡ್‌ಬೈ ಹೇಳಿ ದಶಕವೇ ಕಳೆದಿತ್ತು. ಬರೋಬ್ಬರಿ 2,000 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದರೂ ಇದೀಗ ಸಿನಿಮಾಗಳಲ್ಲಿ ಮತ್ತೆ ನಟಿಸಲು ಆಸಕ್ತಿ ತೋರಿದ್ದಾರೆ. ಈ ಸಂಬಂಧ ಈಗಾಗಲೇ ಖ್ಯಾತ ನಿರ್ದೇಶಕರ ಜೊತೆ ಮಾತುಕತೆಯೂ ಆಗಿದ್ದು, ಇದಕ್ಕೆ ಗ್ರೀನ್‌ ಸಿಗ್ನಲ್‌ ಕೂಡ ಸಿಕ್ಕಿದೆಯಂತೆ. ಇಷ್ಟಕ್ಕೂ ಆ ನಟಿ ಯಾರು ಗೊತ್ತಾ?

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ರಂಭಾ ಅವರು ಇದೀಗ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ನಟ ರವಿಚಂದ್ರನ್‌ ನಟನೆಯ ಸಾಹುಕಾರ ಸಿನಿಮಾದಲ್ಲಿ "ತುಂಟ..ತುಂಟ..ತುಂಟ." ಹಾಡಿಗೆ ಸೊಂಟ ಬಳುಕಿಸುವ ಮೂಲಕ ಇವರು ಸಖತ್‌ ಫೇಮಸ್‌ ಆಗಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ರಂಭಾ ಒಂದು ಕಾಲಕ್ಕೆ ಹವಾ ಇಟ್ಟಿದ್ದರು. ಟಾಪ್‌ ನಟಿಯಾಗಿಯೂ ರಂಭಾ ಅವರು ಮಿಂಚಿದ್ದರು. ಆದರೆ ಮದುವೆಯಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದ ಅವರು ವಿದೇಶದಲ್ಲಿ ಸೆಟಲ್‌ ಆಗಿದ್ದರು. ಇದೀಗ ಅವರು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

Famous Actress Rambha Set To Make A Comeback To Cinema After Years

ಇಂದಿಗೂ ಟ್ರೆಂಡಿಂಗ್‌ ಆದ "ಅಳಗಿಯ ಲೈಲಾ" ಹಾಡಿನ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದರು. "ಪೆನ್ ಸಿಂಗಂ" ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ರಂಭಾ ಅವರು 2010ರಲ್ಲಿ ಕೆನಡಾದ ಉದ್ಯಮಿ ಇಂದ್ರಕುಮಾರ್ ಪದ್ಮನಾಭನ್ ಅವರನ್ನು ವಿವಾಹವಾಗಿ ವಿದೇಶದಲ್ಲೇ ನೆಲೆಸಿದ್ದರು. ರಂಭಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರ ಕೂಡ ಇದ್ದು, ರಂಭಾ ಅವರು ಸದ್ಯ ಬರೋಬ್ಬರಿ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡತಿ ಎನ್ನಲಾಗಿದೆ. ಕೂತು ತಿನ್ನುವಷ್ಟು ಆಸ್ತಿಯಿದ್ದರೂ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ರಂಭಾ ಪತಿ ಕೂಡ ತನ್ನ ಪತ್ನಿಗೆ ಸಿನಿಮಾದಲ್ಲಿ ಒಂದು ಚಾನ್ಸ್‌ ಕೊಡಿ ಎಂದು ಖ್ಯಾತ ನಿರ್ದೇಶಕರಿಗೆ ಕೇಳಿಕೊಂಡಿದ್ದಾರಂತೆ.

ಸಿನಿಮಾಗಳಿಂದ ದೂರ ಉಳಿದಿದ್ದ ಅವರು ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. "ಜೋಡಿ ನಂ.1" ಹಾಗೂ "ಕಿಂಗ್ ಆಫ್ ಜೂನಿಯರ್" ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ರಂಭಾ ತೀರ್ಪುಗಾರರಾಗಿದ್ದರು. ಆದರೆ ಅವರು ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರು. ಅವರ ಅಭಿಮಾನಿಗಳು ಕೂಡ ರಂಭಾ ಅವರನ್ನು ಮತ್ತೆ ತೆರೆ ಮೇಲೆ ನೋಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಇದೀಗ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಅಭಿಮಾನಿಗಳ ಆಸೆ ಈಡೇರಲಿದೆ ಎಂದು ಹೇಳಲಾಗುತ್ತಿದೆ.

Famous Actress Rambha Set To Make A Comeback To Cinema After Years

ರಂಭಾ ಅವರು ಸಿನಿಮಾಗೆ ಮರಳುವ ಬಗ್ಗೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಕನ್ನಡದಲ್ಲಿ ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ನಿರ್ಮಿಸಿರುವ ತಮಿಳಿನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕಲೈಪುಲಿ ಎಸ್.ಥಾನು ಅವರು ರಂಭಾ ಅವರ ಕಂಬ್ಯಾಕ್‌ ಸುಳಿವು ನೀಡಿದ್ದಾರೆ. "ರಂಭಾ ಅವರು 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪ್ರಮುಖ ಉದ್ಯಮಿಯಾಗಿರುವ ಅವರ ಪತಿಯು ರಂಭಾಗೆ ಸಿನಿಮಾದಲ್ಲಿ ಒಂದು ಅವಕಾಶ ನೀಡುವಂತೆ ನನ್ನನ್ನು ಸಂಪರ್ಕಿಸಿದ್ದಾರೆ. ಒಳ್ಳೆಯ ಪ್ರಾಜೆಕ್ಟ್‌ ಬಂದಾಗ ನಾನು ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ರಂಭಾ ಪತಿ ಇಂದ್ರಕುಮಾರ್ ಪದ್ಮನಾಭನ್ ಅವರು ಹಲವಾರು ವ್ಯವಹಾರಗಳನ್ನು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+