ಕನ್ನಡಿಗ ಯಶ್ ಹವಾ ಜೋರು, ಉತ್ತರ ಭಾರತದಲ್ಲೂ ನಮ್ದೇ ಸೌಂಡ್!

ಯಶ್ ತಮ್ಮ 'ಕೆಜಿಎಫ್' ಸಿನಿಮಾ ಸರಣಿ ಮೂಲಕ ಕ್ರಿಯೇಟ್ ಮಾಡಿರುವ ಸೌಂಡ್ ಜಗತ್ತಿನಲ್ಲಿ ಮೂಲೆ ಮೂಲೆಗೂ ಹಬ್ಬಿದೆ. ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಸೀಮಿತ ಅಂತಾ ಡೈಲಾಗ್ ಹೊಡೆಯುತ್ತಿದ್ದ ಖಾಲಿ ಡಬ್ಬಾಗಳಿಗೆ ಪಾಠ ಹೇಳಿ ಆಗಿದೆ. ಇದಾದ ನಂತರ ಮತ್ತೆ ಯಶ್‌ರ ಸಿನಿಮಾ ಬದುಕನ್ನ ಕೆಲವರು ಟಾರ್ಗೆಟ್ ಮಾಡಿದ್ದರು. ಆದರೆ ಎಲ್ಲದಕ್ಕೂ ಉತ್ತರ ನೀಡಿದ ರಾಕಿಭಾಯ್, ನಿನ್ನೆ 19ನೇ ಸಿನಿಮಾ ಟೈಟಲ್‌ನ ಅನೌನ್ಸ್ ಮಾಡಿದ್ದು ಫಸ್ಟ್ ಲುಕ್ ಉತ್ತರ ಭಾರತದಲ್ಲಿ ಹವಾ ಎಬ್ಬಿಸಿದೆ.

ಉತ್ತರ ಭಾರತದ ನೆಲದಲ್ಲಿ ಕನ್ನಡ ಸಿನಿಮಾ ಓಡುವುದು ಬಿಡಿ, ನಮ್ಮ ಸಿನಿಮಾಗಳ ಬಗ್ಗೆ ಮಾತನಾಡಲು ಕೂಡ ಒಮ್ಮೆ ಯೋಚಿಸುವ ಸ್ಥಿತಿ ಇತ್ತು. ವರನಟ ಡಾ.ರಾಜ್‌ಕುಮಾರ್ & ವಿಷ್ಣುವರ್ಧನ್, ಅಂಬರೀಶ್ ಅವರಂತಹ ದಿಗ್ಗಜ ನಟರು ಹಾಗೂ ಪುಟ್ಟಣ್ಣ ಕಣಗಾಲ್ & ಶಂಕರ್ ನಾಗ್ ಸೇರಿದಂತೆ ದೊಡ್ಡ ದೊಡ್ಡ ಲೆಜೆಂಡ್ ನಿರ್ದೇಶಕರ ತವರು ನಮ್ಮ ಭೂಮಿ. ಆದರೂ ಎಲ್ಲೋ ಒಂದು ಕಡೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೀಮಿತ ಮಾರುಕಟ್ಟೆ ಇದೆ ಅನ್ನೋ ಮಾತು ಕೇಳಿಬರುತ್ತಿತ್ತು. ಆದರೆ ನಟ ಯಶ್ & ಪ್ರಶಾಂತ್ ನೀಲ್ ಜೋಡಿ ಈ ಮಾತುಗಳನ್ನೆಲ್ಲ ಸುಳ್ಳು ಮಾಡಿಬಿಟ್ಟರು.

Explore Yash Fans Celebration For Toxic Movie First Look

ಹಿಂದಿ ರಾಜ್ಯದಲ್ಲೂ ಕನ್ನಡಿಗನ ಹವಾ!

ನಿನ್ನೆ ಯಶ್ ತಮ್ಮ 19ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ತಮ್ಮ 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂಬ ಹೆಸರನ್ನ ಸೆಲೆಕ್ಟ್ ಮಾಡಿದ್ದಾರೆ. ಹೀಗೆ 'ಟಾಕ್ಸಿಕ್' ಸಿನಿಮಾಗೆ ಸಂಬಂಧಿಸಿದ ಫಸ್ಟ್ ಲುಕ್ ಟೀಸರ್ ನೋಡಿದ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗೇ ಉತ್ತರ ಭಾರತದ ವಿವಿಧ ಪ್ರದೇಶದಲ್ಲಿ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಫಸ್ಟ್ ಲುಕ್ ಲಾಂಚ್ ಹಿನ್ನೆಲೆ ಫುಲ್ ಸೆಲೆಬ್ರೇಷನ್ ನಡೆದಿದೆ. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಾಕಿಭಾಯ್ ಹೊಸ ಅವತಾರಕ್ಕೂ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕರ್ನಾಟಕ ರಾಜ್ಯದಲ್ಲೂ ಭರ್ಜರಿ ಸೆಲೆಬ್ರೇಷನ್

ದಕ್ಷಿಣ ಭಾರತದ ಸಿನಿಮಾಗಳು ಅಂದ್ರೆ ದೊಡ್ಡ ಹವಾ ಇದೆ ಈಗ ಕನ್ನಡ ಸಿನಿಮಾ ಅಂದ್ರೆ ಮತ್ತೊಂದು ರೇಂಜ್ ಹವಾ ಕ್ರಿಯೇಟ್ ಆಗಿದೆ. ಕನ್ನಡ ನಾಡಿನಲ್ಲಿ ಬೆಳೆದು ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲು ಸಜ್ಜಾಗಿರುವ, ಯಶ್ ಅವರಿಗು ಭರ್ಜರಿ ಬೆಂಬಲ ಸಿಕ್ಕಿದೆ. ಅದರಲ್ಲೂ ಕನ್ನಡ ನಾಡಿನ ಹೈಕ್ಳು, ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್'ಗೆ ಫಿದಾ ಆಗಿದ್ದಾರೆ. ಹಳ್ಳಿಯಿಂದ ಹಿಡಿದು ದಿಲ್ಲಿ ತನಕ 'ಟಾಕ್ಸಿಕ್' ಸಿನಿಮಾದ ಸಂಭ್ರಮಾಚರಣೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಇದು ಫುಲ್ ವೈರಲ್ ಆಗ್ತಿದೆ.

Explore Yash Fans Celebration For Toxic Movie First Look

ನೋಡಿದವರಿಗೆ ರೋಮಾಂಚನ!

'ಟಾಕ್ಸಿಕ್' ಫಸ್ಟ್ ಲುಕ್‌ ನೋಡುತ್ತಿದ್ದರೆ ದೊಡ್ಡದಾಗಿ ಪ್ಲಾನ್ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಯಶ್ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು, ಕನ್ನಡಿಗರಿಗೂ ಖುಷಿ ಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳ ಸಹಿತ, ಭಾರತದ ಸಿನಿಮಾ ಫ್ಯಾನ್ಸ್ 'ಟಾಕ್ಸಿಕ್' ಫಸ್ಟ್‌ಲುಕ್‌ಗೆ ಫಿದಾ ಆಗಿದ್ದಾರೆ.

ಒಟ್ನಲ್ಲಿ ಕನ್ನಡ ನಾಡಿನಿಂದ ಮತ್ತೊಂದು ಭರ್ಜರಿ ಹಾಗೂ ಸೂಪರ್ ಹಿಟ್ ಸಿನಿಮಾ ಈಗ ಸಿದ್ಧವಾಗುತ್ತಿದೆ. ಹಾಗೇ ಜಗತ್ತಿನ ಮೂಲೆ ಮೂಲೆಯಲ್ಲಿ ಅಬ್ಬರಿಸುವುದು ಬಹುತೇಕ ಪಕ್ಕಾ ಆಗಿದೆ. ನಟ ಯಶ್ ತಾವು ಅಂದುಕೊಂಡ ಗುರಿ ಸಾಧಿಸಲು ಕೌಂಟ್‌ಡೌನ್ ಶುರುವಾಗಿದ್ದು ಅವರ ಅಭಿಮಾನಿಗಳಿಗೆ ಡಿಸೆಂಬರ್ ಸಮಯದಲ್ಲಿ ಭರ್ಜರಿ ಗಿಫ್ಟ್ ಸಿಕ್ಕಿದೆ. ಅದೆಲ್ಲಾ ಏನೇ ಇರಲಿ, ಒಮ್ಮೆ ರಾಕಿಭಾಯ್‌ಗೆ ಆಲ್ ದಿ ಬೆಸ್ಟ್ ಹೇಳಿಬಿಡೋಣ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+