Bigg Boss: ಬಿಗ್ ಬಾಸ್‌ ಮನೇಲಿ ಯಾರ ಗಾಂಚಲಿನೂ ನಡೆಯೋಲ್ಲ: ಮೊದಲ ಬಾರಿ ಕಿಚ್ಚ ಸುದೀಪ್ ಖಡಕ್‌ ವಾರ್ನ್ ಮಾಡಿದ್ಯಾರಿಗೆ?

Bigg Boss: ಬಿಗ್‌ ಬಾಸ್‌ ಕನ್ನಡದಲ್ಲಿ ವಾರದ ಜೊತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳ ತಪ್ಪುಗಳನ್ನು ತಿದ್ದು ಕೆಲಸವನ್ನು ಮಾಡುತ್ತಾರೆ. ಕ್ಲಾಸ್‌ ತೆಗದುಕೊಳ್ಳುವ ಮೂಲಕ ಒಬ್ಬೊಬ್ಬರ ತಪ್ಪುಗಳನ್ನೇ ಬಿಡಿಸಿ ಹೇಳುವ ಮೂಲಕ ಅವರನ್ನು ಸರಿದಾರಿಗೆ ತರಲು ಪ್ರಯತ್ನಸುತ್ತಾರೆ. ಇನ್ನು ನಿನ್ನೆ (ಡಿಸೆಂಬರ್ 11) ನಡೆದ ಎಪಿಸೋಡ್‌ನಲ್ಲಿ ಮೊದಲ ಬಾರಿ ಹನುಮಂತಗೆ ವಾರ್ನ್‌ ನೀಡಿದ ಘಟನೆ ನಡೆಯಿತು.

ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮನೆಯ ಹಲವು ಸದಸ್ಯರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡರು. ಅದರಲ್ಲೂ ಹನುಮಂತುಗೆ ಕೆಲವು ಎಚ್ಚರಿಕೆ ಸಂದೇಶಗಳನ್ನು ನೀಡಿದರು. ಎಷ್ಟೇ ವೋಟ್ ಬಿದ್ದಿದ್ದರೂ ಸಹ ನಿಮ್ಮನ್ನ ಹೊರಗೆ ಕಳುಹಿಸುವ ಜವಾಬ್ದಾರಿ ನನ್ನದು ಎಂದು ಹನುಮಂತುಗೆ ಸುದೀಪ್ ವಾರ್ನ್‌ ಮಾಡಿದರು.ಇದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಸುದೀಪ್‌ ಅವರು ಹೀಗೆ ಹೇಳಲು ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.

Don t show Arrogance in Bigg boss house Kichcha Sudeep warns Kuri Gayi Hanumantha for first time

ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸಯತ್ತಿದೆ. ಪ್ರೇಕ್ಷಕರು ಶನಿವಾರ ಯಾವಾಗ ಬರುತ್ತದೆ ಎಂದು ಕಾತರದಿಂದ ಕಾಯುತ್ತಿರುತ್ತಾರೆ. ಸುದೀಪ್‌ ಅವರ ಮಾತುಗಳಿಗಾಗಿಯೇ ಕಾಯುತ್ತಿರುತ್ತಾರೆ. ಇನ್ನು ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌ ಅವರು ಮೊಟ್ಟ ಮೊದಲ ಬಾರಿಗೆ ಹನುಮಂತುಗೆ ವಾರ್ನ್‌ ಮಾಡಿದ್ದು, ಇದು ಎಲ್ಲರನ್ನೂ ಕುತೂಹಲ ಹುಟ್ಟುಹಾಕಿದೆ.

ಹೌದು.. ಬಿಗ್ ಬಾಸ್ ಮನೆಯಲ್ಲಿ ಸಹ ಹನುಮಂತು ಅವರನ್ನು ಹೆಚ್ಚು ಸುದೀಪ್ ಹೊಗಳುತ್ತಲೇ ಬಂದಿದ್ದರು. ಇನ್ನು ಅವರ ಮಾತಿಗೆ ಮೆಚ್ಚುಗೆಯನ್ನು ಸಹ ಕೊಡುತ್ತಾ ಬಂದಿದ್ದರು. ಆದರೆ, ಡಿಸೆಂಬರ್‌ 21ರ ಶನಿವಾರ ಎಪಿಸೋಡ್‌ನಲ್ಲಿ ಮಾತ್ರ ಹನುಮಂತುಗೆ ಮೊದಲ ಬಾರಿ ಖಡಕ್‌ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಹನುಮಂತು ತುಟಿಕ್‌ ಪಿಟಿಕ್‌ ಅನ್ನದೆ, ಸುಮ್ಮನಾಗಿಬಿಟ್ಟರು.

ಬಿಗ್ ಬಾಸ್ ಪ್ರತೀ ವಾರವೂ ಕಷ್ಟ ಪಟ್ಟು ಟಾಸ್ಕ್‌ಗಳನ್ನು ರಚನೆ ಮಾಡಿರುತ್ತಾರೆ. ಇದನ್ನು ಸ್ಪರ್ಧಿಗಳು ಸರಿಯಾಗಿ ಉಪಯೋಗಿಸಿಕೊಂಡು ಆಡಬೇಕು. ಆದರೆ, ಅವರು ಮಾಡುವ ಎಡವಟ್ಟಿನಿಂದ ಕೆಲವೊಮ್ಮೆ ಟಾಸ್ಕ್ ರದ್ದಾದ ಉದಾಹರಣೆಗಳಿವೆ. ಈ ವಾರವೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಫಲಿತಾಂಶ ಘೋಷಣೆ ಮಾಡಲು ಸ್ಪರ್ಧಿಗಳು ಒಪ್ಪದ ಕಾರಣ ಟಾಸ್ಕ್ ರದ್ದಾಗಿದ್ದು, ಇದು ಸುದೀಪ್ ಕೋಪಕ್ಕೆ ಕಾರಣವಾಗಿದೆ.

"ಸರಿಯಾಗಿ ಟಾಸ್ಕ್ ಆಡಿ. ಕೆಲವೊಮ್ಮೆ ಉಸ್ತುವಾರಿಗಳಾಗಿ ನೀವು ನಡೆದುಕೊಳ್ಳುವ ರೀತಿ ಸರಿಯಾಗಿರುವುದಿಲ್ಲ. ಅದನ್ನು ಮೊಸಲು ಸರಿ ಮಾಡಿಕೊಳ್ಳಿ. ಚೈತ್ರಾ ಅವರು ನಡೆಸಿಕೊಟ್ಟ ಉಸ್ತುವಾರಿ ನನಗೆ ಹೇಸಿಗೆ ಅನಿಸಿತು. ಮಾತಾನಾಡಿದರೆ ಫೌಲ್ ಅನ್ನುತ್ತಾರೆ. ನಿಮ್ಮದೇ ನಿಯಮ ಮಾಡಿಕೊಂಡಿದ್ದೀರ," ಎಂದು ಹೇಳುವ ಮೂಲಕ ಗರಂ ಆದರು.

ಬಳಿಕ ಹನುಮಂತ ಮಾತು ಎತ್ತಿದರೆ, ಟಾಸ್ಕ್ ರದ್ದಾದರೂ ಪರವಾಗಿಲ್ಲ ಎಂದು ಹೇಳುತ್ತಿದ್ದರು. ಇದಕ್ಕೆ ಸುದೀಪ್‌ ಕೆಂಡ ಕಾರಿದ್ದಾರೆ. ಹನುಮಂತು ಅವರೇ ನಿಮ್ಮ ಬಾಯಿಂದ ಈ ಟಾಸ್ಕ್ ರದ್ದಾದರೂ ತೊಂದರೆಯಿಲ್ಲ ಎಂಬ ಮಾತು ಇನ್ನೊಂದು ಬಾರಿ ಬಂದರೆ ಎಷ್ಟೇ ವೋಟ್ ಗಳಿಸಿದರೂ ಕೂಡ ನಿಮ್ಮನ್ನು ಹೊರಗೆ ಕಳಿಸುವ ಜವಾಬ್ದಾರಿ ನನ್ನದಾಗಿರುತ್ತದೆ. ಈ ರೀತಿ ಗಾಂಚಲಿ ಮಾತುಗಳು ಯಾರಿಂದಲೂ ಬೇಡಮ್ಮ. ಇದು ಯಾರಪ್ಪನ ಆಸ್ತೀನು ಅಲ್ಲಮ್ಮ. ರದ್ದಾಗೇಬೇಕೋ ಅಥವಾ ಬೇಡವೋ ಎಂಬುದನ್ನು ಬಿಗ್ ಬಾಸ್ ತೀರ್ಮಾಣ ಮಾಡುತ್ತಾರೆ ಎಂದು ಹೇಳುವ ಮೂಲಕ ಖಡಕ್‌ ವಾರ್ನ್‌ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+