Bigg Boss: ಬಿಗ್‌ಬಾಸ್ ಮುಂದಿನ ಸೀಸನ್ ಶುರುವಾಗೋದು ಯಾವಾಗ? ಈ ಬಾರಿಯ ನಿರೂಪಕರು ಇವರೇ ಅಂತೆ...
ಕಿರುತೆರೆ ಪ್ರೇಕ್ಷಕರನ್ನು ತುಂಬಾ ಮೆಚ್ಚಿಸಿದ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಬರೋಬ್ಬರಿ 11 ವರ್ಷಗಳಿಂದ ಕನ್ನಡ ಬಿಗ್ ಬಾಸ್ ನಿರೂಪಿಸುತ್ತಿರುವ ಕಿಚ್ಚ ಸುದೀಪ್, 11ನೇ ಆವೃತ್ತಿಯೊಂದಿಗೆ ವಿದಾಯ ಹೇಳಿದ್ದಾರೆ. ಚಿತ್ರರಂಗದತ್ತ ಗಮನ ಹರಿಸಲು ಮತ್ತು ಹೊಸ ಅವಕಾಶಗಳಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿರುವುದು ಮಾತ್ರ ನಿಜ. ಇತ್ತ ಸುದೀಪ್‌ರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಅಭಿಮಾನಿಗಳು ನೋವಿನಲ್ಲೂ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸುಮಾರು 11 ವರ್ಷಗಳಿಂದ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಆದರೆ, ನಾನಾ ಕಾರಣಗಳಿಂದ ಸುದೀಪ್ ರಿಯಾಲಿಟಿ ಶೋನಿಂದ ಹೊರ ಬರಲು ನಿರ್ಧರಿಸಿದ್ದಾರೆ. ಕನ್ನಡ ಬಿಗ್ ಬಾಸ್ 12 ನೇ ಆವೃತ್ತಿಯ ಹೊಸ ನಿರೂಪಕರ ಹುಡುಕಾಟ ನಡೆಯುತ್ತಿದ್ದು, ಇದರ ನಡುವೆ ತೆಲುಗು ಬಿಗ್ ಬಾಸ್ ಯಾವಾಗ ಶುರು? ಹಾಗೂ ಈ ಬಾರಿಯ ನಿರೂಪಕರು ಯಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ದೂರದರ್ಶನದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿರುವ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ತೆಲುಗು ಬಿಗ್ ಬಾಸ್ ಈಗಾಗಲೇ 8 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಇದೀಗ ಮುಂದಿನ ಸೀಸನ್‌ಗೆ ಸಿದ್ಧವಾಗುತ್ತಿದೆ. ಈಗಾಗಲೇ ತೆಲುಗು ಪ್ರೇಕ್ಷಕರು ಮತ್ತು ಬಿಗ್ ಬಾಸ್ ಪ್ರಿಯರು ಈಗ ಬಿಗ್ ಬಾಸ್ ತೆಲುಗು ಸೀಸನ್ 9 ಗಾಗಿ ಕಾಯುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸ್ವಲ್ಪ ಮುಂಚಿತವಾಗಿ ಪ್ರಾರಂಭವಾಗಲಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ತೆಲುಗು ಬಿಗ್ ಬಾಸ್ ಕುರಿತು ಒಂದು ಅಪ್‌ಡೇಟ್ ಹೊರಬಿದ್ದಿದೆ.
ಹೆಮ್ಮೆಯ ವಿಷಯವೆಂದರೇ ಇದು ಮೊದಲೇ ಕನ್ನಡದಲ್ಲಿ ಯಶಸ್ಸು ಕಂಡಿತ್ತು. ಆದರೆ, ತೆಲುಗಿನಲ್ಲಿ ಇದುವರೆಗೆ ಬಂದಿರುವ 8 ಸೀಸನ್‌ಗಳಲ್ಲಿ ಎರಡು ಮಾತ್ರ ವಿಫಲವಾಗಿವೆ, ಹೀಗಾಗಿ ತೆಲುಗು ಬಿಗ್ ಬಾಸ್ ತಂಡವು ಮುಂದಿನ ಸೀಸನ್ ಅನ್ನು ಇನ್ನಷ್ಟು ಉತ್ತಮವಾಗಿ ನಡೆಸಲು ಪ್ಲಾನ್ ಹಾಕಿಕೊಂಡಿವೆ. ಬಿಗ್ ಬಾಸ್ ತೆಲುಗು ಸೀಸನ್‌ಗಳ ಮೊದಲ ಸೀಸನ್ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ನಂತರ ಆರು ಹಾಗೂ ಏಳನೇ ಸೀಸನ್‌ಗಳು ಹೆಚ್ಚು ಮನರಂಜನೆ ನೀಡಲು ಸಾಧ್ಯವಾಗಲಿಲ್ಲ. ಆದರೆ, 9 ಸೀಸನ್ ಅನ್ನು ವಿಭಿನ್ನವಾಗಿ ಮಾಡುವ ನಿಟ್ಟಿನಲ್ಲಿ ಪ್ಲಾನ್ ನಡೆಯುತ್ತಿದೆ.
ಈ ಬಾರಿ ಬಿಗ್ ಬಾಸ್ ತೆಲುಗು ಸೀಸನ್ 9 ಸ್ವಲ್ಪ ಮೊದಲೇ ಆರಂಭವಾಗಲಿದೆ. ಈ ತಿಂಗಳು ಅಂದರೆ ಜೂನ್‌ನಲ್ಲಿ ಆರಂಭವಾಗುವ ಸಾಧ್ಯತೆ ಇಲ್ಲ. ಹಾಗಾದರೆ, ಈ ಕಾರ್ಯಕ್ರಮ ಆಗಸ್ಟ್‌ನಲ್ಲಿ ಆರಂಭವಾಗುತ್ತದೆಯೇ? ಅಥವಾ ಎಂದಿನಂತೆ ಸೆಪ್ಟೆಂಬರ್‌ನಲ್ಲಿ ಆರಂಭವಾಗುತ್ತದೆಯೇ? ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಮೂಲಗಳ ಪ್ರಕಾರ ಬಿಗ್ ಬಾಸ್ ತೆಲುಗು ಸೀಸನ್ 9 ಆಗಸ್ಟ್‌ನಲ್ಲಿಯೇ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರು ಯಾರು?
ಬಿಗ್ ಬಾಸ್ ಮನೆಯನ್ನು ನಡೆಸಲು, ನಿರೂಪಕರಿಗೆ ಸಾಕಷ್ಟು ತಾಳ್ಮೆ ಮತ್ತು ಮನೆಯಲ್ಲಿರುವ ಸೆಲೆಬ್ರಿಟಿಗಳ ಮೇಲೆ ಹಿಡಿತ ಇರಬೇಕು. ಮೊದಲ ಸೀಸನ್ ಅನ್ನು NTR ನಿರೂಪಣೆ ಮಾಡಿದರೆ, ಎರಡನೇ ಸೀಸನ್ ಅನ್ನು ನ್ಯಾಚುರಲ್ ಸ್ಟಾರ್ ನಾನಿ ನಿರೂಪಣೆ ಮಾಡಿದರು. ಮೂರನೇ ಸೀಸನ್ ನಿಂದ ಎಂಟನೇ ಸೀಸನ್ ವರೆಗೆ ಕಿಂಗ್ ನಾಗಾರ್ಜುನ ಬಿಗ್ ಬಾಸ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡಿದ್ದರು. ಆದರೆ, ಇದೀಗ ಈ ಸೀಸನ್‌ನ ನಿರೂಪಣೆಯನ್ನ ವಿಜಯ್ ದೇವರಕೊಂಡ ಮತ್ತು ಬಾಲಕೃಷ್ಣ ಅವರ ಹೆಸರುಗಳು ವೈರಲ್ ಆಗಿವೆ. ಆದರೆ ಎಂದಿನಂತೆ, ಈ ಸೀಸನ್‌ನಲ್ಲೂ ನಾಗಾರ್ಜುನ ಅವರೇ ಹೋಸ್ಟ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications