ಕರ್ನಾಟಕದ ಟ್ರೆಂಡಿಂಗ್ ಡಾಕ್ಟರ್ ಯಾರು ಗೊತ್ತಾ, ಹೊಸ ಟ್ರೆಂಡ್
ಕರ್ನಾಟದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿದೆ. ನಮ್ಮ ರಾಜ್ಯದ ಹಲವು ಡಾಕ್ಟರ್ ನ್ಯಾಷನಲ್ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಆದರೆ, ಎಂಟರ್‌ಟೆನ್ಮೆಂಟ್ ವಿಚಾರದಿಂದ ಡಾಕ್ಟರ್‌ವೊಬ್ಬರ ಹೆಸರು ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿ ಇದೆ. ಕೆಲವು ಮಹಿಳೆಯರು ಈ ಮಹಿಳಾ ಡಾಕ್ಟರ್‌ನ ನಡೆ - ನುಡಿಗೆ ಫಿದಾ ಆಗಿದ್ದಾರೆ. ರಾಜ್ಯದ ಮಟ್ಟಿಗೆ ಇವರೇ ಟ್ರೆಂಡಿಂಗ್ ಡಾಕ್ಟರ್ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿದೆ. ಹಾಗಾದರೆ ಯಾರು ಆ ಟ್ರೆಂಡಿಂಗ್ ಡಾಕ್ಟರ್ ಅನ್ನೋದನ್ನ ನೋಡೋಣ ಬನ್ನಿ.
ಕರ್ನಾಟಕದ ಟ್ರೆಂಡಿಂಗ್ ಡಾಕ್ಟರ್ ಸೀರಿಯಲ್‌ವೊಂದರ ಪಾತ್ರಧಾರಿ. ಅವರು ಕನ್ನಡದ ಪ್ರಮುಖ ಸೀರಿಯಲ್‌ವೊಂದರಲ್ಲಿ ಕಾಣಿಸಿಕೊಂಡಾಗಿನಿಂದ ಜನ ಇವರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅವರೇ ಕನ್ನಡ ಪ್ರಮುಖ ಧಾರಾವಾಹಿಯ ವೈದ್ಯ ಪಾತ್ರಧಾರಿ ಡಾ.ಅನಂತಲಕ್ಷ್ಮೀ. ಡಾ.ಅನಂತಲಕ್ಷ್ಮೀ ಎನ್ನುವ ಡಾಕ್ಟರ್ ಪಾತ್ರದ ಬಗ್ಗೆ ಕನ್ನಡಿಗರು ಫಿದಾ ಆಗಿದ್ದಾರೆ. ಕನ್ನಡದಲ್ಲಿ ಉತ್ತಮ ವೀಕ್ಷಕರನ್ನು ಹೊಂದಿರುವ ಸೀತಾರಾಮ ಧಾರಾವಾಹಿಯಲ್ಲಿ ಡಾಕ್ಟರ್ ಅನಂತಲಕ್ಷ್ಮೀ ಎನ್ನುವ ಪಾತ್ರಧಾರಿಯ ಬಗ್ಗೆ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸೀತಾರಾಮ ಧಾರಾವಾಹಿಯ ಕೇಂದ್ರ ಬಿಂದು: ಡಾ.ಅನಂತಲಕ್ಷ್ಮೀ ಎನ್ನುವ ಪಾತ್ರವು ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾರಾಮ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ. ಸೀತಾರಾಮ ಸೀರಿಯಲ್‌ನ ಸೆಂಟ್ರಆಫ್ ಅಟ್ರಾಕ್ಷನ್ (ಕೇಂದ್ರಬಿಂದು)ವಾಗಿ ಈ ಪಾತ್ರ ಮೂಡಿ ಬರುತ್ತಿದೆ. ಧಾರವಾಹಿಯ ಮುಖ್ಯಪಾತ್ರಧಾರಿ ಸೀತಾ ಅವರು ಬಾಡಿಗೆ ತಾಯಿ ಎನ್ನುವ ವಿಷಯ ಬಹಿರಂಗವಾದ ಕೆಲವು ದಿನಗಳ ನಂತರ ಡಾ. ಅನಂತಲಕ್ಷ್ಮೀ ಎನ್ನುವ ಪಾತ್ರವನ್ನು ಪರಿಚಯಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಈ ಪಾತ್ರದ ಸುತ್ತಲೇ ಕಥೆ ಹೆಣೆಯಲಾಗುತ್ತಿದೆ. ಡಾ. ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಾತ್ರಧಾರಿ ಅವರ ಅಭಿನಯ ಹಾಗೂ ಮಾತು ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಇವರ ಅಭಿನಯ ನೋಡುವುದಕ್ಕಾಗಿಯೂ ಸೀರಿಯಲ್ ನೋಡುತ್ತಿರುವುದಾಗಿ ಕೆಲವು ವೀಕ್ಷಕರು ಹೇಳಿಕೊಂಡಿದ್ದಾರೆ.

ಟ್ರೋಲ್ ಪೇಜ್‌ಗಳಲ್ಲೂ ಇವರದ್ದೇ ಸದ್ದು: ಕೇವಲ ಧಾರಾವಾಹಿ ನೋಡುವವರು ಮಾತ್ರವಲ್ಲ ಇದೀಗ ಕನ್ನಡದ ಕೆಲವು ಟ್ರೋಲ್ ಪೇಜ್‌ಗಳು ಸಹ ಸೀತಾರಾಮ ಸೀರಿಯಲ್‌ನ ಡಾ. ಅನಂತಲಕ್ಷ್ಮೀ ಪಾತ್ರದ ಬಗ್ಗೆ ಮೀಮ್ಸ್ ಕ್ರಿಯೇಟ್ ಮಾಡುತ್ತಿವೆ. ಕರ್ನಾಟಕದಲ್ಲಿ ಈಗ ಟ್ರೆಂಡಿಂಗ್ ಡಾಕ್ಟರ್‌ಗಳಲ್ಲಿ ಇವರೇ ಮೊದಲು ಎಂದು ಮೀಮ್ಸ್ ಕ್ರಿಯೇಟ್ ಮಾಡಿವೆ. ಈ ಮೀಮ್ಸ್‌ಗಳಿಗೆ ಜನರಿಂದ ಒಳ್ಳೆ ರೆಸ್ಪಾನ್ಸ್ ಬಂದಿದೆ.
ಹೊಸ ತಿರುವು ಪಡೆದುಕೊಂಡ ಸೀತಾರಾಮ: ಇನ್ನು ಸೀತಾರಾಮ ಧಾರಾವಾಹಿಯು ಇತ್ತೀಚಿನ ದಿನಗಳಲ್ಲಿ ಹೊಸ ತಿರುವುಪಡೆದುಕೊಂಡಿದೆ. ಸೀರಿಯಲ್‌ನ ಮುಖ್ಯ ಕಥಾವಸ್ತು ದತ್ತು ತಾಯಿ ಎನ್ನುವುದೇ ಆಗಿದೆ. ಆದರೆ, ಧಾರಾವಾಹಿ ಪ್ರಾರಂಭವಾದ ಹಲವು ತಿಂಗಳುಗಳ ನಂತರ ಈ ವಿಷಯವನ್ನು ನಿರ್ದೇಶಕರು ರಿವೀಲ್ ಮಾಡಿದ್ದರು. ಸೀತಾ ಬಾಡಿಗೆ ತಾಯಿಯಾದರೆ ಅವರ ನಿಜವಾದ ತಂದೆ - ತಾಯಿ ಎನ್ನುವ ವಿಚಾರವೂ ಕುತೂಹಲ ಮೂಡಿಸಿತ್ತು. ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಆದರೆ, ಈ ವಿಷಯಗಳು ತಿಳಿಯಾಗುತ್ತಿದ್ದರೂ ಸೀತಾ ಸಿಹಿ ತನ್ನಿಂದ ದೂರ ಆಗ್ತಾಳೆ ಎನ್ನುವ ಆತಂಕದಲ್ಲಿ ಇದ್ದಾರೆ. ಬಾಡಿಗೆ ತಾಯಿ ಹಾಗೂ ಮಗುವಿನ ಮೂಲ ತಂದೆ - ತಾಯಿ ವಿಚಾರ ಡಾ.ಅನಂತಲಕ್ಷ್ಮೀ ಅವರಿಗೆ ಮಾತ್ರ ಗೊತ್ತಿತ್ತು. ಇದೀಗ ಸೀತಾ ಅವರಿಗೂ ಸತ್ಯ ಗೊತ್ತಾಗಿರುವಂತೆ ಧಾರಾವಾಹಿಯಲ್ಲಿ ತೋರಿಸಲಾಗಿದ್ದೆ. ಭಾವನಾತ್ಮಕ ದೃಶ್ಯಗಳಿಗೆ ಈ ಧಾರಾವಾಹಿ ಇದೀಗ ಸಾಕ್ಷಿಯಾಗುತ್ತಿದೆ.












Click it and Unblock the Notifications