‘ಸಲಾರ್’ ಮೊದಲ ದಿನ ದುಡಿದ ಹಣ ಎಷ್ಟು ನೂರು ಕೋಟಿ ಗೊತ್ತಾ?

ಬಾಹುಬಲಿ ಪ್ರಭಾಸ್ ವಾಪಸ್ ಬಂದಿದ್ದಾರೆ, ಸಾಲು ಸಾಲು ಸೋಲಿನ ಸುಳಿ ಎದುರಿಸಿದ್ದ ಈ ನಟ ಈಗ 'ಸಲಾರ್' ಮೂಲಕ ತಮ್ಮ ಕೆಪಾಸಿಟಿ ತೋರಿಸಿದ್ದಾರೆ. ಹಾಗಾದರೆ ಮೊದಲನೇ ದಿನ 'ಸಲಾರ್' ಸಿನಿಮಾ ದುಡಿದ ಹಣ ಎಷ್ಟು ನೂರು ಕೋಟಿ ಗೊತ್ತಾ? ಜಗತ್ತಿನಾದ್ಯಂತ ಈ ಸಿನಿಮಾ ಮಾಡಿದ ದುಡ್ಡು ಎಷ್ಟು ಗೊತ್ತಾ? ಪೂರ್ತಿ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕನ್ನಡ ಸಿನಿಮಾಗಳಿಗೆ ಗತ್ತು ತಂದುಕೊಟ್ಟಿದ್ದ ಸಿನಿಮಾ ಅಂದ್ರೆ ಕೆಜಿಎಫ್-1 ಮತ್ತು ಕೆಜಿಎಫ್-2 ಎನ್ನಬಹುದು. ಉತ್ತರ ಭಾರತದಲ್ಲಿ ಕನ್ನಡ ಸಿನಿಮಾಗಳ ಕುರಿತು ಅಸಡ್ಯ ಭಾವನೆ ಇದ್ದಾಗಲೇ, ಕನ್ನಡಿಗರ 'ಕೆಜಿಎಫ್' ಸರಣಿ ಕಮಾಲ್ ಮಾಡಿತ್ತು. ಇದೀಗ 'ಕೆಜಿಎಫ್‌ ಚಾಪ್ಟರ್‌ 2'ಗಿಂತ 10 ಪಟ್ಟು ದೊಡ್ಡದಾಗಿ ಸಲಾರ್‌ ನಿರ್ಮಾಣವಾಗಿದೆ ಕೆಜಿಎಫ್‌-2ಗೆ ಒಟ್ಟು 100 ಕೋಟಿ ರೂಪಾಯಿ ಬಂಡವಾಳ ಹಾಕಿದ್ದ ಹೊಂಬಾಳೆ ಸಂಸ್ಥೆ ಈ ಬಾರಿ ಇನ್ನೂ ಅದ್ಧೂರಿತನ ಮೆರೆದಿದೆ. ಹೀಗೆ, ಸಲಾರ್‌ ಚಿತ್ರಕ್ಕೆ ಭರ್ಜರಿ 270 ಕೋಟಿ ಹಣ ಹೂಡಿಕೆ ಮಾಡಿ, ದುಡ್ಡಿಗೆ ತಕ್ಕಂತೆಯೇ ಮೇಕಿಂಗ್ ಕೂಡ ಮಾಡಿದೆ. ಹಾಗಾದರೆ ಮೊದಲ ದಿನ ಈ ಸಿನಿಮಾ ಗಳಿಸಿದ ಹಣ ಎಷ್ಟು?

Discover The Salaar Star Prabhas Movie First Day Collection Report

ದಾಖಲೆ ಮುರಿದು ಬಿಸಾಕಿದ 'ಸಲಾರ್'

ಭಾರತದಲ್ಲಿ ಮೊದಲ ದಿನ ಅತಿಹೆಚ್ಚು ಹಣ ಮಾಡಿದ ಸಿನಿಮಾಗಳ ಪೈಕಿ RRR ಸಿನಿಮಾಗೆ ಮೊದಲ ಸ್ಥಾನ ಇದ್ದು, ಆರ್‌ಆರ್‌ಆರ್ ಸಿನಿಮಾ ಮೊದಲ ದಿನ 223.5 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇನ್ನು ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿಗಳ ಸಂಪಾದನೆ ಮಾಡಿತ್ತು. ಇದನ್ನ ಬಿಟ್ಟರೆ ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' ಬರೋಬ್ಬರಿ 164.5 ಕೋಟಿ ರೂಪಾಯಿ ಹಣವನ್ನ ಮೊದಲನೇ ದಿನವೇ ಸಂಪಾದಿಸಿತ್ತು. ಈಗ ಪ್ರಭಾಸ್ ಅವರ ಸಲಾರ್ ಸಿನಿಮಾ ಹೊಸ ಇತಿಹಾಸ ಬರೆದಿದೆ.

ಮೊದಲ ದಿನವೇ 175 ಕೋಟಿ!

ಹೌದು, ಇದೀಗ ಸಲಾರ್ ಸಿನಿಮಾ ಮೊದಲ ದಿನವೇ ಬರೋಬ್ಬರಿ 175 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಜಗತ್ತಿನಾದ್ಯಂತ ಹತ್ತಾರು ಸಾವಿರ ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಿದ್ದ 'ಸಲಾರ್' ಸಿನಿಮಾ ಈಗ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಭಾಸ್ ವೃತ್ತಿ ಜೀವನದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಗಳಿಸಿರುವ 2ನೇ ಸಿನಿಮಾ ಇದಾಗಿದೆ. ಯಾಕಂದ್ರೆ ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂ. ಸಂಪಾದನೆ ಮಾಡಿತ್ತು.

Discover The Salaar Star Prabhas Movie First Day Collection Report

ತೆಲುಗು ಸಿನಿಮಾದಲ್ಲಿ ಕನ್ನಡಿಗರ ಹವಾ!

'ಸಲಾರ್' ತೆಲುಗು ಸಿನಿಮಾ ಆಗಿದ್ದರೂ ಕನ್ನಡ ನಟರ ದಂಡೇ ಈ ಸಿನಿಮಾದಲ್ಲಿ ಅಬ್ಬರಿಸಿದೆ. ಕೆಜಿಎಫ್‌ ಪಾರ್ಟ್ 1 ಮೂಲಕ, ವಿಲನ್ ಅಂದ್ರೆ ಹಿಂಗೆ ಇರಬೇಕು ಅನ್ನೋ ಭಯ ಹುಟ್ಟಿಸಿದ್ದ ಗರುಡ ಖ್ಯಾತಿ ರಾಮಚಂದ್ರ ರಾಜು ಸಲಾರ್‌ ಸಿನಿಮಾದಲ್ಲಿ ವಿಲನ್ ಆಗಿ ಮತ್ತೆ ಮಿಂಚಿದ್ದಾರೆ. ಪೋಷಕ ನಟ ರವಿ ಭಟ್‌, ನಟ ಪ್ರಮೋದ್‌, ಭಜರಂಗಿ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಮಧು ಗುರುಸ್ವಾಮಿ ಈ ಸಿನಿಮಾದಲ್ಲಿ ಇದ್ದಾರೆ.

ತಂತ್ರಜ್ಞರು ಕೂಡ ಕನ್ನಡ ನಾಡಿನವರು

'ಸಲಾರ್' ನಿರ್ಮಾಣ ಮಾಡಿರುವುದು ಕನ್ನಡಿಗರು. ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿರುವ, ಹೊಂಬಾಳೆ ಸಂಸ್ಥೆ ಸಲಾರ್ ಸಿನಿಮಾ ನಿರ್ಮಾಣ ಮಾಡಿದೆ. ಹೀಗಾಗಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲಾಗಿದೆ. ರವಿ ಬಸ್ರೂರು ಕೆಜಿಎಫ್ ರೀತಿಯೆ ಮತ್ತೆ ಸಲಾರ್ ಮೂಲಕ ಸಂಗೀತದ ಕಮಾಲ್ ಮಾಡಿದ್ದಾರೆ. ಹಾಗೇ, ಕೆಜಿಎಫ್ ಸಿನಿಮಾ ಸರಣಿಗೆ ಕ್ಯಾಮೆರಾ ವರ್ಕ್ ಮಾಡಿದ್ದ ಭುವನ್‌ ಗೌಡ ಇಲ್ಲೂ ಮಿಂಚಿದ್ದು ವಿಶೇಷ ಎನ್ನಬಹುದು. ಒಟ್ನಲ್ಲಿ ಸಲಾರ್ ಸಿನಿಮಾದ ಈ ಸಾಧನೆ ಎಲ್ಲರ ಗಮನ ಸೆಳೆದಿದೆ, ಹಾಗೇ ಸೌತ್ ಇಂಡಿಯಾ ಸಿನಿಮಾಗೆ ಈ ರೀತಿಯ ದೊಡ್ಡ ಗೌರವ ಸಿಗುತ್ತಿರುವುದು ಹೆಮ್ಮೆಯ ವಿಚಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+