Nandi Film Awards: ‘ನಂದಿ ಅವಾರ್ಡ್ಸ್-2023’ಗೆ ನಟ ಕಿಚ್ಚ ಸುದೀಪ್ ಸಾಥ್!

ಸ್ಯಾಂಡಲ್‌ವುಡ್ ಸಿನಿಮಾಗಳು ಅಂದ್ರೆ ಒಂದು ಗತ್ತು ಇದೆ, ಜಗತ್ತಿನಾದ್ಯಂತ ಸದ್ದು ಮಾಡಿ ಅಬ್ಬರಿಸುವ ತಾಕತ್ತು ಕೂಡ ಇದೆ. ಹೀಗಾಗಿ ಕನ್ನಡದಲ್ಲಿ ಇದೇ ಮೊದಲ ಬಾರಿ ನಂದಿ ಪ್ರಶಸ್ತಿ ಆರಂಭವಾಗುತ್ತಿದೆ. ಡಿಸೆಂಬರ್‌ನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ ಇದಕ್ಕಾಗಿ ಸಕಲ ಸಿದ್ಧತೆ ಸಾಗಿದೆ. ಇದೀಗ ಈ ಖುಷಿಯ ಕೆಲಸಕ್ಕೆ ನಟ ಕಿಚ್ಚ ಸುದೀಪ್ ಅವರು ಕೂಡ ಸಾಥ್ ನೀಡಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಹೌದು, 'ನಂದಿ ಚಲನಚಿತ್ರ ಪ್ರಶಸ್ತಿ-2023'ರ ಕರ್ಟನ್ ರೈಸ್‌ಗೆ ಕಿಚ್ಚ ಸುದೀಪ್ ಚಾಲನೆ ನೀಡಿ ಪ್ರಶಸ್ತಿ ಸಮಾರಂಭಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್ ಅವ್ರು ಸಂಸ್ಥಾಪಕರಿಗೆ ಶುಭವಾಗಲಿ. ನಾನು ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, 2003-2004 ರಲ್ಲೇ ಲಾಸ್ಟ್ ಎಂದು ತಿಳಿಸಿದರು. ಆ ಬಳಿಕ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗಿಲ್ಲ. ಅದಕ್ಕೆ ಬೇರೆ ಇತಿಹಾಸವಿದೆ. ಆದ್ರೆ ಇಲ್ಲಿ ಆ ಅವಾರ್ಡ್ಸ್ ಮಹತ್ವ ಬೇರೆ ಕಲಾವಿದರಿಗೆ ಆಗಲಿ. ಎಲ್ಲರಿಗೆ ಎಷ್ಟು ಮುಖ್ಯ ಎನ್ನುವುದನ್ನು ನೋಡಿದ್ದೇನೆ. ನನ್ನ ಮನವಿ ಏನೆಂದರೆ ಯಾರಿಗೆ ಹೋಗಬೇಕು ಅವರಿಗೆ ಹೋಗಲಿ ಎಂದರು ನಟ ಕಿಚ್ಚ ಸುದೀಪ್.

Discover How Kiccha Sudeep Supported Nandi Film Awards Team

ಗೌರವ ಕೊಟ್ಟು ಅದಕ್ಕಾಗಿ ಬಾಳಿ...

ಹಾಗೇ ತಮ್ಮ ಮಾತು ಮುಂದುವರಿಸಿದ ನಟ ಕಿಚ್ಚ, ಮಿಕ್ಕಿದವರೆಲ್ಲ ದುಡ್ಡು ಮಾಡ್ತಿದ್ದಾರೆ. ಅವಾರ್ಡ್ಸ್, ದುಡ್ಡು ಅಂತಾ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೇ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ನೀಡಿ. ನಂದಿ ಬಹಳ ಶ್ರೇಷ್ಠ. ಹೀಗೆ ಅದರ ಹೆಸರಲ್ಲಿ ನಡೆಸುತ್ತೀರಿ ಅಂದ್ರೆ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೊಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾರ್ಡ್ಸ್ ಪ್ರೊಗ್ರಾಂ ಇಲ್ಲ. ಆ ರೀತಿಯ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ ಎಂದು ಶುಭ ಹಾರೈಸಿದರು.

50ಕ್ಕೂ ಹೆಚ್ಚು ವಿಭಾಗದಲ್ಲಿ ಪ್ರಶಸ್ತಿ

ಇನ್ನು ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು ಸೇರಿ ಪ್ರಾದೇಶಿಕ ಭಾಷೆ ತುಳು, ಕೊಡವ, ಕೊಂಕಣಿ, ಬ್ಯಾರಿ & ಬಂಜಾರ ಭಾಷೆಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ, ದೃಶ್ಯ ಮಾಧ್ಯಮಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎನ್ನಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಡಿಸೆಂಬರ್ 6 ರಂದು ನಡೆಯಲಿದೆ.

Discover How Kiccha Sudeep Supported Nandi Film Awards Team

ಒಟ್ನಲ್ಲಿ ಕನ್ನಡ ಸಿನಿಮಾ ರಂಗದ ಪ್ರತಿಭೆಗಳನ್ನು ಗುರಿತಿಸಿ, ಅವರಿಗೆ ಸಪೋರ್ಟ್ ನೀಡುವ ಕಾರಣಕ್ಕೆ ಹೊಸ ಪ್ರಶಸ್ತಿ ಸಮಾರಂಭ ಆರಂಭ ಮಾಡಲಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆಸಲಾಗಿದೆ. ಹಾಗೆಯೇ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ರಾಜಕೀಯ ವ್ಯಕ್ತಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+