Bigg Boss: ಮಿಡ್‌ ವೀಕ್ ಎಲಿಮಿನೇಷನ್ ಮಾಡುವುದಾಗಿ ಹೇಳಿ ವೀಕ್ಷಕರನ್ನು ಫೂಲ್ ಮಾಡಿದ್ರಾ ಬಿಗ್‌ಬಾಸ್‌?

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯುವ ದಿನ ಹತ್ತಿರವಾಗುತ್ತಿದೆ. ಹೀಗಾಗಿ ಆಟದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗುತ್ತಿದೆ. ಆದರೆ ಬಿಗ್‌ಬಾಸ್‌ ವೀಕ್ಷಕರನ್ನು ಫೂಲ್ ಮಾಡ್ತಾಯಿದಾರಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ಯಾಕೆಂದರೆ ಮಿಡ್‌ ವೀಕ್ ಎಲಿಮಿನೇಷನ್ ಆಯ್ತು ಎನ್ನುವ ರೀತಿ ಪ್ರೋಮೋ ಬಿಡುಗಡೆ ಮಾಡಿ ಎರಡು ದಿನ ಆಯ್ತು. ಆದರೆ ಇದನ್ನು ಈವರೆಗೂ ಟೆಲಿಕಾಸ್ಟ್ ಮಾಡಿಲ್ಲ. ಇಂದು ನಾಳೆ ಅನ್ನೋತರ ವೀಕ್ಷಕರೂ ಬಿಗ್‌ಬಾಸ್‌ ಮನೆಯಿಂದ ಯಾರು ಹೊರಬಂದರು ಅನ್ನೋದನ್ನು ಮಿಸ್ ಮಾಡದೇ ಸಂಚಿಕೆಯನ್ನು ನೋಡುತ್ತಲೇ ಇದ್ದಾರೆ. ಆದರೆ ಇದರ ಬಗ್ಗೆ ಯಾವುದೇ ಸುಳಿವು ಕೂಡ ಬಿಗ್‌ಬಾಸ್‌ ಬಿಟ್ಟುಕೊಟ್ಟಿಲ್ಲ.

ಹೌದು.. ಬಿಗ್‌ಬಾಸ್‌ ಇನ್ನೇನು ಎರಡು ವಾರದಲ್ಲಿ ಮುಗಿಯಲಿದೆ. ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಕೂಡ ಸಜ್ಜಾಗುತ್ತಿದೆ. ಹೀಗಿರುವಾಗ ಬಿಗ್‌ಬಾಸ್‌ ಮನೆಯಲ್ಲಿ ಇನ್ನೂ ಕೂಡ ಎಂಟು ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಎಂಟು ಜನರದಲ್ಲಿ ಒಬ್ಬರು ಮಿಡ್‌ ವೀಕ್ ಎಲಿಮಿನೇಷನ್ ಆಗಬೇಕಿತ್ತು. ಉಳಿದ ಇಬ್ಬರು ವಾರಾಂತ್ಯಕ್ಕೆ ಹೋಗಬೇಕಿದೆ. ಆದರೆ ಬುಧವಾರ ಕಳೆದರೂ ಕೂಡ ಈ ವಾರ ಯಾರು ಮನೆಗೆ ಹೋಗುತ್ತಾರೆ ಅನ್ನೋ ಸುಳಿವನ್ನು ಬಿಗ್‌ಬಾಸ್‌ ಬಿಟ್ಟುಕೊಟ್ಟಿಲ್ಲ. ಎರಡು ದಿನದ ಹಿಂದೆ ಕಲರ್ಸ್‌ ಕನ್ನಡ ಹಂಚಿಕೊಂಡ ವೀಡಿಯೋ ಮಾತ್ರ ಇಂದಿಗೂ ಕೂಡ ಕೂತೂಹಲವನ್ನು ಹಾಗೇ ಉಳಿಸಿಕೊಂಡಿದೆ.

Did bigg boss fool the viewers by saying there would be a mid week elimination

ಪ್ರೋಮೋದಲ್ಲಿ ತೋರಿಸಿದ್ದು ಒಂದು ಟೆಲಿಕಾಸ್ಟ್ ಆಗಿದ್ದು ಮತ್ತೊಂದು..

ಸೋಮವಾರ ಬಿಗ್‌ಬಾಸ್‌ ಮನೆಯಲ್ಲಿ ಮಿಡ್‌ ವೀಕ್ ಎಲಿಮಿನೆಷನ್ ನಡೆದಿದೆ ಎನ್ನುವ ಫ್ರೋಮೋವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಮಿಡ್‌ ನೈಟ್ ಎಂಟು ಜನರಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಬರುತ್ತಾರೆ. ವೈರಲ್ ಆದ ಪ್ರೋಮೋದಲ್ಲಿ ಮನೆಯ ಎಲ್ಲಾ ಸದಸ್ಯರು ರಾತ್ರಿ ಹೊತ್ತು ಎದ್ದಿದ್ದು, ತಾವೇ ಸ್ವತ: ಕೆಲ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ ದೃಶ್ಯವೂ ಇದೆ. ಕೊನೆ ಕ್ಷಣದಲ್ಲಿ ಕೆಲ ಸ್ಪರ್ಧಿಗಳು ಬಾಗಿಲ ಬಳಿ ಹೋಗಿ ನಿಂತುಕೊಂಡು ಇನ್ನೇನು ಹೊರ ಹೋಗುವವರೆಗೂ ಈ ಪ್ರೋಮೋದಲ್ಲಿ ದೃಶ್ಯವಿದೆ.

ಆದರೆ ಈವರೆಗೂ ಯಾರು ಮನೆಯಿಂದ ಹೊರ ಬಂದರು ಅನ್ನೋದನ್ನು ತೋರಿಸಿಲ್ಲ. ಹೀಗಾಗಿ ವೀಕ್ಷಕರಿಗೆ ಬಿಗ್‌ಬಾಸ್‌ ಪೂಲ್ ಮಾಡಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಯಾಕೆಂದರೆ ಗುರುವಾರ ಒಂದು ದಿನ ಕಳೆದರೆ ಶುಕ್ರವಾರ ವೀಕೆಂಡ್ ಅಂತಲೇ ಪರಿಗಣಿಸಲಾಗುತ್ತದೆ. ಹೀಗಾಗಿ ಬುಧವಾರ ಕಳೆದರೂ ಕೂಡ ಮಿಡ್‌ ವೀಕ್ ಯಾರು ಮನೆಯಿಂದ ಹೊರ ಬಂದರು ಅನ್ನೋದನ್ನು ತೋರಿಸಿಲ್ಲಾ ಅಂದರೆ ಅದನ್ನು ಮಿಡ್‌ ವೀಕ್ ಎಲಿಮಿನೇಷ್ ಎಂದು ಕರೆಯಲು ಹೇಗೆ ಸಾಧ್ಯ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ವೀಕ್ಷಕರನ್ನು ಫೂಲ್ ಮಾಡಿದ್ರಾ ಬಿಗ್‌ಬಾಸ್‌?

ಹೌದು... ಮಿಡ್‌ ವೀಕ್ ಅಂದರೆ ಸೋಮವಾರದ ನಂತರ ಮಂಗಳವಾರ ಅಥವಾ ಬುಧವಾರ ಬಿಗ್‌ಬಾಸ್‌ ಮನೆಯಿಂದ ಒಬ್ಬ ಸ್ಪರ್ಧಿ ಹೊರ ಹೋಗಬೇಕಿತ್ತು. ಆದರೆ ಬುಧವಾರದ ಸಂಚಿಕೆಯಲ್ಲೂ ಬಿಗ್‌ಬಾಸ್‌ ಮನೆಯಿಂದ ಯಾರು ಹೊರಬಂದರು ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ಇದನ್ನು ಮಿಡ್‌ ವೀಕ್ ಎಲಿಮಿನೇಷನ್ ಅನ್ನೋದಕ್ಕೆ ಹೇಗೆ ಸಾಧ್ಯ ಎಂದು ಜನ ಕೇಳುತ್ತಿದ್ದಾರೆ. ಗುರುವಾರ ಅಂದರೆ ಇಂದೂ ಕೂಡ ಈ ಸಂಚಿಕೆಯನ್ನು ಟೆಲಿಕಾಸ್ಟ್ ಮಾಡದೇ ಇದ್ದರೆ ಇದರಿಂದ ವೀಕ್ಷಕರಿಗೆ ಬೇಸರ ಆಗುವುದು ಗ್ಯಾರಂಟಿ. ಅಲ್ಲದೆ ಬಿಗ್‌ಬಾಸ್‌ ಮಿಡ್‌ ವೀಕ್ ಎಲಿಮಿನೇಷನ್ ಇದೆ ಎಂದು ಸುಳ್ಳು ಹೇಳಿದಂತಾಗುತ್ತದೆ.

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಗೌತಮಿ ಮನೆಯಿಂದ ಹೊರ ಬಂದರು, ಭವ್ಯಾ ಗೌಡ ಹೊರಬಂದರು, ಧನ್‌ರಾಜ್ ಹೊರಬಂದರು ಅಂತೆಲ್ಲಾ ಊಹಾಪೋಹಗಳು ಹರಿದಾಡುತ್ತಲೇ ಇವೆ. ಇದಕ್ಕೆಲ್ಲಾ ತೆರೆ ಎಳೆಯಬೇಕು ಅಂದರೆ ಇಂದು ಬಿಗ್‌ಬಾಸ್‌ ಮನೆಯಿಂದ ಯಾರು ಹೊರಬಂದರು ಅನ್ನೋದನ್ನು ಟೆಲಿಕಾಸ್ಟ್ ಮಾಡಲೇಬೇಕು. ಇಲ್ಲವಾದಲ್ಲಿ ವೀಕ್ಷಕರಿಗೆ ಬಿಗ್‌ಬಾಸ್‌ ಪ್ರೋಮೋಗಳ ಬಗ್ಗೆ ನಂಬಿಕೆ ಕಡಿಮೆಯಾಗಲಿದೆ.

ಯಾವ ಪ್ರೋಮೋ ಯಾವ ದಿನಕ್ಕೆ ಟೆಲಿಕಾಸ್ಟ್ ಆಗಲಿದೆ ಅನ್ನೋ ಅನುಮಾನ ಶುರುವಾಗಲಿದೆ. ಯಾವ ಪ್ರೋಮೋ ಎಷ್ಟು ದಿನದ ಹಳೆಯದ್ದು ಅನ್ನೋ ಶಂಕೆ ವ್ಯಕ್ತವಾಗುತ್ತದೆ. ಹೀಗಾಗಿ ಇಂದಿನ ಸಂಚಿಕೆ ಬಗ್ಗೆ ಕೂಡ ವೀಕ್ಷಕರಿಗೆ ಅನುಮಾನ ಮೂಡುತ್ತದೆ. ಇದಕ್ಕೆಲ್ಲಾ ಬಿಗ್‌ಬಾಸ್‌ ಮುಗಿಯುವ ಹಂತದಲ್ಲಿ ಅವಕಾಶ ಮಾಡಿಕೊಡಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+