Darshan's Devil Teaser: ಪಾಪು ಹೆಸರು ಕೇಳಲ್ವಾ ಎನ್ನುತ್ತಾ 'ಡೇವಿಲ್' ಆಗಿ ಬಂದ ಕಾಟೇರ, ಫ್ಯಾನ್ಸ್ ಫುಲ್ ಥ್ರಿಲ್!
ಕಾಟೇರನ ಅವತಾರ ಎತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಶುಕ್ರವಾರ (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅನೇಕ ಹೊಸ ಸಿನಿಮಾಗಳು ಘೋಷಣೆಯಾಗುತ್ತಿವೆ. ಜೊತೆಗೆ ಈಗಾಗಲೇ ಘೋಷಣೆಯಾಗಿರುವ ಸಿನಿಮಾಗಳ ಅಪ್‌ಡೇಟ್, ಟೀಸರ್, ಟ್ರೈಲರ್‌ಗಳು ಬಿಡುಗಡೆಯಾಗುತ್ತಿವೆ.
ಡಿ ಬಾಸ್ ಹುಟ್ಟುಹಬ್ಬದ ಹಿನ್ನೆಲೆ ಅವರ ಬಹುನಿರೀಕ್ಷಿತ ಸಿನಿಮಾ 'ಡೇವಿಲ್- ದ ಹೀರೋ' ದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಮಧ್ಯರಾತ್ರಿಯೇ 'ಡೇವಿವ್' ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಕಾಟೇರನನ್ನು ಹೊಸ ರೂಪದಲ್ಲಿ ನೋಡಿ ಅವರ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಪಕ್ಕಾ ಮಾಸ್ ಎಂಟರ್ಟೈನರ್‌ನಂತಿರುವ ಡೇವಿಲ್ ಫಸ್ಟ್ ಲುಕ್ ಡಿಬಾಸ್ ಸೆಲಬ್ರಿಟಿಗಳಿಗೆ ಸಕತ್ ಗಿಫ್ಟ್.

ತನ್ನ ಹುಟ್ಟುಹಬ್ಬಕ್ಕೆ ಸೆಲಬ್ರಿಟಿಗಳಿಗೆ ಡಿ ಬಾಸ್ ಗಿಫ್ಟ್
47ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ ನಟ ದರ್ಶನ್. ಮಧ್ಯರಾತ್ರಿಯಿಂದಲೇ ದರ್ಶನ್ ಅವರ ಮನೆಯ ಎದುರು ಅಭಿಮಾನಿಗಳು ತುಂಬಿದ್ದಾರೆ. ಇದೇ ವೇಳೆ 'ಡೆವಿಲ್' ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಶೀರ್ಷಿಕೆಗೆ ತಕ್ಕಂತೆ ಸಕತ್ ಡೆವಿಲ್ ಆಗಿದೆ ಟೀಸರ್ ಎನ್ನುತ್ತಿದ್ದಾರೆ ಫ್ಯಾನ್ಸ್. ಹೊಸ ರೀತಿಯಲ್ಲಿ ಈ ಟೀಸರ್ ಮೂಡಿ ಬಂದಿದ್ದು, ಹೊಸ ಅವತಾರದಲ್ಲಿ ದರ್ಶನ ನೀಡಿದ್ದಾರೆ ಡಿ ಬಾಸ್.
ಮಿಲನ ಚಿತ್ರದ ಖ್ಯಾತಿಯ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ಅವರು 'ಡೆವಿಲ್' ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ, 'ತಾರಕ್' ಸಿನಿಮಾ ಬಳಿಕ ದರ್ಶನ್ ಮತ್ತು ಮಿಲನಾ ಪ್ರಕಾಶ್ ಮತ್ತೆ ಒಂದಾಗಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ 'ಡೆವಿಲ್' ಚಿತ್ರಕ್ಕಿದ್ದು ಹರೀಶ್ ಕೊಮ್ಮೆ ಟೀಸರ್ ಎಡಿಟ್ ಮಾಡಿದ್ದಾರೆ. ಕಳೆದ ವರ್ಷವೇ ಅಂದರೆ ನಾಲ್ಕು ತಿಂಗಳ ಹಿಂದೆಯಷ್ಟೇ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶ್ರೀ ಜೈಮಾತಾ ಕಂಬೈನ್ಸ್ ಹಾಗೂ ವೈಷ್ಣೋ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕುತ್ತಿವೆ. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.

ಹೇಗಿದೆ ಡೇವಿಲ್' ಫಸ್ಟ್ ಲುಕ್...?
ಡೇವಿಲ್- ದ ಹೀರೋ... ಸಿನಿಮಾದ ಫಸ್ಟ್ ಲುಕ್‌ನಲ್ಲಿ ನಟ ದರ್ಶನ್ ತೂಗುದೀಪ ಸಕತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. 1 ನಿಮಿಷ 48 ಸೆಕೆಂಡ್‌ಗಳ ಪವರ್ ಪ್ಯಾಕ್ಡ್ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ. ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರು ಟೈಟಲ್‌ನಲ್ಲಿ ಇರುವ ಹಾಗೆಯೇ ಡೇವಿಲ್ ಲುಕ್ ನೀಡಿದ್ದಾರೆ.
"ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು... ಫೋಟೋ ತಗೆಯಲದಕ್ಕೆ ಬಲು ಕೋಪ ಬರುವುದು... ಫೋಟೋ ತೆಗೆದ ಕೈಯ ಪಾಪು ಮುರಿದು ಬಿಡುವುದು.. ಸರಸು.. ಪಾಪು ಹೆಸರು ಕೇಳಲ್ವಾ...? ಡೇವಿಲ್.... ಹೇ..ಡೇವಿಲ್...." ಈ ಸಂಭಾಷಣೆ ಮೂಲಕ ತಾನೊಬ್ಬ ಡೇವಿಲ್ ಎಂಬುದನ್ನು ನಟ ದರ್ಶನ್ ಒತ್ತಿ ಹೇಳಿದ್ದಾರೆ. ಅವರ ಲುಕ್ ಜನರಿಗೆ ಇಷ್ಟವಾಗಿದೆ.
ಸಿಗರೇಟ್ ಸೇದುತ್ತಾ.... ವಿಭಿನ್ನ ಮ್ಯಾರಿಸಂ, ಬಾಡಿ ಲಾಂಗ್ವೇಜ್.. ಲುಕ್... ನೀಡುತ್ತಾ ಡೇವಿಲ್ ಎಂದು ಗಹಗಹಿಸಿ ನಗುವ ನಟ ದರ್ಶನ್ ಈ ಸಿನಿಮಾ ಮೂಲಕ ಹೊತನವನ್ನು ನೀಡಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತಿದೆ. ಕಾಟೇರ ಸಿನಿಮಾದ ಬಳಿಕ ನಟ ದರ್ಶನ್ ಯಾವ ಗೆಟಪ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಿಗಿತ್ತು. ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಡೇವಿಲ್ ಫಸ್ಟ್ ಲುಕ್ ಟೀಸರ್.












Click it and Unblock the Notifications