Darshan Thoogudeepa: "ಸೆಲೆಬ್ರಿಟಿ"ಗಳನ್ನು ಇಂಪ್ರೆಸ್ ಮಾಡುತ್ತಿರುವ ದರ್ಶನ್!

Darshan Thoogudeepa: ನಟ ದರ್ಶನ್ ಅವರು ಅವರ ಸೆಲೆಬ್ರಿಟಿಗಳನ್ನು ಇಂಪ್ರೆಸ್ ಮಾಡುತ್ತಿದ್ದಾರೆ. ಹೌದು ನಟ ದರ್ಶನ್ ಅವರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಕರಾಳ ದಿನಗಳನ್ನು ಮುಗಿಸಿ ಹೊಸ ಜೀವನ ಕಟ್ಟಿಕೊಳ್ಳುತ್ತಿರುವ ನಟ ದರ್ಶನ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾಡುತ್ತಿರುವ ಪೋಸ್ಟ್‌ಗಳಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ದರ್ಶನ್ ಅವರ ಸರಣಿ ಪೋಸ್ಟ್‌ಗಳನ್ನು ನೋಡಿ ಅವರ ಫ್ಯಾನ್ಸ್‌ ಸಹ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ದರ್ಶನ್ ಅವರ ಮೇಲೆ ಅವರ ಅಭಿಮಾನಿಗಳು ಅಪಾರ ಪ್ರೀತಿಯನ್ನು ತೋರಿಸುತ್ತಾರೆ. ಅದೇ ರೀತಿ ದರ್ಶನ್ ಅವರು ಸಹ ಅವರ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿಲ್ಲ. ದರ್ಶನ್ ಅವರ ಹೊಸ ಪೋಸ್ಟ್‌ಗಳನ್ನು ನೋಡುತ್ತಿದ್ದರೆ ಅವರು ಇಷ್ಟರಲ್ಲೇ ಸಿನಿಮಾ ಮಾಡಲಿದ್ದಾರೆ ಎನ್ನುವ ಮುನ್ಸೂಚನೆಯಂತೂ ಇದೆ.

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರು. ಆ ಮೂರು ತಿಂಗಳ ಅವಧಿ ದರ್ಶನ್‌ಗೆ ಜೀವಮಾನದಲ್ಲೇ ಕಷ್ಟ ದಿನಗಳಾಗಿದ್ದವು. ಆ ಕರಾಳ ದಿನಗಳಿಂದ ನಟ ದರ್ಶನ್ ಹೊರಗೆ ಬಂದಿದ್ದು.. ಇದೀಗ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಜೈಲಿನಲ್ಲಿದ್ದಿದ್ದು ಹಾಗೂ ಆರೋಗ್ಯ ಸಮಸ್ಯೆಯಿಂದ ಅವರು 8 ತಿಂಗಳುಗಳ ಕಾಲ ಸೋಷಿಯಲ್‌ ಮೀಡಿಯಾದಿಂದ ದೂರವೇ ಇದ್ದರು. ಅವರ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಒಂದೇ ಒಂದು ಪೋಸ್ಟ್‌ ಸಹ ಇರಲಿಲ್ಲ. ಇದೀಗ ಅವರು ಅವರ ಅಭಿಮಾನಿಗಳನ್ನು ಪೋಸ್ಟ್‌ನ ಮೂಲಕವೇ ಇಂಪ್ರೆಸ್ ಮಾಡುತ್ತಿದ್ದಾರೆ.

DBoss Darshan Thoogudeepa Impressing Celebrities

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ನಟ ದರ್ಶನ್ ಅವರು ಸಂಕ್ರಾಂತಿ ಹಬ್ಬಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಮೊದಲ ಬಾರಿ ಪೋಸ್ಟ್‌ ಮಾಡಿದ್ದರು. ಇದೀಗ ಅವರ ಬರ್ತಡೇಗೆ ಮಾಡಿರುವ ಪೋಸ್ಟ್‌ಗಳು ಸಾಕಷ್ಟು ವೈರಲ್‌ ಹಾಗೂ ಅಭಿಮಾನಿಗಳ ಕಮೆಂಟ್‌ ಸುರಿಮಳೆಯಿಂದ ತುಂಬಿ ಹೋಗಿದೆ.

ಸೆಲೆಬ್ರಿಟಿಗಳಿಗಾಗಿ ಸರಣಿ ಪೋಸ್ಟ್‌: ಇನ್ನು ನಟ ದರ್ಶನ್‌ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಅವರ ಸೆಲೆಬ್ರಿಟಿಗಳನ್ನು ಅಂದರೆ ಅವರ ಅಭಿಮಾನಿಗಳನ್ನು ಇಂಪ್ರೆಸ್‌ ಮಾಡಿದ್ದಾರೆ. ನಟ ದರ್ಶನ್‌ ಅವರ ಹ್ಯಾಪಿ ಬರ್ತಡೇ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಎಂದಿನಂತೆ ವಿವಿಧ ಸಮಾಜ ಸೇವೆ ಕೆಲಸಗಳನ್ನು ಮಾಡಿದ್ದಾರೆ. ಈ ಸಮಾಜ ಸೇವೆಗೆ ಡಿಬಾಸ್ ಮೆಚ್ಚುಗೆ ಸೂಚಿಸಿದ್ದು. ಸರಣಿ ಪೋಸ್ಟ್‌ ಮಾಡಿದ್ದಾರೆ.

ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಹೃದಯಪೂರ್ವಕ ಧನ್ಯವಾದಗಳು ಅಂತ ಹೇಳಿದ್ದಾರೆ. ಅವರ ಅಭಿಮಾನಿಗಳೇ ಅವರಿಗೆ ಸೆಲೆಬ್ರಿಟಿಸ್‌ ಅಂತ ಅವರು ಈ ಮೂಲಕ ಹೇಳಿದ್ದಾರೆ.

DBoss Darshan Thoogudeepa Impressing Celebrities

30ಕ್ಕೂ ಹೆಚ್ಚು ಪೋಸ್ಟ್‌: ನಟ ದರ್ಶನ್ ಅವರು ಅವರ ಅಭಿಮಾನಿಗಳ ದಾನ - ಧರ್ಮ ಹಾಗೂ ಸಮಾಜ ಸೇವೆ ಕೆಲಸಕ್ಕೆ ಮೆಚ್ಚಿಕೊಂಡಿದ್ದು. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಹೃದಯಪೂರ್ವಕ ಧನ್ಯವಾದಗಳು 🙏 ಅಂತ 30ಕ್ಕೂ ಹೆಚ್ಚು ಸರಣಿ ಪೋಸ್ಟ್‌ಗಳನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+