Darshan Thoogudeepa: ‘ವಾಮನ’ ಸಿನಿಮಾ ಪ್ರಚಾರದಲ್ಲಿ ದರ್ಶನ್- ಅಭಿಮಾನಿಗಳ ಮುಂದೆ ಬರಲಿದ್ದಾರೆ ಡಿ-ಬಾಸ್

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಸ್ನೇಹಿತ ಧನ್ವೀರ್ ಗೌಡ ಅಭಿನಯದ 'ವಾಮನ' ಸಿನಿಮಾ ಹಾಡು ರಿಲೀಸ್ ಆಗಿದೆ. ಈ ಹಾಡು ಸಾಕಷ್ಟು ಮೆಚ್ಚುಗೆ ಕೂಡ ಪಡೆದುಕೊಂಡಿದೆ. ಈ ಹಾಡನ್ನು ಅತಿ ದೊಡ್ಡ ಈವೆಂಟ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರೇ ಈ ಹಾಡನ್ನು ರಿಲೀಸ್ ಮಾಡಿದ್ದರು. ಇದೀಗ ದರ್ಶನ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಸಿಕ್ಕಿದೆ.

ಹೌದು... ಮಾರ್ಚ್ 27ರಂದು ದರ್ಶನ್ ಗುಡ್ ನ್ಯೂಸ್ ಕೊಡಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಅವರು ಅಭಿಮಾನಿಗಳನ್ನು ನೇರವಾಗಿ ಭೇಟಿ ಮಾಡಲೇ ಇಲ್ಲ. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ದರ್ಶನ್ ಅವರು ತಮ್ಮ ಅಭಿಮಾನಿಗಳ ಮುಂದೆ ಬರಲಿದ್ದಾರೆ.

darshan thoogudeepa will be in front of fans in the promotion of Vamana movie

ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಕಾಲ ಕಳೆಯುತ್ತಾ, ಆಸ್ಪತ್ರೆ, ದೇವಸ್ಥಾನ ಭೇಟಿ ಮಾಡಿಕೊಂಡಿದ್ದರು. ಇದೆಲ್ಲದರ ಕಾರಣ ತಮ್ಮ ನೆಚ್ಚಿನ ಅಭಿಮಾನಿಗಳಿಗೆ ದರ್ಶನ್ ನೇರವಾಗಿ ಭೇಟಿ ಮಾಡಲು ಆಗಿರಲಿಲ್ಲ. ಈ ಬೇಸರವನ್ನು ದರ್ಶನ್ ಅವರು ಹುಟ್ಟುಹಬ್ಬಕ್ಕೂ ಮೊದಲು ವಿಡಿಯೋ ಮೂಲಕ ಹೊರ ಹಾಕಿದ್ದರು.

ಅಭಿಮಾನಿಗಳ ಮುಂದೆ ಬರಲಿದ್ದಾರೆ ಡಿ-ಬಾಸ್

ಇದೀಗ ಮಾರ್ಚ್ 27ರಂದು ಅಭಿಮಾನಿಗಳಿಗೆ ದರ್ಶನ್ ದರ್ಶನವಾಗಲಿದೆ. ದರ್ಶನ್ ಸ್ನೇಹಿತ ಧನ್ವೀರ್ ಗೌಡ ಅಭಿನಯದ ವಾಮನ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರಕ್ಕೆ ಚಾಲೆನೆಯನ್ನು ನೀಡಿರುವ ಚಿತ್ರತಂಡ ಮಾರ್ಚ್ 27ರಂದು ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

darshan thoogudeepa will be in front of fans in the promotion of Vamana movie

ಈ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಬರಲಿದ್ದು ಈ ಮೂಲಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ದಾಸ ಅಭಿಮಾನಿಗಳಿಗೆ ದರ್ಶನ್ ನೀಡಲಿದ್ದಾರೆ ಎನ್ನಲಾಗಿದೆ. ಈ ಪೋಸ್ಟರ್‌ ಅನ್ನು ಶೇರ್ ಮಾಡಿಕೊಂಡಿದ್ದಾರೆ ಧನ್ವೀರ್.

ದರ್ಶನ್‌ಗೆ ಮತ್ತೆ ಸಂಕಷ್ಟ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನು ಪಡೆದು ಹೊರಬರುತ್ತಿದ್ದಂತೆ ಹೊಸ ಜೀವನ ಶುರು ಮಾಡಿದ್ದಾರೆ. ಪವಿತ್ರಾ ಗೌಡ ಸಹವಾಸಕ್ಕೆ ಹೋಗದೆ ಹೆಂಡತಿ ಹೇಳಿದಂತೆ ಹೆಜ್ಜೆ ಹಾಕುತ್ತಿದ್ದಾರೆ. ಆದರೀಗ ಕೊಲೆ ಆರೋಪ ಹೊತ್ತ ದಾಸ ಕೇರಳಕ್ಕೆ ಹೋಗಿ ಬಂದ್ಮೇಲೆ ಖಾಕಿ ಅಲರ್ಟ್ ಆಗಿದೆ. ಕೇರಳದ ದೇವಸ್ಥಾನದಲ್ಲಿ ಕೊಲೆ ಆರೋಪಿಯೊಂದಿಗೆ ದರ್ಶನ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Take a Poll

ಹೀಗಾಗಿ ದರ್ಶನ್‌ಗೆ ಹೊಸ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ದರ್ಶನ್‌ಗೆ ಯಾವ ಆರೋಪಿಗಳನ್ನೂ ಭೇಟಿ ಮಾಡುವಂತಿಲ್ಲ ಎಂದು ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೀಗ ದರ್ಶನ್ ಜೊತೆಗೆ ಆರೋಪಿ ಇರುವ ಫೋಟೋ ವೈರಲ್ ಆಗಿದ್ದು ದರ್ಶನ್ ಅವರಿಗೆ ಮತ್ತಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ.

ನಟ ದರ್ಶನ್ ಜಾಮೀನು ಪಡೆದ ನಂತರ ಒಂದಿಷ್ಟು ರಿಲ್ಯಾಕ್ಸ್ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರು ಜಾಮೀನು ಪಡೆದು ಹೊರಗೆ ಬಂದ ನಂತರ ಆರೋಗ್ಯ ಹಾಗೂ ಕುಟುಂಬದ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿಯೊಂದಿಗೆ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ.

ಪ್ರತೀ ವರ್ಷ ದರ್ಶನ್ ಹುಟ್ಟುಹಬ್ಬವನ್ನು ದರ್ಶನ್ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅನಾರೋಗ್ಯದ ಕಾರಣ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲೇ ಇಲ್ಲ. ಆದರೀಗ ದರ್ಶನ್ ಅಭಿಮಾನಿಗಳ ಮುಂದೆ ದಾಸ ಬರಲಿದ್ದಾರೆ. ಮಾರ್ಚ್ 27ರಂದು 'ವಾಮನ' ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅಭಿಂಆನಿಗಳು ದರ್ಶನ್ ದರ್ಶನ ಪಡೆಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+