Darshan Thoogudeepa: ಪುನೀತ್ ರಾಜಕುಮಾರ್ ಮಾಡಬೇಕಿದ್ದ ಸಿನಿಮಾ ಡಿ-ಬಾಸ್ ದರ್ಶನ್ ತೂಗುದೀಪ್...

ಪುನೀತ್ ರಾಜಕುಮಾರ್ ಕನ್ನಡಿಗರ ಪಾಲಿಗೆ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ಸ್ಟಾರ್ ಆಗಿ, ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ದೇವರಾಗಿ ಹೋಗಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗ 2021 ರಲ್ಲಿ ಅಪ್ಪು ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಕೋಟ್ಯಂತರ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿ ಹೋಯ್ತು. ಈಗಲೂ ಅಪ್ಪು ಪುನೀತ್ ರಾಜಕುಮಾರ್ ಅವರ ನೆನಪು ಮಾಡಿಕೊಂಡು ಅಪಾರ ಅಭಿಮಾನಿಗಳು ಕಣ್ಣೀರು ಹಾಕುತ್ತಾರೆ.

ಡಿ-ಬಾಸ್ ದರ್ಶನ್ ತೂಗುದೀಪ್ & ಅಪ್ಪು ಪುನೀತ್ ರಾಜಕುಮಾರ್ ಅವರ ನಡುವೆ ಅತ್ಯುತ್ತಮ ಸ್ನೇಹ ಇತ್ತು. ಇದಕ್ಕಿಂತ ಹೆಚ್ಚಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಲು ದೊಡ್ಮನೆ, ಅಂದ್ರೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ಸಹಾಯ ದೊಡ್ಡದಾಗಿದೆ ಎಂಬ ಮಾಹಿತಿ ಇದೆ. ಈ ಮಾಹಿತಿ ಖುದ್ದು ದರ್ಶನ್ ತೂಗುದೀಪ್ ಅವರ ತಮ್ಮ ದಿನಕರ್ ತೂಗುದೀಪ್ ಅವರೆ ನೀಡಿದ್ದಾರೆ. ಹೀಗಿದ್ದಾಗಲೆ, ಪುನೀತ್ ರಾಜಕುಮಾರ್ ಮಾಡಬೇಕಿದ್ದ ಸಿನಿಮಾ ಡಿ-ಬಾಸ್ ದರ್ಶನ್ ತೂಗುದೀಪ್...

Darshan Thoogudeepa to Star in Film Dedicated to Puneeth Rajkumar

ಪುನೀತ್ ರಾಜಕುಮಾರ್ ಮಾಡಬೇಕಿದ್ದ ಸಿನಿಮಾ...

ಅಪ್ಪು ಪುನೀತ್ ರಾಜಕುಮಾರ್ ಅವರು ಕನ್ನಡಿಗರನ್ನು & ಕೋಟಿ ಕೋಟಿ ಅಭಿಮಾನಿಗಳನ್ನ ಬಿಟ್ಟು ಹೋದ ನಂತರ, ಇಡೀ ಇಂಡಿಯಾದ ಸಿನಿಮಾ ಇಂಡಸ್ಟ್ರಿಯಲ್ಲೇ ನೀರವ ಮೌನವು ಆವರಿಸಿತ್ತು. ಹಾಗೇ ಅಪ್ಪು ಪುನೀತ್ ರಾಜಕುಮಾರ್ ಅವರು ಮಾಡಬೇಕಿದ್ದ ಹತ್ತಾರು ಸಿನಿಮಾ ಕೂಡ ನಿಂತು ಹೋದವು.

ಅದೇ ರೀತಿ ಅಪ್ಪು ಪುನೀತ್ ರಾಜಕುಮಾರ್ ಅವರ ಜೊತೆಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಮ್ಮ ದಿನಕರ್ ತೂಗುದೀಪ್ ಅವರು ಕೂಡ ಒಂದು ಸಿನಿಮಾ ಮಾಡಬೇಕಿತ್ತು. ಆದ್ರೆ ಆ ಸಿನಿಮಾ ನಿಂತು ಹೋಗಿತ್ತು. ಸ್ವತಃ ಕಥೆ & ಡೈರೆಕ್ಷನ್ ಮಾಡಲು ಕೂಡ ದರ್ಶನ್ ತೂಗುದೀಪ್ ಅವರ ತಮ್ಮ ದಿನಕರ್ ತೂಗುದೀಪ್ ಅವರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ಈಗ ಅಪ್ಪು ಪುನೀತ್ ರಾಜಕುಮಾರ್ ಮಾಡಬೇಕಿದ್ದ ಸಿನಿಮಾಗೆ ಡಿ-ಬಾಸ್ ದರ್ಶನ್ ತೂಗುದೀಪ್....

ಡಿ-ಬಾಸ್ ದರ್ಶನ್ ಜೊತೆ ದಿನಕರ್ ಸಿನಿಮಾ!

ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಒಂದು ಸಿನಿಮಾ ಮಾಡಲು ದಿನಕರ್ ತೂಗುದೀಪ್ ಅವರು ಡೇಟ್ ಪಡೆದಿದ್ದರು. ಸಿನಿಮಾ ಶುರು ಮಾಡಲು ಎಲ್ಲಾ ರೀತಿಯ ಸಿದ್ಧತೆಗಳು ಕೂಡ ಸಾಗಿದ್ದವು. ಇಂತಹ ಸಮಯದಲ್ಲೇ ದುರ್ಘಟನೆ ಸಂಭವಿಸಿತ್ತು, ಹೀಗಿದ್ದಾಗ ಅಪ್ಪು ಪುನೀತ್ ರಾಜ್‌ಕುಮಾರ್ ಅವರಿಗೆ ಬರೆದಿದ್ದ ಕಥೆ & ಸಿನಿಮಾ ಇದೀಗ ದರ್ಶನ್ ತೂಗುದೀಪ್ ಅವರಿಗೆ ಹೋಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಪದೇ, ಪದೇ ದಿನಕರ್ ತೂಗುದೀಪ್ ಅವರು ಕೂಡ ತಮ್ಮ ಅಣ್ಣ ಅಂದ್ರೆ ದರ್ಶನ್ ತೂಗುದೀಪ್ ಅವರ ಜೊತೆಗೆ ಸಿನಿಮಾ ಮಾಡ್ತೀನಿ ಅಂತಿದ್ದಾರೆ.

ಹೀಗೆ ದಿನಕರ್ ತೂಗುದೀಪ್ ಅವರು ದರ್ಶನ್ ತೂಗುದೀಪ್ ಅವರ ಜೊತೆಗೆ ಮಾಡಲಿರುವ ಆ ಸಿನಿಮಾ, ಅಪ್ಪು ಪುನೀತ್ ರಾಜ್‌ಕುಮಾರ್ ಅವರಿಗೆ ಬರೆದಿದ್ದ ಕಥೆ & ಸಿನಿಮಾ ಎನ್ನಲಾಗ್ತಿದೆ. ಅಂದಹಾಗೆ ಈ ಕುರಿತು ಇದೀಗ ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ, ಹೀಗಿದ್ದಾಗಲೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+